ಆಶಾವಾದಿಯಾಗಿ ಬದುಕಬೇಕಾದ ಅಗತ್ಯವಿದೆ – ಪ್ರೊ. ಅರುಣ ಕರಮರಕಲ್

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪ್ರಥಮ ವಿದ್ಯಾರ್ಥಿಗಳಿಗೆ ಅಂತಿಮ ವಿದ್ಯಾರ್ಥಿಗಳಿಂದ ಸ್ವಾಗತಿಸುವ ಕಾರ್ಯಕ್ರಮ ಹಾಗೂ ಉಪನ್ಯಾಸಗಳು ಜರುಗಿದವು. ಇದರ ಜೊತೆಗೆ ಬಿ.ಕಾಂ ಪದವಿ ನಂತರದ ಅವಕಾಶಗಳೇನು? ಎಂಬ ವಿಶೇಷ ಉಪನ್ಯಾಸ ಜರುಗಿತು ಉಪನ್ಯಾಸಕರಾಗಿ  ಆಗಮಿಸಿ ಸಂಡೂರ ಪ್ರಾಧ್ಯಾಪಕರಾದ ಅರುಣ ಕರಮರಕಲ್ ಮಾತನಾಡುತ್ತಾ ಓದುವ ಹವ್ಯಾಸ, ಪರಿಶ್ರಮ, ಶ್ರದ್ಧೆ ,ವಿನಯತೆ ವಿದ್ಯಾರ್ಥಿಗಳಲ್ಲಿರಬೇಕು. ನಿರಾಸೆಯ ಭಾವನೆ ಇಟ್ಟುಕೊಳ್ಳದೇ ಆಶಾವಾದಿ

ಯಾಗಿ ಬದುಕಬೇಕಾದ ಅಗತ್ಯವಿದೆ ಎನ್ನುತ್ತಾ ಪದವಿ ನಂತರದ ಅವಕಾಶಗಳ ಕುರಿತು ಸಮಗ್ರವಾಗಿ ಮಾತನಾಡಿದರು.  ಮತ್ತೊಂದು ಉಪನ್ಯಾಸದಲ್ಲಿ ಸರ್ಕಾರದಿಂದ ದೊರಕುವ ವಿಧ್ಯಾರ್ಥಿವೇತನಗಳ ಪ್ರಾಮುಖ್ಯತೆಗಳು ಈ ವಿಷಯ ಕುರಿತು ಹಾಗೂ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡುತ್ತಾ ಪದವಿ ಹಂತದಲ್ಲಿಯೂ ಸರ್ಕಾರ ದೀನ-ದಲಿತರ, ಅಲ್ಪಸಂಖ್ಯಾತರ , ಹಿಂದೂಳಿದ  ವಿಧ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನ ನೀಡುತ್ತಿರುವದು ಶ್ಲಾಘನೀಯವಾದುದು. ಇದು ಅವರ ಓದಿನ ಆಕಾಂಕ್ಷೆಯನ್ನು ಹೆಚ್ಚಿಸುತ್ತದೆ ಎಂದರು. ವೇದಿಕೆಯಲ್ಲಿ  ಉಪನ್ಯಾಸಕರಾದ  ಮಹೇಶಮಮದಾಪುರ, ಪ್ರಭುರಾಜ ನಾಯಕ್, ಸುರೇಶ, ಡಿ. ಎಚ್.ನಾಯಕ್, ದ್ವಾರಕಾಸ್ವಾಮಿ,ರಾಘವೇಂದ್ರಾಚಾರ್, ವೀರಣ್ಣಸಜ್ಜನ, ರವಿಹಿರೇಮಠ, ಆಶೋಕ ವೈ, ಡಾ.ಪ್ರಕಾಶಬಳ್ಳಾರಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಸಾದ ಸೇವೆಯನ್ನು ರಮೇಶಬಳ್ಳಾರಿ ನೆರವೇರಿಸಿದರು.

Leave a Reply