ಹಿಟ್ನಾಳ ಹಾಗೂ ಮಂಗಳೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರವೇಶಾತಿ.

ಕೊಪ್ಪಳ: ಕೊಪ್ಪಳ ತಾಲೂಕಿನ ಹಿಟ್ನಾಳ ಹಾಗೂ ಯಲಬುಗಾ ತಾಲೂಕಿನ ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಪದವಿ ತರಗತಿಗಳಿಗೆ ಪ್ರವೇಶ ಆರಂಭವಾಗಿದ್ದು ಆಯಾ ಹೋಬಳಿಗಳಲ್ಲಿ ಬರುವ  ವಿದ್ಯಾರ್ಥಿಗಳು ಅಲ್ಲಿನ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಪ್ರವೇಶಾತಿ ಪಡೆಯಬೇಕು. ಏಕೆಂದರೆ ಬಹು ದಿನಗಳ ಬೇಡಿಕೆಯನ್ನು ಅರಿತು ಸರ್ಕಾರ  ಪದವಿ ಕಾಲೇಜುಗಳನ್ನು ಆರಂಭಿಸಿದೆ.ಜೊತೆಗೆ  ಕಟ್ಟಡ. ಪೀಠೋಪಕರಣ, ಗ್ರಂಥಾಲಯ ಹಾಗೂ ಅಧ್ಯಾಪಕರನ್ನು ಸಹ ಕಾಲೇಜು ಶಿಕ್ಷಣ ಇಲಾಖೆ ನೀಡಿದೆ. ಹೀಗಿರುವಾಗ  ವಿದ್ಯಾಥಿಗಳು ಬೇರೆಡೆಗೆ ಹೋಗುವ ಅಗತ್ಯವಿಲ್ಲ ಕೂಡಲೇ ಪ್ರವೇಶಾತಿ ಪಡೆಯಬೇಕೆಂದು ಹಿಟ್ನಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಗವಿಸಿದ್ದಪ್ಪ ಮುತ್ತಾಳ ಹಾಗೂ ಮಂಗಳೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಡಿ.ಎಚ್ ನಾಯಕ್ ತಿಳಿಸಿದ್ದಾರೆ.
Please follow and like us:
error