ಸಿಡಿಲು ಬಡಿದು ಮಹಿಳೆ ಸಾವು : ಮೃತರ ನಿವಾಸಕ್ಕೆ ಸೈಯ್ಯದ್ ಭೇಟಿ, ಸಾಂತ್ವಾನ


ಕೊಪ್ಪಳ,ಮೇ.೧೫: ತಾಲೂಕಿನ ತಿಗರಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಬಿರುಗಾಳಿ ಹಾಗೂ ಮಳೆಗೆ ತಿಗರಿ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಜರುಗಿದೆ.
ಸುದ್ದಿ ತಿಳಿದ ತಕ್ಷಣ ಮಂಗಳವಾರ ಬೆಳಿಗ್ಗೆ ಸೈಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಪಕ್ಷದ ಮುಖಂಡ ಕೆ.ಎಂ.ಸೈಯ್ಯದ್ ಭೇಟಿ ಮಾಡಿ ಸಾಂತ್ವಾನ ಹೇಳಿ ತಮ್ಮ ಫೌಂಡೇಶನ್ ವತಿಯಿಂದ ಸಹಾಯಧನ ಒದಗಿಸಿದರು. ನಂತರ ಸರ್ಕಾರ ಕೂಡ ಪರಿಹಾರ ಧನ ಒದಗಿಸಲು ಒತ್ತಾಯಿಸಲಾಗುವುದೆಂದು ಕೆ.ಎಂ.ಸೈಯ್ಯದ್ ಹೇಳಿದರು.
ಈ ಸಂದರ್ಭದಲ್ಲಿ ಬಿಎಸ್‌ಆರ್ ಪಕ್ಷದ ಮುಖಂಡ ಪ್ರಭುಗೌಡ ಪಾಟೀಲ್, ಗುಡದಪ್ಪ ಹಲಗೇರಿ ಸೇರಿದಂತೆ ಸೈಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ಮಳೆ, ಭಾರೀ ಬಿರುಗಾಳಿಗೆ ಮೇಲ್ಛಾವಣೆ ಕುಸಿತ : ಸೈಯ್ಯದ್ ಭೇಟಿ, ಪರಿಹಾರ ವಿತರಣೆ
  ತಾಲೂಕಿನ ಹನಕುಂಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಬಿರುಗಾಳಿ ಹಾಗೂ ಮಳೆಗೆ ಹನುಕುಂಟಿ, ತಿಗರಿ ಗ್ರಾಮಗಳಲ್ಲಿ ಮನೆಗಳ ಮೇಲ್ಛಾವಣೆ ಕುಸಿತ ತಗಡು ಹಾರಾಟದಿಂದ ಬೀದಿ ಪಾಲಾಗಿರುವ ಗ್ರಾಮಸ್ಥರ ಮನೆಗಳಿಗೆ ಸೈಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಪಕ್ಷದ ಮುಖಂಡ ಕೆ.ಎಂ.ಸೈಯ್ಯದ್ ಭೇಟಿ ಮಾಡಿ ಸಾಂತ್ವಾನ ಹೇಳಿ ತಮ್ಮ ಫೌಂಡೇಶನ್ ವತಿಯಿಂದ ಭಾರೀ ನಷ್ಟಕ್ಕೊಳಗಾದ ಕುಟುಂಬಗಳಿಗೆ ತಮ್ಮ ವತಿಯಿಂದ ಸಹಾಯಧನ ಒದಗಿಸಿಕೊಟ್ಟರು.
ನಂತರ ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ತಹಶೀಲ್ದಾರ್‌ರಿಗೆ ಮಾತನಾಡಿ, ಈ ಗ್ರಾಮಗಳಲ್ಲಿ ಭಾರೀ ಬಿರುಗಾಳಿಯಿಂದ ನಡೆದಿರುವ ದುರಂತ ನಷ್ಟದ ಬಗ್ಗೆ ಸರ್ಕಾರದಿಂದ ಪರಿಹಾರ ಒದಗಿಸಿಕೊಡುವಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್‌ಆರ್ ಪಕ್ಷದ ಮುಖಂಡ ಪ್ರಭುಗೌಡ ಪಾಟೀಲ್, ಗುಡದಪ್ಪ ಹಲಗೇರಿ ಸೇರಿದಂತೆ ಸೈಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಭಾರೀ ಬಿರುಗಾಳಿಯಿಂದ ಇಷ್ಟೊಂದು ನಷ್ಟ ಸಂಬಂಧಿಸಿದ ಇಲಾಖಾಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
Please follow and like us:
error