ಕೊಪ್ಪಳ,ಜು,೦೨-
ಮುಸ್ಲಿಂ ಸಮಾಜದ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ರೋಜದಾರ ಬಾಂಧವರಿಗೆ ಸಯ್ಯದ್
ಫೌಂಡೇಶನ್ ವತಿಯಿಂದ ಇಫ್ತಾರ ಕೂಟವನ್ನು ಕೊಪ್ಪಳ ನಗರದ ಪಂಜುಂ ಪಲ್ಟನ್ ಓಣಿಯಲ್ಲಿರುವ
ಪೀರಪಾಷಾ ಖಾದ್ರಿ ಮಸೀದಿಯ ಪಕ್ಕದಲ್ಲಿರುವ ದರ್ಗಾ ಆವರಣದಲ್ಲಿ ಇತ್ತಿಚಿಗೆ ಇಫ್ತಾರ
ಕೂಟವನ್ನು ಏರ್ಪಡಿಸಲಾಗಿತ್ತು.
ನಗರದ ವಿವಿಧ ಮಸೀದಿಗಳಿಂದ, ವಿವಿಧ ಓಣಿಗಳಿಂದ
ರೋಜದಾರ ಮುಸ್ಲಿಂ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ
ಸಂದರ್ಭದಲ್ಲಿ ಪಂಜುಂ ಪಲ್ಟನ್ ಪಂಚ್ ಕಮೀಟಿ ಹಾಗೂ ಪೀರ ಪಾಷಾ ಖಾದ್ರಿ ಮಸೀದಿ ಕಮೀಟಿ
ವತಿಯಿಂದ ಕೆ.ಎಂ.ಸಯ್ಯದ್ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ
ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ್ ಹಿಟ್ನಾಳ, ನಗರಸಭೆ ಮಾಜಿ ಅಧ್ಯಕ್ಷ
ಅಮ್ಜದ್ ಪಟೇಲ್, ಕಾಘ್ರೆಸ್ ವಕ್ತಾರ ಅಕ್ಬರ್ ಪಾಷಾ ಪಲ್ಟನ್, ಸಜ್ಜಾದ್ ಸಾಬ್ ಕವಲೂರ,
ಖಾದ್ರಿ ಸಾಹೇಬ, ಹಾಜಿ ಮಹೆಬೂಬ ಅಲಿ ಸಾಹೇಬ ಸೇರಿದಂತೆ ಅನೇಕರು ಈ ಇಫ್ತಾರ ಕೂಟದಲ್ಲಿ
ಪಾಲ್ಗೊಂಡಿದ್ದು ಸಹಸ್ರಾಸರು ಸಂಖ್ಯೆಯಲ್ಲಿ ರೋಜದಾರ ಬಾಂಧವರು ಪಾಲ್ಗೊಂಡು ಇಫ್ತಾರ ಕೂಟ
ಕಾರ್ಯಕ್ರಮ ಯಶಸ್ವಿಗೊಳಿಸಿದರು.
ರಂಜಾನ್ ಪ್ರಯುಕ್ತ ಕೆ.ಎಂ.ಸಯ್ಯದ್ರಿಂದ ಇಫ್ತಾರ ಕೂಟ ಯಶಸ್ವಿ.
Leave a Reply
You must be logged in to post a comment.