ಗುಪ್ತಚರ ಇಲಾಖೆಯ ಕೆ.ರಾಮರಾವ್‌ರವರಿಗೆ ಮರಾಠ ಸಮಾಜದ ವತಿಯಿಂದ ಸನ್ಮಾನ

ಕೊಪ್ಪಳ. ಇತ್ತೀಚೆಗೆ ನಗರದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕೊಪ್ಪಳ ಜಿಲ್ಲಾ ಕ್ಷತ್ರೀಯ ಮರಾಠ ಸಂಘಟನಾ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯ ಗುಪ್ತಚರ ಇಲಾಖೆಯ ಸಿಪಿಐ ಕೆ.ರಾಮರಾವ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ವೇಳೆ ಗಣಿ ಮಾಲೀಕ ಎಂ.ಹನುಮಂತರಾವ್ ಬೋಸ್ಲೆ, ಗಂಗಾವತಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಜ್ಯೋತಿಭಾ ಜಾಧವ್, ಸ್ವಾತಂತ್ರ ಹೋರಾಟಗಾರ ಸುಮಂತರಾವ್ ಪಟವಾರಿ, ಕೊಪ್ಪಳ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್ ಮತ್ತಿತರರನ್ನು ಜಿಲ್ಲಾ ಮರಾಠ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಪದಗ್ರಹಣ: ಜಿಲ್ಲಾ ಕ್ಷತ್ರೀಯ ಮರಾಠ ಸಂಘದ ಅಧ್ಯಕ್ಷರಾಗಿ ಫಕೀರಪ್ಪ ಆರೇರ್, ಪ್ರಕಾಶ ಮಂಗಳೂರ(ಕಾರ್ಯದರ್ಶಿ), ವಸಂತ ಲೊಂಡೆ(ಖಜಾಂಚಿ)ಪದಗ್ರಹಣ ಮಾಡಿದರು.
ಉಳಿದಂತೆ ಗಂಗಾವತಿ ತಾಲೂಕು ಅಧ್ಯಕ್ಷರಾಗಿ ಭೀಮೇಶ ಗಾಯಕವಾಡ, ಕೊಪ್ಪಳ ತಾಲೂಕು ಅಧ್ಯಕ್ಷರಾಗಿ ಕ್ರಿಷ್ಣಪ್ಪ ಬಂಕದ, ಮಂಜುನಾಥ ವೆಂಕೋಬರಾವ್ ದುಮ್ಮಾಳ(ಕನಕಗಿರಿ), ರಮೇಶ ಕಾಪಸೆ(ಕುಷ್ಟಗಿ), ವಿಕ್ರಮ್ ಜಗತಾಪ(ಯಲಬುರ್ಗಾ) ಹಾಗೂ ವೆಂಕಟೇಶ ತೋಟದ ಕಾರಟಗಿ ತಾಲೂಕು ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಸಂಗಣ್ಣ ಕರಡಿ, ಉದ್ಯಮಿ ಹನುಮಂತಪ್ಪ ಅಂಗಡಿ, ಮಾಜಿ ಸಿಂಡಿಕೆಟ್ ಸದಸ್ಯ ರಾಜು ಬಾಕಳೆ, ಕೆಕೆಎಂಪಿ ರಾಜ್ಯಾಧ್ಯಕ್ಷ ವಿ.ಎ.ರಾಣೋಜಿರಾವ್, ಕಾರ್ಯದರ್ಶಿ ಶಿವಾಜಿರಾವ್ ಜಾಧವ್, ಬೈನೋಜಿರಾವ್ ಮೋರೆ, ಮುಖಂಡರಾದ ವೆಂಕಟರಾವ್ ಘೋರ್ಪಡೆ, ವಿಠ್ಠಲ್‌ರಾವ್ ಗಾಯಕವಾಡ, ಕಳಕಪ್ಪ ಜಾಧವ್, ಉಮೇಶ ಸುರ್ವೆ, ಮನೋಜ ಪವಾರ್, ರಾಜಕುಮಾರ ಸುರ್ವೆ, ವಾಸುದೇವ ಮರಾಠಿ, ಪ್ರೇಮಾವತಿ ಮಂಗಳೂರ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error