ಕೃಷಿ ಪದವಿ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆಯ ಮಾಹಿತಿ ಶಿಬಿರ

  ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ಕೃಷಿ, ತೋಟಗಾರಿಕೆ, ಅರಣ್ಯ, ಕೃಷಿ ತಾಂತ್ರಿಕತೆ, ಗೃಹವಿಜ್ಞಾನ ಮತ್ತು ಕೃಷಿ ಮಾರುಕಟ್ಟೆ ಮುಂತಾದ ಪದವಿಗಳಿಗೆ ಪ್ರಸಕ್ತ ಸಾಲಿನ ೨೦೧೨-೧೩ ರ ಪ್ರವೇಶದಲ್ಲಿ ರೈತರ ಮಕ್ಕಳಿಗಾಗಿ ಮೀಸಲು ಇರಿಸಿದ ವಿಶೇಷ ಕೋಟಾದಲ್ಲಿ ಪ್ರವೇಶ ಬಯಸುವ ಅಬ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯ ಮಾಹಿತಿ ನೀಡಲು ಜು. ೧೧ ರಂದು ಮಾಹಿತಿ ಶಿಬಿರವನ್ನು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಕಿನ್ನಾಳ ರಸ್ತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನ ಆವರಣ ವಿಳಾಸಕ್ಕೆ ಭೇಟ್ಟಿ ನೀಡಿ ಶಿಬಿರದ ಲಾಭ ಪಡೆಯಬಹುದಾಗಿದೆ.
  ಹೆಚ್ಚಿನ ವಿವರಗಳಿಗೆ ದೂ: ೦೮೫೩೯-೨೩೦೨೦೫ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply