fbpx

ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಅಭಿವೃದ್ಧಿ- ವಿಸಿದ್ದಪ್ಪ ವ್ಹಿ. ಮುದಗಲ್.

ಕೊಪ್ಪಳ-೧೮- ಸಹಕಾರ ಸಂಸ್ಥೆಗಳಲ್ಲಿ ಸುಧೀರ್ಘವಾದ ಇತಿಹಾಸವಿದ್ದು, ಸಹಕಾರ ಸಂಸ್ಥೆಗಳ ಸಾಧನೆ ಅಪಾರ. ಸಮಾಜದ ಎಲ್ಲಾ ರಂಗಗಳಲ್ಲಿ ಸಹಕಾರ ಸಂಸ್ಥೆಗಳು ಸ್ಥಾಪನೆಯಾಗಿ ಆರ್ಥಿಕವಾಗಿ ದುರ್ಬಲರಾದವರ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲ್ಯಾಘನೀಯ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ದೊರಕುತ್ತಿಲ್ಲ. ರೈತರಿಗೆ ಯೋಗ್ಯ ಬೆಲೆ ಕಲ್ಪಿಸುವುದರ ಸಲುವಾಗಿಯೇ ರಚನೆಯಾದಂತಹ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳು ರೈತರ ಬೆಳೆಗಳಿಗೆ ಯೋಗ್ಯ ಬೆಲೆಯನ್ನು ನೀಡಿ, ಉತ್ಪನ್ನಗಳನ್ನು ರೂಪಾಂತರ ಮಾಡಿ ಮಾರಾಟ ಮಾಡುವುದರ ಮೂಲಕ ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಗವಿಸಿದ್ದಪ್ಪ ಮುದಗಲ್ ರವರು ಮಾತನಾಡಿದರು.  
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ, ಕೊಪ್ಪಳ ಹಾಗೂ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಫ್ ಬ್ಯಾಂಕ್ ಲಿ., ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ೬೨ ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೧೫ರ ಕಾರ್ಯಕ್ರಮವನ್ನು ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಫ್ ಬ್ಯಾಂಕ್ ಲಿ., ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇದರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರ ಸಪ್ತಾಹದ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಂಡು ಸಹಕಾರ ಕ್ಷೇತ್ರದಿಂದ ಹೊರಗಿರುವ ಜನರಿಗೆ ಈ ಕ್ಷೇತ್ರದ ಸಾಧನೆಯನ್ನು ತಿಳಿಸುವ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಕ್ಷೇತ್ರವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸಬೇಕೆಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ, ಗವಿಸಿದ್ದೇಶ ಹೆಚ್. ಹುಡೇಜಾಲಿಯವರು ಮಾತನಾಡುತ್ತಾ ಸಹಕಾರ ಕ್ಷೇತ್ರಕ್ಕೆ ಸುಧೀರ್ಘ ಇತಿಹಾಸವಿದ್ದು, ಸಹಕಾರ ಸಂಘಗಳ ಸಾಧನೆ ಬಹಳ ಅಪಾರ. ಸಪ್ತಾಹವನ್ನು ರಾಜ್ಯದ ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಸಪ್ತಾಹದ ಆಚರಣೆ ಸರ್

ಕಾರ ಮತ್ತು ಸಹಕಾರ ಸಂಸ್ಥೆಗಳ ಪೂರ್ಣ ಬೆಂಬಲದೊಂದಿಗೆ ಯಶಸ್ವಿಯಾಗಿ ಆಚರಿಸಿ ಯುವಕರು ಸಹಕಾರ ಸಂಸ್ಥೆಯಲ್ಲಿ ಪಾಲ್ಗೊಳುವುದರ ಮೂಲಕ ಸಹಕಾರ ಕ್ಷೇತ್ರವನ್ನು ಬಲಪಡಿಸಬೇಕೆಂದು ಕರೆನೀಡಿದರು. ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ, ಎಲ್.ಬಿ. ವಿವೇಕಿ ಯವರು ಸಹಕಾರ ಸಪ್ತಾಹ ಆಚರಣೆಯ ಮೂಲ ಉದ್ದೇಶ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರಾದ, ತೋಟಪ್ಪ ಕಾಮನೂರು., ಅರ್ಬನ್ ಬ್ಯಾಂಕ್ ಉಪಾಧ್ಯಕ್ಷರಾದ, ಮಹೇಶ್ವರ ಕೊಂಡದಕಟ್ಟಿಮಠ., ಅರ್ಬನ್ ಬ್ಯಾಂಕಿನ ನಿರ್ದೇಶಕರುಗಳಾದ, ಗವಿಸಿದ್ದಪ್ಪ ತಳಕಲ್., ಬಸವರಾಜ ಶಹಪೂರ., ಸೈಯದ ದೌವಲತ್ ಶಿಕ್ಕಲಗಾರ., ವಿಶ್ವನಾಥ ಅಗಡಿ., ಶಿವರೆಡ್ಡಿ ಭೂಮಕ್ಕನವರ., ಶ್ರೀಮತಿ ಸುಮಂಗಲಾ ಸೋಮಲಾಪೂರ., ಶ್ರೀಮತಿ ಜಯಶ್ರೀ ದೇವರಡ್ಡಿ., ಗುರುರಾಜ ಹಲಗೇರಿ., ಬ್ಯಾಂಕ್ ಸಿ.ಇ.ಓ. ಉಮೇಶ ಚಕ್ಕಿ., ಟಾಕಾ ಉಪಾಧ್ಯಕ್ಷರಾದ, ಸೈಯದ ಖುದ್ದುಶಿದ್ಕಿ., ರಾಜು ಬಾಕಳೆ., ರಾಜು ಶೆಟ್ಟರ್., ಜಿಲ್ಲಾ ಸಹಕಾರ ಯೂನಿಯನ್ ಸಿ.ಇ.ಓ. ಶರಣಬಸಪ್ಪ ಕಾಟ್ರಳ್ಳಿ, ರಾಜಶೇಖರ ಎಂ. ಹೊಸಮನಿ, ಗವಿಸಿದ್ದಯ್ಯ ಎಸ್. ಹಿರೇಮಠ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶರಣಬಸಪ್ಪ ಕಾಟ್ರಳ್ಳಿಯವರು ಸಹಕಾರಿ ಮಾರುಕಟ್ಟೆ, ಸಂಸ್ಕರಣ ಮತ್ತು ಮೌಲ್ಯವರ್ಧನೆ ದಿನದ ಆಚರಣೆ ಕುರಿತು ಉಪನ್ಯಾಸ ನೀಡಿದರು. ಅತಿಥಿಗಳನ್ನು ಬ್ಯಾಂಕಿನ ನಿರ್ದೇಶಕರಾದ, ಸುಮಂಗಲಾ ಸೋಮಲಾಪೂರ. ಸ್ವಾಗತಿಸಿದರು. ಪಿ.ಎ. ಹಿರೇಮಠ. ವಂದಿಸಿದರು.

Please follow and like us:
error

Leave a Reply

error: Content is protected !!