ಮೀಟರ್ ಬಡ್ಡಿ ಪೊಲೀಸ್ ಕಾರ್ಯಾಚರಣೆ ಸ್ವಾಗತ ಭಾರಧ್ವಾಜ್.

ಗಂಗಾವತಿ ಪೊಲೀಸರು ಇಂದು ದಿನಾಂಕ ೧೬ ರಂದು ಬೆಳಗಿನ ಜಾವ ಬೃಹತ್ ಕಾರ್ಯಾಚರಣೆ ಮಾಡಿ ಅಕ್ರಮ ಮೀಟರ್ ಬಡ್ಡಿಕೋರರನ್ನು ಬಂಧಿಸಿರುವುದು ಸ್ವಾಗತ. ಆದರೆ ತಿಮಿಂಗಲಗಳನ್ನು ಬಿಟ್ಟು ಸಣ್ಣ ಮೀನುಗಳನ್ನು ಹಿಡಿದಿರುವುದು ವಿಪರ್ಯಾಸವಾಗಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.ರೈತರ ಆತ್ಮಹತ್ಯೆಗಳಿಗೆ ಕಾರಣರಾಗುತ್ತಿರುವ ಹಳ್ಳಿಗಳಲ್ಲಿರುವ ಅಕ್ರಮ ಬಡ್ಡಿಕೋರರನ್ನು ನಿಯಂತ್ರಿಸಿದರೆ ಮಾತ್ರ ರೈತರ ಆತ್ಮಹತ್ಯೆಗಳು ನಿಲ್ಲುತ್ತವೆ. ಕಾರಟಗಿ, ಸಿದ್ದಾಪುರ, ಶ್ರೀರಾಮನಗರ, ಬಸಾಪಟ್ಟಣ ಮತ್ತು ಕನಕಗಿರಿಗಳಲ್ಲಿ ಇರುವ ಅಕ್ರಮ ಬಡ್ಡಿಕೋರರನ್ನು ಬಂಧಿಸಿದಾಗ ಮಾತ್ರ ಸರಕಾರ ರೈತರಿಗೆ ನ್ಯಾಯ ಕೊಟ್ಟಂತಾಗುತ್ತದೆ ಎಂದಿದ್ದಾರೆ. ಪೊಲೀಸ್ ಇಲಾಖೆ ಈಗ ಮಾಡಿರುವ ಕಾರ್ಯಾಚರಣೆಗೆ ತೃಪ್ತಿಪಟ್ಟು ಸುಮ್ಮನೆ ಕೂಡದೇ ತಾಲೂಕಾದ್ಯಂತ ಬಡ್ಡಿಕೋರರನ್ನು ನಿಯಂತ್ರಿಸಬೇಕಾಗಿದೆ. ಸಾಲಬಾಧಿತರ ಸಹಾಯಕ್ಕಾಗಿ ಸಾಲಬಾಧಿತರಿಗಾಗಿ ಆಶಾಕಿರಣ ಎಂಬ ಸಂಘಟನೆ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಸಾಲಬಾಧಿತರ ಸಹಾಯಕ್ಕಾಗಿ ಮೇಲ್ಕಾಣಿಸಿದ ಸಂಘಟನೆಗೆ ತಮ್ಮ ಕಷ್ಟಗಳನ್ನು ತಿಳಿಸಿದರೆ ಸಂಘಟನೆ ಕಾನೂನಿನ ಚೌಕಟ್ಟಿನಲ್ಲಿ ಸಾಲಬಾಧಿತರ ರಕ್ಷಣೆಗೆ ನಿಂತು ಬೆಂಬಲಿಸಲಿದೆ ಎಂದು ಸಿಪಿಐಎಂಎಲ್ ಪಕ್ಷ  ತಿಳಿಸಿದೆ.

Leave a Reply