ಸ್ವಚ್ಛ ಭಾರತ ಯೋಜನೆ ಯಶೋಗಾಥೆ ಸೆ. ೦೪ ರಂದು ಚಂದನದಲ್ಲಿ ಪ್ರಸಾರ.

 ಕೊಪ್ಪಳ
ಸೆ. ೦೩ (ಕ ವಾ) ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಕೊಪ್ಪಳ ಜಿಲ್ಲೆಯ
ಹುಲಿಗಿ, ನಿಂಗಾಪುರ ಹಾಗೂ ವಿವಿಧ ಗ್ರಾಮದಲ್ಲಿನ ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣ
ಹಾಗೂ ಕಸ ವಿಲೇವಾರಿಯಲ್ಲಿನ ಉತ್ತಮ ಸಾಧನೆ ಕುರಿತ ಯಶೋಗಾಥೆ ಸೆ. ೦೪ ರಂದು ಸಂಜೆ ೬
ಗಂಟೆಯಿಂದ ೬-೩೦ ರವರೆಗೆ ದೂರದರ್ಶನದ  ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.
    
ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ರಮದ ವೀಕ್ಷಣೆ ಮಾಡಬೇಕು.  ಹಾಗೂ ಜಿಲ್ಲೆಯನ್ನು
ಬಯಲು ಶೌಚ ಮುಕ್ತವನ್ನಾಗಿಸಲು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.
Please follow and like us:
error