ಸ್ವಂತ ಉದ್ಯೋಗ ಆರಂಭಕ್ಕೆ ಸಹಾಯಧನ : ಅರ್ಜಿ ಆಹ್ವಾನ

 ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಪ್ರಸಕ್ತ ಸಾಲಿಗೆ  ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯನ್ನು ಮುಂದುವರೆಸಲಾಗಿದ್ದು, ಬ್ಯಾಂಕುಗಳು ನೀಡುವ ಹಣಕಾಸು ನೆರವಿನೊಂದಿಗೆ ನಿರುದ್ಯೋಗಿಗಳು ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
ಉದ್ದಿಮೆಯ ಯೋಜನೆಯ ಮೆಲೆ ಶೇ.೧೫ ರಿಂದ ೩೫ ರಷ್ಟು ಸಬ್ಸಿಡಿ ನೀಡಲಿದ್ದು, ೨೦೧೪ ರ ಮೇ. ೩೧ ಕ್ಕೆ   ೧೮ ವರ್ಷ ಮೇಲ್ಪಟ್ಟ ನಿರುದ್ಯೋಗಿಗಳು ರಾಜ್ಯ ಹಾಗೂ ಜಿಲ್ಲಾ ಕಛೇರಿಗಳಿಂದ ಲಭ್ಯವಿರುವ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ತಾವು ಪ್ರಾರಂಭಿಸಬೇಕಾದ ಯೋಜನೆಯ ಬಗ್ಗೆ ವಿವರಗಳನ್ನು ಸಲ್ಲಿಸಬೇಕು. 
ವ್ಯಕ್ತಿಯ ಅಥವಾ ಅದೇ ಕುಟುಂಬದ ಸದಸ್ಯರು ಪಿ.ಎಮ್.ಆರ್.ವೈ, ಆರ್.ಇ.ಜಿ.ಪಿ. ಅಡಿಯಲ್ಲಿ ಸಹಾಯಧನವನ್ನು/ಹಂಚಿನ ಹಣವನ್ನು ಮೊದಲೇ ಪಡೆದಿದ್ದರೆ ಅಥವಾ ಯಾವುದೇ ಕೇಂದ್ರ/ರಾಜ್ಯದ ಯಾವುದೇ ಯೋಜನೆಯಲ್ಲಿ ಸಹಾಯಧನವನ್ನು ಪಡೆದಿದ್ದರೆ ಅಂತಹ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಯೋಧರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. 
ಅರ್ಜಿ ಸಲ್ಲಿಸುವ ವಿಳಾಸ : ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣ, ಮಯೂರ ಹೋಟೆಲ್ ಎದುರು ಕೊಪ್ಪಳ-೫೮೩೨೩೧ ದೂ.ಸಂಖ್ಯೆ: ೦೮೫೩೯-೨೩೧೪೭೩, ಮೊ.೯೪೮೦೮೨೫೬೩೧ ಹಾಗೂ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಯೂರ ಹೋಟೆಲ್ ಎದುರುಗಡೆ ಕೊಪ್ಪಳ-೫೮೩೨೩೧ ದೂರವಾಣಿ ಸಂಖ್ಯೆ: ೦೮೫೩೯-೨೩೧೫೪೮, ೨೩೧೧೦೧ ಇವರಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜೂ-೩೦ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೫೩೯-೨೩೧೫೪೮, ೨೩೧೧೦೧ ಇವರನ್ನು ಸಂಪರ್ಕಿಸಬಹುದಾಗಿದೆ .

Related posts

Leave a Comment