ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ-ಸ್ಮರಣ ಸಂಚಿಕೆ ಬಿಡುಗಡೆ

ಶ್ರೀ ಗವಿಸಿಧ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ:೧೯-೦೯-೨೦೧೪ ರಂದು ಮುಂಜಾನೆ ೧೦.೨೦ ಗಂಟೆಗೆ, ೨೦೧೪-೧೫ ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಹಾಗೂ ೨೦೧೩-೧೪ ರ ಕಾಲೇಜ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು. 
ಕಾರ್ಯಕ್ರಮವು, ಕು.ಮಹಾಲಕ್ಷ್ಮಿ ರಾಠೋಡ ಅವರಿಂದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯ್ತು. ನಂತರ ಈ ವರ್ಷದ ವಿದ್ಯಾರ್ಥಿ ಒಕ್ಕೂಟದ ಕಾರ್ಯಾದ್ಯಕ್ಷರಾದ ಪ್ರಾ. ಎಂ.ಎಸ್.ಬಾಚಲಾಪೂರ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ  

ಸವರಾಜ ಆಕಳವಾಡಿ, ನಿವೃತ್ತ ಜಿಲ್ಲಾ ವಾರ್ತಾ ಮತ್ತು ಪ್ರಸಾರ ಆಧಿಕಾರಿಗಳು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಜಾನಪದ ಪರಂಪರೆ ಇತ್ತೀಚಿನ ದಿನಗಳಲ್ಲಿ ನಶಿಸಿಹೋಗುತ್ತಿದ್ದರೂ ಸಹ, ಅದರ ಮಹತ್ವವನ್ನು ಅದರಲ್ಲಿ ಅಡಗಿರುವ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವದರ ಕುರಿತು ಮಾತನಾಡಿದರು. ಹಾಗೆಯೇ, ವಿದ್ಯಾರ್ಥಿಗಳು, ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಕೊಟ್ಟರು. ಅದರಂತೆ, ವಿದ್ಯರ್ಥಿಗಳು ಪತ್ರಿಕೆಗಳೊಂದಿಗೆ ಸದಾ ಸಂಪರ್ಕ ಇಟ್ಟುಕೊಂಡು, ತಮ್ಮ ಊರಿನ ಸಮಸ್ಯಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕಾಲೇಜ ಆಡಳಿತಾಧಿಕಾರಿಗಳಾದ ಡಾ.ಆರ್. ಮರೆಗೌಡಾ, ಅವರು ’ಕಾಲೇಜ ಸ್ಮರಣಸಂಚಿಕೆ’ಯನ್ನು ಬಿಡುಗಡೆ ಮಾಡುತ್ತ, ಮಾತನಾಡಿ, ವಿದ್ಯಾರ್ಥಿಗಳು ಬರೆದ ವೈವಿದ್ಯಮಯ ಲೇಖನಗಳನ್ನು ಪ್ರಶಂಸಿಸಿ, ಇದು ವಿದ್ಯಾರ್ಥಿಗಳಿಗೆ ದೊರೆತ ಒಂದು ಮಹತ್ವದ ಅವಕಾಶವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬರೆಯುವ ಅಭಿರುಚಿಯನ್ನು ಬೆಳೆಸಿಕೊಳ್ಳುವುದು ಉತ್ತಮ ಗುಣವೆಂದು ಸೂಚಿಸಿದರು. ಹೀಗೆ ದಾಖಲಿಸಿದ ಲೇಖನಗಳು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಅವಿಸ್ಮರಣೀಯ ಕ್ಷಣಗಳಾಗುತ್ತವೆ ಎಂದು ನೆನಪಿಸಿಕೊಟ್ಟರು. 
ಕಾರ್ಯಕ್ರಮದ ಅದ್ಯಕ್ಷತೆಯ ಸ್ಥಾನದಿಂದ, ಕಾಲೇಜ ಪ್ರಾಂಶುಪಾಲರಾದ ಪ್ರಾ. ಎಸ್.ಎಲ್. ಮಾಲಿಪಾಟಿಲರು, ಆಯ್ಕೆಯಾದ ವಿದ್ಯಾರ್ಥಿಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಕಾರ್ಯದರ್ಶಿಗಳು ವೈಯಕ್ತಿಕ ಗುಣಮಟ್ಟದ ಸಾಧನೆಗಳನ್ನು ಮಾಡುವುದರ ಜೊತೆಗೆ, ಕಾಲೇಜಿನಲ್ಲಿ ತಮ್ಮ ವರ್ಗದ ವಿದ್ಯಾರ್ಥಿಗಳಿಂದ ಸಹಕಾರ ಪಡೆದುಕೊಂಡು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಲೇಜಿನ ಘನತೆ, ಗೌರವವನ್ನು ಹೆಚ್ಚಿಸುವಂತೆ, ಶೃದ್ದಾಪೂರ್ವಕವಾಗಿ ಎಲ್ಲ ಚಟುವಟಿಕೆಗಳನ್ನು ಕೈಕೊಳ್ಳಬೇಕೆಂದು ಸೂಚಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ, ವಿದ್ಯಾರ್ಥಿ ವಕ್ಕೂಟದ ಸಹ-ಕಾರ್ಯದ್ಯಕ್ಷರಾದ ಪ್ರಾ. ಎನ್.ಪ್ರತಾಪಬಾಬುರವರು, ವಂದನಾರ್ಪನೆ ನೆರವೇರಿಸಿದರು.
ಈ ಎಲ್ಲ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಪ್ರಾ.ಶರಣಬಸಪ್ಪ ಬಿಳಿಯಲೆಯವರು ನಿರ್ವಹಿಸಿದರು.
Please follow and like us:

Related posts

Leave a Comment