fbpx

ಒಬಮಾ ಭಾರತ ಪ್ರವಾಸ ವಿರೋಧಿಸಿ ದಿನಾಂಕ: ೨೪ ರಂದು ಪ್ರತಿಕೃತಿ ದಹಿಸಿ ಪ್ರತಿಭಟನೆ

ದೇಶದ ಎಡಪಕ್ಷಗಳು ಪ್ರಗತಿಪರರು ಒಬಮಾ ಭಾರತ ಪ್ರವಾಸವನ್ನು ವಿರೊಧಿಸಿ ದಿನಾಂಕ  ಜನವೇರಿ ೨೪ ರಂದು ರಾಷ್ಟ್ರಾದಾದ್ಯಂತಹ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರದ್ವಜ್ ರಾಜ್ಯಕಾರ್ಯದರ್ಶಿ ಸಿ.ಪಿ.ಐ.ಎಂ.ಎಲ್, ನಾಗರಾಜ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಐ.ಎಂ, ಮತ್ತು ಬಸವರಾಜ ಶಿಲವಂತರ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೇರಿಕಾ ದೇಶದ ಕಂಪನಿಗಳು ಭಾರತದ ನೆಲ ಜಲ ಕನಿಜಗಳನ್ನು ಲೂಟಿ ಮಾಡಲು ಎಫ್.ಡಿ.ಐ ಮುಖಾಂತರ ಭಾರತದಲ್ಲಿ ತಮ್ಮ ಸಂಸ್ಥೆಗಳನ್ನು ಪ್ರಾರಂಭಿಸಲಿದ್ದಾರೆ. ಒಬಮಾ ಪ್ರವಾಸದ ನಂತರ ದೇಶದ ರಕ್ಷಣಾ ವ್ಯವಸ್ಥೆ ಛಿದ್ರಗೊಂಡು ಅಮೇರಿಕಾ ಕೈ ಸೇರಲಿದೆ. ವಿಮಾರಂಗ ಬ್ಯಾಂಕ ವ್ಯವಾಹಾರಗಳು ಹಿಡಿಐಆಗಿ ಕಾರ್ಪಟ್ ಶಿಟ್ಮಂತರ ಕೈ ಸೇರಲಿದೆ ಭಾರತದ ಮಧ್ಯಮ ವರ್ಗದ ಮತ್ತು ದುಡಿಯುವ ವರ್ಗಗಳ ರಕ್ಷಣೆಗಾಗಿ ಒಬಮಾ ಪ್ರವಾಸವನ್ನು ವಿರೋಧಿಸಿ ದಿನಾಂಕ ೨೪-೦೧-೨೦೧೫ ರಂದು ೧೧.ಗಂಟೆಗೆ ಕೊಪ್ಪಳ ಬಸ್ಸ್ ನಿಲ್ದಾಣದ ಮುಂಬಾಗದಲ್ಲಿ ಒಬಮಾ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಡಪಕ್ಷಗಳ ಮುಖಂಡರು  ತಿಳಿಸಿದ್ದಾರೆ
Please follow and like us:
error

Leave a Reply

error: Content is protected !!