fbpx

ಪತ್ರಕರ್ತರ ಮೇಲೆ ಹಲ್ಲೆ ತಡೆಗಟ್ಟಲು ಸೂಕ್ತ ಕಾನೂನು ರೂಪಿಸಬೇಕು :

 ಇತ್ತಿಚೆಗೆ ಪತ್ರಕರ್ತರ ಹಾಗೂ ಛಾಯಾಗ್ರಾಹಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಭದ್ರತೆ ಇಲ್ಲದಂತಾಗಿದೆ. ಈ ಹಿಂದೆ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತಂದಿರುವಂತೆ ಮಾಧ್ಯಮ ಪ್ರತಿನಿಽಗಳ ಮೇಲೆ ನಡೆಯುವ ಹಲ್ಲೆಯಂಥ ಪ್ರಕರಣಗಳನ್ನು ತಡೆಗಟ್ಟಲೂ ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕೊಪ್ಪಳ ಮೀಡಿಯಾ ಕ್ಲಬ್‌ನ ಅಧ್ಯಕ್ಷ ಸೋಮರಡ್ಡಿ ಅಳವಂಡಿ ತಿಳಿಸಿದರು.
        ಹುಬ್ಬಳ್ಳಿ-ಧಾರವಾಡದ ಸಂಯುಕ್ತ ಕರ್ನಾಟಕದ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿಯವರ ಮೇಲೆ ಧಾರವಾಡ ಶಾಸಕ ವಿನಯ ಕುಲಕರ್ಣಿ ಬೆಂಬಲಿಗರು ಹೋಳಿ ಸಂದರ್ಭದಲ್ಲಿ ನಡೆಸಿದ ಹಲ್ಲೆ ಖಂಡಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಖಂಡನೆ, ಪ್ರತಿಭಟನೆ, ಮನವಿ ನೀಡುವುದು ಕೇವಲ ಬೆಂಬಲಕ್ಕೆ ನಾವಿದ್ದೇವೆ ಎನ್ನುವುದಾಗಿದೆ. ಪ್ರತಿಸಲವೂ ಇದೇ ರೀತಿ ಖಂಡಿಸುವುದಕ್ಕಿಂತ ಹಲ್ಲೆಯಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಾದರೆ ಕಾನೂನು ರಚನೆ ಅಗತ್ಯ ಎಂದು ಹೇಳಿದರು.
         ಹಲ್ಲೆಗೊಳಗಾದ ರಾಮಚಂದ್ರ ಕುಲಕರ್ಣಿ ಬೇಗನೇ ಚೇತರಿಸಿಕೊಳ್ಳಲಿ. ಅವರ ವೈದ್ಯಕೀಯ ವೆಚ್ಚವನ್ನು ಶಾಸಕ ವಿನಯ ಕುಲಕರ್ಣಿ ಭರಿಸುವಂತಾಗಲಿ ಹಾಗೂ ರಾಜ್ಯ ಸರಕಾರ ವಿನಯ ಕುಲಕರ್ಣಿಯವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲಿ ಎಂದು ಆಗ್ರಹಿಸಿದ ಮನವಿಯನ್ನು ಜಿಲ್ಲಾಽಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಭಾಪತಿಗಳಿಗೆ ಸಲ್ಲಿಸಲಾಯಿತು.
        ಈ ಸಂದರ್ಭದಲ್ಲಿ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ, ಗಂಗಾಧರ ಬಂಡಿಹಾಳ, ಮೌನೇಶ ಬಡಿಗೇರ, ಅಶೋಕಕುಮಾರ್, ನಾಭಿರಾಜ್ ದಸ್ತೇಣವರ್, ಮಾರುತಿ ಕಟ್ಟಿಮನಿ, ಸಂತೋಷ ದೇಶಪಾಂಡೆ, ಬಸವರಾಜ ಬಿನ್ನಾಳ, ತಿಪ್ಪನಗೌಡ ಪಾಟೀಲ್, ಬಸವರಾಜ ಕರುಗಲ್, ದೇವು ನಾಗನೂರು, ಮುಕ್ಕಣ್ಣ ಕತ್ತಿ, ಜಗದೀಶ ಕುಂಬಾರ, ಪರಮೇಶರಡ್ಡಿ, ಸಮೀರ್ ಪಾಟೀಲ್. ಆರ್.ಜಿ.ಕುಲಕರ್ಣಿ, ಶಂಕರ ಕೊಪ್ಪದ, ಭರತ್ ಕಂದಕೂರ, ಶ್ರೀಪಾದ ಅಯಾಚಿತ್, ಶಿವರಾಜ ನುಗಡೋಣಿ ಇತರರು ಇದ್ದರು.
Please follow and like us:
error

Leave a Reply

error: Content is protected !!