ಜಬ್ಬಲಗುಡ್ಡ: ರಸ್ತಾ ರೋಖ್ ಚಳುವಳಿ

ಕೊಪ್ಪಳ : ತಾಲೂಕಿನ ಜಬ್ಬಲಗುಡ್ಡ(ಕುಮ್ಮಟ ದುರ್ಗಾ) ದಲ್ಲಿ ದಿನಾಂಕ ೨೬-೧೧-೨೦೧೪ ರಂದು ಬೆಳಿಗ್ಗೆ ೧೦:೦೦ ಗಂಟೆಯಿಂದ ೧೧:೦೦ ಗಂಟೆಯವರೆಗೆ ರಾಜ್ಯ ಹೇದ್ದಾರಿ ಕೊಪ್ಪಳ ಮತ್ತು ಗಂಗಾವತಿ ಬಂದ್ ಮಾಡಲಾಯಿತು ಈ ಚಳುವಳಿಯ ನೇತೃತ್ವವನ್ನು ಕುಮ್ಮಟ ದುರ್ಗಾ ರಕ್ಷಣಾ ಸಮಿತಿ ಹಾಗೂ ಗಂಡುಗಲಿಕುಮಾರರಾಮ ಯುವಕ ಸಂಘ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು ಬೇಡಿಕೆಗಳು ಕುಮ್ಮಟ ದುರ್ಗಕ್ಕೆ  ಹೊಗುವ ರಸ್ತೆಯನ್ನು ಗಿಣಿಗೇರಿ ಮತ್ತು ಮೈಬೂಬನಗರ ರೈಲ್ವೆ ಕಾಮಗಾರಿಯವರು ಮಣ್ಣು ತೆಗೆದು ಹಾಳು ಮಾಡಿದ ರಸ್ತೆಯು ಅಭಿವೃದ್ದಿ ಮಾಡಬೇಕು ಮತ್ತು ಕುಮ್ಮಟದುರ್ಗಕ್ಕೆ  ಹೊಗುವ ಮುಖ್ಯದ್ವಾರ ಕಮಾನು ಬೋರ್ಡ ನಿರ್ಮಾಣ ಮಾಡಬೇಕು ಆನೆಗುಂದಿ ಮತ್ತು ಕನಕಗಿರಿ ಉತ್ಸವ ಆಚರಣೆ ಮಾಡುವಂತೆ ಸರ್ಕಾರವೇ ಕುಮಾರ ರಾಮನ ಉತ್ಸವ ಆಚರಿಸಬೇಕು. ಪುರಾತತ್ವ ಇಲಾಖೆಗೆ ಸೇರಿಸಬೇಕು. ಶಿಲಾಶಾಸನ ಮತ್ತು ಸ್ಮಾರಕಗಳನ್ನು ಒಂದು ಕಡೆ ಜೋಡಣೆ ಮಾಡಬೇಕು ಕುಮ್ಮಟದುರ್ಗ ರಕ್ಷಣಾ ಸಮಿತಿ ಅಧ್ಯಕ್ಷ ವೆಂಕಟೇಶ ಈಳಿಗೇರ ಹಾಗೂ ಗಂಡುಗಲಿ ಕುಮಾರರಾಮ ಯುವಕ ಸಂಘದ ಅಧ್ಯಕ್ಷ ಮಂಜುನಾಥ ಭೋವಿ ಮತ್ತು ಸರ್ವಾಜನಿಕರು ಒತ್ತಾಯಿಸಿದರು ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ ಕೊಪ್ಪಳ ರೈಲ್ವೆ ಎ.ಡಬ್ಲೂ ಅಧಿಕಾರಿ ರೈಲ್ವೆ ಇಂಜಿನೀಯರ ಡಿ,ವಾಯ್.ಎಸ್.ಪಿ ಸಿ.ಪಿ.ಐ ಸತೀಶ ಎಸ್ ಪಾಟೀಲ್ ಕೊಪ್ಪಳ, ಪಿ.ಎಸ್.ಐ ಯರಿಸ್ವಾಮಿ ಈಳಿಗೇರ ಮುನಿರಬಾದ್, ಪಿಡಿಒ ಗ್ರಾಮ ಪಂಚಾಯತ ಬುದಗುಂಪಾ ಇದ್ದರು  ಇವರು ಒಂದು ತಿಂಗಳಲ್ಲಿ ಅಭಿವೃದ್ದಿಪಡಿಸಲು ತಿಳಿಸಿದರು ಈ ರಸ್ತಾ ರೋಖ್ ಹಿಂಪಡೆಯಲಾಯಿತು.

Leave a Reply