ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

ದಿನಾಂಕ ೧೨.೧೨.೧೪ ರಂದು ಬಾಲಕರ ಸ.ಪ.ಪೂ ಕಾಲೇಜಿನಲ್ಲಿ ’ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾಗಿ ಗಂಗಾವತಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ’ ಭೋಲಾ ಪಂಡಿತ್’ ರವರು ಆಗಮಿಸಿದ್ದರು. ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಬೇಕಾಗಿದೆ. ಕಾನೂನುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ ಉದಾಹರಣೆಗಳು ಸಾಕಷ್ಟಿವೆ. ಸರ್ಕಾರಿ ಸೇವೆ ಯಲ್ಲಿರುವ ನೌಕರರು ತಮ್ಮ ಜನ್ಮ ದಿನಾಂಕ ಮತ್ತು ಜಾತಿ ಪ್ರಮಾಣ ಪತ್ರದ ಸಮಸ್ಯೆ ನಿವಾರಿಸಿಕೊಳ್ಳಲು ಕಾನೂನಿನಲ್ಲಿ ಅದಕ್ಕೆ ಸುಲಭೋಪಾಯಗಳಿವೆ. ಆದರೆ ಅದನ್ನು ಅರಿಯದೆ ತೊಂದರೆ ಎದುರಿಸುವ ಸ್ಥಿತಿ ಉಂಟಾಗಿದೆ ಎಂದು ಹೇಳುತ್ತಾ ಮತ್ತೆ ಮತ್ತೆ ಈ ತರಹದ ಕಾರ್ಯಕ್ರಮಗಳು ಸಮಾಜದಲ್ಲಿ ಅದರಲ್ಲಿಯೂ ವಿದ್ಯಾರ್ಥಿ ಸಮುದಾಯದ ಎದುರು ನಡೆಯಬೇಕಿದೆ ಎಂದರು. ’ಮೋಟಾರು ವಾಹನ ಕಾಯ್ದೆ’ ಮತ್ತು ’ಜನನ ಮರಣ ಪ್ರಮಾಣ’ ಪತ್ರ ಕುರಿತು ಉಪನ್ಯಾಸ ನೀಡಿದ ವಕೀಲರಾದ  ವಿ.ಎನ್ ಪಾಟೀಲರು, ವಿದ್ಯಾಥಿಗಳು ಈ ಎರಡು ಕಾನೂನುಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಎಲ್ಲ ವಾಹನಗಳನ್ನು ಚಲಾಯಿಸುವ ವಿದ್ಯಾರ್ಥಿ ಯುವಕರು ಡ್ರೈವಿಂಗ್ ಲೈಸನ್ಸ್ ಹೊಂದಿರುವುದೇ ಇಲ್ಲ. ಜನನ ಮರಣ ಪ್ರಮಾಣ ಪತ್ರಗಳು ಶಾಲೆ, ಕಾಲೇಜು, ನೌಕರಿ, ಆಸ್ತಿ ನೊಂದಣಿಯಂತಹ ಸಮಯದಲ್ಲಿ ಬಹಳ ಪ್ರಮುಖವಾಗಿರುತ್ತವೆ. ಇಂತಹ ಪ್ರಮಾಣ ಪತ್ರಗಳನ್ನು ಹೇಗೆ ಪಡೆಯಬೇಕು ಎಂದು ತಿಳಿಯದೆ ಮೋಸಹೋಗುತ್ತಾರೆ. ಹಾಗಾಗಿ ಕಾನೂನು ಅರಿವು ಕಾರ್ಯಕ್ರಮ ಈ ನಿಟ್ಟಿನಲ್ಲಿ ಉಪಯೋಗವಾಗಲಿದೆ ಎಂದು ಹೇಳುತ್ತಾ ಮಕ್ಕಳನ್ನು ಉದಾಹರಣೆಗಳ ಮೂಲಕ ಎಚ್ಛರಿಸಿದರು. ಕಾಯಕ್ರಮದಲ್ಲಿ ಅಥಿತಿಗಳಾಗಿ ಉಪಪ್ರಾಚಾರ್ಯರಾದ   ಯಲ್ಲಪ್ಪ ಹುಬ್ಬಳ್ಳಿ, ವಕೀಲರ ಸಂಘದ ಅಧ್ಯಕ್ಷರಾದ   ನಾಗರಾಜ ಜವಳಿ, ಉಪಾಧ್ಯಕ್ಷರಾದ   ಶರಣಯ್ಯ ಸ್ವಾಮಿ, ಹಾಗು ಕಾರ್ಯದರ್ಶಿಗಳಾದ ಶ್ರೀ ಹೆಚ್ ಸಿ ಯಾದವ್ ಭಾಗವಹಿಸಿದ್ದರು. 
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ  ಭೋಲಾ ಪಂಡಿತ್ ರವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು. ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಪ್ರಾಚಾರ್ಯರಾದ   ಲಕ್ಷ್ಮಣ ವಡಿಕಿ ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ಈ ತರಹದ ಕಾರ್ಯಕ್ರಮ ನಡೆಸಲು ಉದ್ಘಾಟಕರಾಗಿ ಬಂದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ  ಬೋಲಾ ಪಂಡಿತ್ ರವರಿಗೆ ಹಾಗೂ ವಕೀಲರ ಸಂಘದ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಾ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯ ಹೆಚ್ಚುತ್ತದೆ ಹಾಗು ಅಪರಾಧ ಮನೋಭಾವ ಕಡಿಮೆಯಾಗುತ್ತದೆ ಎಂದು ಹೇಳಿದರು. ಹಿರಿಯ ಉಪನ್ಯಾಸಕರಾದ   ಅನಿಲ್‌ಕುಮಾರ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಲಲಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅರುಣಾ ಮಣ್ಣೂರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ.ಪಾರ್ವತಮ್ಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗುಪ್ರೌಢ ಶಾಲಾ ವಿಭಾಗದ ಎಲ್ಲ ಶಿಕ್ಷಕರು ಭಾಗವಹಿಸಿದ್ದರು.
Please follow and like us:
error

Related posts

Leave a Comment