You are here
Home > Koppal News > ಗಮಕ ಕಲೆಗೆ ಪ್ರೋತ್ಸಾಹ ಬೇಕು- ಮಹಾಂತೇಶ ಮಲ್ಲನಗೌಡರ

ಗಮಕ ಕಲೆಗೆ ಪ್ರೋತ್ಸಾಹ ಬೇಕು- ಮಹಾಂತೇಶ ಮಲ್ಲನಗೌಡರ

ಕೊಪ್ಪಳ : ನಮ್ಮ ಭಾಗದಲ್ಲಿ ಗಮಕ ಕಲೆ ಎನ್ನುವುದು ನಶಿಸಿ ಹೋಗುತ್ತಿದೆ.  ಗಮಕಿಗಳ ಸಂಖ್ಯೆಯೂ ಕಡಿಮೆ. ಇಂತಹ ಸಂದರ್ಭದಲ್ಲಿ ವಿಠ್ಠಪ್ಪ ಗೋರಂಟ್ಲಿಯಂತವರು ಈ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್‍ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಲಿ ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಭಾಗ್ಯನಗರದ ಸದಾನಂದಾಶ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಕವಿಸಮೂಹದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ “ಕುವೆಂಪು ರಾಮಾಯಣ ದರ್ಶನಂ: ಉರ್ಮಿಳಾ ಭಾಗ” ಗಮಕ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಳೆಗನ್ನಡದ ಓದುಗರು ಕಡಿಮೆ, ಹಳೆಗನ್ನಡದಲ್ಲಿರುವ ಕಾವ್ಯವನ್ನು  ಎಲ್ಲರಿಗೂ ಮುಟ್ಟಿಸುವಲ್ಲಿ ಇಂತಹ ಕಾರ್‍ಯಕ್ರಮಗಳ ಯಶಸ್ವಿಯಾಗುತ್ತವೆ. ಗಮಕಿ ವಿಠ್ಠಪ್ಪ ಗೋರಂಟ್ಲಿಯವರು ಗಮಕಿಗಳಾಗಿಯೂ ಹೆಸರು ಮಾಡಿದ್ದಾರೆ ಅವರೊಂದು ಅದ್ಬುತ ಪ್ರತಿಭೆ ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ವಿಠ್ಠಪ್ಪ ಗೋರಂಟ್ಲಿಯವರು ಮನಮುಟ್ಟುವಂತೆ “ಕುವೆಂಪು ರಾಮಾಯಣ ದರ್ಶನಂ: ಉರ್ಮಿಳಾ ಭಾಗ” ದ ಕಾವ್ಯವಾಚನ(ಗಮಕ) ಮಾಡಿದರು. ಅದರ ಅರ್ಥವನ್ನು ಸರಳ ಕನ್ನಡದಲ್ಲಿ ವಿವರಿದರು. ಅವರಿಗೆ ವೀರಣ್ಣ ಹುರಕಡ್ಲಿ ಸಹಕಾರ ನೀಡಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಯಮನಪ್ಪ ಕಬ್ಬೇರ್,ಡಾ.ವಿ.ಬಿ.ರಡ್ಡೇರ್ ಮಾತನಾಡಿದರು. ವೇದಿಕೆಯ ಮೇಲೆ ರಾಜಶೇಖರ ಅಂಗಡಿ,ವೀರಣ್ಣ ಹುರಕಡ್ಲಿ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಎನ್.ಜಡೆಯಪ್ಪ, ಬಸವರಾಜ್ ಸಂಕನಗೌಡ್ರ,ಶರಣಪ್ಪ ದಾನಕೈ,ಟಿ.ಜೆ.ಚಂದ್ರಶೇಖರ,ಎ.ಪಿ.ಅಂಗಡಿ, ಹನುಮಂತಪ್ಪ ಅಂಡಗಿ, ಶಿವಾನಂದ ಹೊದ್ಲೂರ, ಯೋಗಾಶ್ರಮದ ಸತ್ಸಂಗ ಬಳಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಂದ್ರ ಬಾಬು ಮಾತನಾಡಿದರು. ಸ್ವಾಗತವನ್ನು ಸಿರಾಜ್ ಬಿಸರಳ್ಳಿ ಕೋರಿದರೆ ,  ಕಲ್ಲನಗೌಡ ಮಾಲೀಪಾಟೀಲ್‌ರು ವಂದನಾರ್ಪಣೆ ಮಾಡಿದರು. 

Leave a Reply

Top