ದತ್ತಿ ಪ್ರಶಸ್ತಿ

ಕೊಪ್ಪಳ  ಜೂನ್-೨೪, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಲೇಖಕರು ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮ. ನಿಂಗೋಜಿ ಗೌರವ ಕಾರ್ಯದರ್ಶಿಗಳಾದ ಅಕ್ಬರ ಸಿ. ಕಾಲಿಮಿರ್ಚಿ, ಶಿವಾನಂದ ಮೇಟಿ ಮತ್ತು ಗೌರವ ಕೋಶಾಧ್ಯಕ್ಷ ಆರ್.ಎಸ್. ಸರಗಣಾಚಾರಿ ಪತ್ರಿಕಾಹೇಳಿಕೆ ನೀಡಿ ಹರ್ಷ ವ್ಯಕ್ತ ಪಡಿಸಿದ್ದಾರೆ. 
ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಗೆ ಶಿ. ಕಾ. ಬಡಿಗೇರ ಅವರ ಅನುವಾದಿತ  ಕಥಾ ಸಂಕಲನ ‘ಕೊನೆ ಎಲೆ’ ಹಾಗೂ ನೀಲಗಂಗಾ ದತ್ತಿ ಪ್ರಶಸ್ತಿಗೆ ಶ್ರೀಮತಿ ಮಾಲಾ ಡಿ. ಬಡಿಗೇರ ಅವರ ಕವನ ಸಂಕಲನ ‘ಮೊದಲು ಮನಸುಕಟ್ಟಿ’ ಆಯ್ಕೆ ಗೊಂಡಿವ. 
ಬರುವ ಜುಲ ೨ ರಂದು  ಬೆಂಗಳುರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ  ಕೃಷ್ಣ ರಾಜ ಪರಿಷನ್ ಮಂದಿರದಲ್ಲಿ ಪ್ರಶಸಿ ಪ್ರದಾನ ಮಾಡಲಾಗುವದೆಂದು ಜಿಲ್ಲಾ ಕಸಾಪ  ತಿಳಿಸಿದೆ. 
Please follow and like us:
error