ಹೋರಾಟವನ್ನು ಬೆಂಬಲಿಸಲು ದಲಿತ ಹಾಗೂ ಪ್ರಗತಿಪರ ಸಂಘಟನೆಗಳಲ್ಲಿ ಮನವಿ

ದಲಿತ ಮಹಿಳಾ ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಲು ದಲಿತ ಹಾಗೂ ಪ್ರಗತಿಪರ ಸಂಘಟನೆಗಳಲ್ಲಿ ಮನವಿ.
ದಿ ೦೪ ರಂದು ಗಂಗಾವತಿ ನಗರಸಭೆಯವರು ಮುನ್ಸೂಚನೆ ನೀಡದೇ ೪೨ ಜನ ಮಹಿಳಾ ಪೌರ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುತ್ತಾರೆ. ಕಾರ್ಮಿಕರಿಗೆ ೪ ತಿಂಗಳಿನಿಂದ ವೇತನ ನೀಡಿರುವುದಿಲ್ಲ. ದಲಿತ ಮಹಿಳಾ ಕಾರ್ಮಿಕರಿಗೆ ಆದ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಗಂಗಾವತಿ ತಾಲೂಕಿನ ದಲಿತ ಸಂಘಟನೆಗಳ ಮುಖಂಡರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಸೋಮವಾರ ದಿನಾಂಕ ೦೯-೦೨-೨೦೧೫ ರಂದು ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಬೇಕೆಂದು ಕರ್ನಾಟಕ ಸಾಮಾನ್ಯ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷ ಖಾದರಭಾಷಾ ಮನವಿ ಮಾಡಿದ್ದಾರೆ.
ನಾಲ್ಕು ದಿನಗಳಿಂದ ಧರಣಿ ನಡೆದರೂ ಯಾವುದೇ ಅಧಿಕಾರಿಗಳು ಮಧ್ಯೆಪ್ರವೇಶಿಸಿ ಮಹಿಳಾ ಕಾರ್ಮಿಕರಿಗೆ ನ್ಯಾಯ ಕೊಡಿಸಿಲ್ಲ. ನಗರಸಭೆಯಲ್ಲಿ ದುಡಿಯುತ್ತಿರುವ ಎಲ್ಲಾ ಗುತ್ತಿಗೆ ಕಾರ್ಮಿಕರು ಮತ್ತು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲಿಸಬೇಕೆಂದು ಕೆ.ಜಿ.ಎಲ್.ಯು. ಸಂಘಟನೆ  ಮನವಿ ಮಾಡಿದೆ.
Please follow and like us:
error