ಎಸ್.ಎಸ್.ಎಲ್.ಸಿ. ಗಣಿತ ಪೂರಕ ಪರೀಕ್ಷೆ : ೧೨೫ ವಿದ್ಯಾರ್ಥಿಗಳು ಗೈರು

  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಸೋಮವಾರ ನಡೆದ ಗಣಿತ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೩೫೧ ವಿದ್ಯಾರ್ಥಿಗಳು ಹಾಜರಾಗಿದ್ದು, ೧೨೫ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಗಣಿತ ವಿಷಯಕ್ಕೆ ಬಾಲಕರು- ೮೯೨, ಬಾಲಕಿಯರು- ೫೮೪ ಸೇರಿದಂತೆ ಒಟ್ಟು ೧೪೭೬ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೮೧೮, ಬಾಲಕಿಯರು- ೫೩೩ ಸೇರಿದಂತೆ ಒಟ್ಟು ೧೩೫೧ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ೭೪-ಬಾಲಕರು, ೫೧- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೭೬೦ ವಿದ್ಯಾರ್ಥಿಗಳ ಪೈಕಿ ೭೦೩ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೪೫೯ ವಿದ್ಯಾರ್ಥಿಗಳ ಪೈಕಿ ೪೧೭, ಕುಷ್ಟಗಿ ತಾಲೂಕಿನಲ್ಲಿ ೧೨೧ ವಿದ್ಯಾರ್ಥಿಗಳ ಪೈಕಿ ೧೦೪, ಯಲಬುರ್ಗಾ ತಾಲೂಕಿನಲ್ಲಿ ೧೩೬ ವಿದ್ಯಾರ್ಥಿಗಳ ಪೈಕಿ ೧೨೭ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೫೭, ಗಂಗಾವತಿ- ೪೨, ಕುಷ್ಟಗಿ-೧೭ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೦೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Please follow and like us:
error