ರಸ್ತೆ ಅಗಲೀಕರಣದಲ್ಲಿ ತಾರತಮ್ಯವಿಲ್ಲ : ಪೌರಾಯುಕ್ತ ಮನೀರ್ ಮಹಮದ್

ಹೊಸಪೇಟೆ: ರಸ್ತೆ ಅಗಲೀಕರಣ ನಡೆಸುವಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಹಂತ ಹಂತವಾಗಿ ಎಲ್ಲಾ ಕಡೆ ರಸ್ತೆ ಅಗಲೀಕರಣ ನಡೆಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮುನೀರ್ ಮಹಮದ್ ಹೇಳಿದರು.
ನಗರಸಭೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, ವಾಲ್ಮೀಕಿ ವೃತ್ತದಿಂದ ರಾಮಾಟಾಕೀಸ್ ವೃತ್ತದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಈಗಾಗಲೇ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ೭೦ ಅಡಿ ರಸ್ತೆ ಅಗಲೀಕರಣ ನಡೆಸಲು ಎಲ್ಲಾ ಯೋಜಿಸಲಾಗಿದೆ. ಈ ಹಂತದಲ್ಲಿ ಈ ಕಾಮಗಾರಿ ನಿಲ್ಲಿಸಲು ಆಗುವುದಿಲ್ಲ ಎಂದರು. ಜಾಗೃತ ನಾಯಕ ಬಳಗ ಹಾಗೂ ವಿಜಯನಗರ ರಕ್ಷಣಾ ವೇದಿಕೆಯು ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ದೊಡ್ಡಮಸೀದಿ, ಉದ್ಯೋಗ ಪೆಟ್ರೂಲ್ ಬಂಕ್‌ವರೆಗೆ ರಸ್ತೆ ಅಗಲೀಕರಣ ಮೊದಲಾಗಬೇಕೆಂದು ಹೋರಾಟ ನಡೆಸಿದ್ದಾರೆ. ಈ ರಸ್ತೆಯ ಅಗಲೀಕರಣ ನಡೆಯುವುದು ನಿಶ್ಚಿತವಾಗಿದೆ. ಅದು ಈ ಹಂತದಲ್ಲಿ ನಡೆಯುವುದಿಲ್ಲ. ಮುಂದಿನ ಹಂತದ ಯೋಜನೆಯು ಇದಾಗಿದೆ. ಈ ಕುರಿತು ಶಾಸಕರ ನಾಯಕತ್ವದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಮೇಲಿನ ಎರಡು ಸಂಘಟನೆಗಳ ಮುಖಂಡರ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು. 
Please follow and like us:
error