fbpx

ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಚೇತನ ಕವನ ಸಂಕಲನ ಲೋಕಾರ್ಪಣೆ ಸಮಾರಂಭ

ಕೊಪ್ಪಳ :

 ನಗರದ ಪಾನಘಂಟಿ ಕಲ್ಯಾಣ ಪಂಟಪದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಚೇತನ ಕವನ ಸಂಕಲನ ಸಮಾರಂಭದ ಉದ್ಘಾಟನೆಯನ್ನು ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿಯವರು ನೆರವೆರಿಸಿದರು. ಈಶ್ವರಿ ವಿಶ್ವವಿದ್ಯಾಲಯ ನಿಡುತ್ತಿರುವ ನಿಸ್ವಾರ್ಥ ಸೇವೆಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

        ಭಾರತೀಯ ಪರಂಪರೆಯಲ್ಲಿ ಮಹಿಳೆಯರನ್ನು ಮಹಿಳೆಯನ್ನು ತಾಯಿಯನ್ನಾಗಿ ಪೂಜೆ ಭಾವನೆಯಿಂದ ನೋಡಲಾಗುತ್ತಿದೆ. ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ನೀಡುವ ಮಾನವೀಯ ನೈತಿಕ ಆಧ್ಯಾತ್ಮೀಕ ಶಿಕ್ಷಣ ಮಹಿಳೆಯನ್ನಷ್ಟೆ ಅಲ್ಲದೇ ಮನುಕುಲವನ್ನು ಸಶಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾತೆಯಿಂದ ಮನೆಯ ಕಲ್ಯಾಣ ಮಾತ್ರವಲ್ಲ ವ್ಯಕ್ತಿ ಸಮಾಜ ದೇಶದ ಕಲ್ಯಾಣವು ಆಗುತ್ತದೆ. ಆದ್ದರಿಂದ ವಂದೇ ಮಾತರಂ ಎಂಬ ವಾಕ್ಯ ಭಾರತದಲ್ಲಿ ಪ್ರಸಿದ್ದವಾಗಿದೆ. ಈಶ್ವರೀ ವಿಶ್ವವಿದ್ಯಾಲಯದಲ್ಲಿ ಸ್ವಯಂ ಪರಮಾತ್ಮನೆ ಮಾತೆಯರಿಗೆ ಪ್ರಮುಖ ಸ್ಥಾನ ನೀಡಿದ್ದಾರೆ ಎಂದು ಡಾ.ಬಿ.ಕೆ ವಾದಿರಾಜ ಭಟ್‌ರವರು ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಚೇತನ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ವಿಶ್ವ ಚೇತನ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವಿ.ಬಿ.ರಡ್ಡೆರ ಪ್ರಾಂಶಪಾಲರು ಮಾತನಾಡುತ್ತ ಈಶ್ವರೀ ವಿಶ್ವವಿದ್ಯಾಲಯ ಸರ್ವ ಧರ್ಮಗಳ ಸಾಮರಸ್ಯವನ್ನು ಸಾಧಿಸುತ್ತದೆ. ಸ್ತ್ರೀ ಪುರುಷರೊಳಗಿನ ಅಸಮಾನತೆಯನ್ನು ದೂರ ಮಾಡುತ್ತದೆಂದು ಹೇಳಿದರು. ಈಶ್ವರೀ ವಿಶ್ವವಿದ್ಯಾಲಯದ ಸಂಚಾಲಕಿ ಭ್ರಹ್ಮ ಕುಮಾರಿ ಯೋಗಿನಿ ಅಕ್ಕನವರು ಈಶ್ವರೀ ಸಂದೇಶವನ್ನು ನೀಡುತ್ತ ಮನಸ್ಸಿನ ಶಾಂತಿ ನೆಮ್ಮದಿಗೆ ಆದ್ಯಾತ್ಮಿಕ ಜ್ಞಾನ ಮೆಡಿಟೆಶನ್ ಜೀವನದ ಒಂದು ಭಾಗ ಆಧ್ಯಾತ್ಮ ಮತ್ತು ವಿಜ್ಞಾನ ಎರಡು ಸೇರಿದಾಗ ನಾವು ಜೀವನದಲ್ಲಿ ಯಶಸ್ಸನ್ನು ಹೊಂದಲು ಸಾದ್ಯ ಮಹಿಳೆಯ ಸಶಕ್ತರಾಗಲು ಆಧ್ಯಾತ್ಮಿಕ ಶಕ್ತಿ ಬೇಕೆ ಬೇಕು ಮೂಲತಃ ಮಹಿಳೆಯರಲ್ಲಿ ನ್ಯಾಚುರಲ್ ಆಗಿ ತ್ಯಾಗ ಸಹನೆ ಶಾಂತಿ ತಾಳ್ಮೆ ಹೊಂದಿಕೊಂಡು ಹೋಗುವ ಗುಣ ಇದೆ ಇದರ ಜೊತೆಗೆ ಮನೋ ಬಲ ಇಚ್ಛಾಶಕ್ತಿಯನ್ನು ವೃದ್ದಿಸಿಕೊಳ್ಳಲು ಮೆಡಿಟೆಶನ್ ಅತಿ ಅವಶ್ಯಕ ಆದ್ದರಿಂದ ದಿನಾಂಕ ; ೧೦/೦೩/೨೦೧೫ ರಿಂದ ೨೦/೦೩/೨೦೧೫ ರವರೆಗೆ ಪ್ರತಿದಿನ ಬೆಳಿಗ್ಗೆ ೬:೦೦ ರಿಂದ ೭:೦೦ ಗಂಟೆ ಸಾಯಂಕಾಲ ೬:೦೦ ರಿಂದ ೭:೦೦ ರವರೆಗೆ ರಾಜಯೋಗ ಶಿಬಿರವನ್ನು ಆಯೋಜಿಸಲಾಗಿದೆ ಸರ್ವರೂ ಇದರ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.    
      ಈ ಸಂದರ್ಭದಲ್ಲಿ ಬಿ.ಕೆ.ಸಂಗಪ್ಪ ವಟಪರವಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಮತಿ ಸರ್ವಮಂಗಳ ಗುರುವನಗೌಡ ಪಾಟೀಲ್, ಶ್ರೀಮತಿ ರಚನಾ ರಾಘವೇಂದ್ರ ಹಿಟ್ನಾಳ, ಶ್ರೀಮತಿ ಮಾದವಿ ಗುಪ್ತ ಇನರವಿಲ್, ಶ್ರೀಮತಿ ಕವಿತಾ, ಶೋಭಾ, ಜಿಲ್ಲಾ ವಾರ್ತಾ ಪತ್ರಿಕೆಯ ಜಿ.ಎಸ್ ಗೋನಾಳ, ಶ್ರೀ ಎಮ್.ವಾಲ್ಮೀಕಿ, ಕಲ್ಲನಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಗಿನಿಅಕ್ಕನವರು ನೀರೂಪಿಸಿದರು. 
Please follow and like us:
error

Leave a Reply

error: Content is protected !!