fbpx

ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನ.

ಕೊಪ್ಪಳ,
ಸೆ.೨೪ (ಕ ವಾ) ನಗರಸಭೆ ಕಾರ್ಯಾಲಯ, ಕೊಪ್ಪಳ ಇವರಿಂದ ಪ್ರಸಕ್ತ
ಸಾಲಿಗಾಗಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಇಎಸ್‌ಟಿ ಮತ್ತು ಪಿ ಕೌಶಲ್ಯ
ತರಬೇತಿಯ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಘಟಕದಡಿ ಭಾರಿ ವಾಹನ ಚಾಲನಾ
ತರಬೇತಿಗಾಗಿ ಕೊಪ್ಪಳ ನಗರದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

     ಕೊಪ್ಪಳ ನಗರದ ನಿವಾಸಿಯಾಗಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು,
ಅರ್ಜಿಯೊಂದಿಗೆ ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ
ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕಕ್ಕೆ
ಸಂಬಂಧಿಸಿದ ಪ್ರಮಾಣ ಪತ್ರ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ನಗರಸಭೆ
ಕಾಯಾಲಯ, ಕೊಪ್ಪಳ ಇಲ್ಲಿಗೆ  ಅಕ್ಟೋಬರ್.೦೯ ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ
ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯ ಕೊಪ್ಪಳ ಇವರನ್ನು
ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!