ಬಿಜೆಪಿ ಮೂರನೇ ಸ್ಥಾನಕ್ಕೆ- ಜಿ.ಎ.ಬಾವ,

ಕೊಪ್ಪಳ : ನಗರದ ೩ ಮತ್ತು ೨೧, ೨೪ ನೇ ವಾರ್ಡ ಗಳಲ್ಲಿ ಕಾಂಗ್ರೆಸ್ ಪಕ್ಷದ  ಅಬ್ಬರದ ಪ್ರಚಾರ ಮಾಡಿದ ಕೆಪಿಸಿಸಿ ಕಾಯ್ದರ್ಶಿ ಜೆ. ಬಾವ ರವರು ಮಾತನಾಡಿ ಕೇವಲ ಹಣವೇ ಚುನಾವಣೆಗೆ ಮಾನದಂಡವಲ್ಲ ಹಣದಿಂದ ಮತವನ್ನು ಕೊಂಡು ಕೊಳ್ಳುತ್ತೆವೆ ಎನ್ನುತ್ತಿರುವ ಸಂಗಣ್ಣನವರಿಗೆ ಕ್ಷೇತ್ರದ ಜನತೆ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಉಪಚುನಾವಣೆಯಲ್ಲಿ ಬಜ್ರಿ ಜಯಗೊಳಿಸುವಮೂಲಕ ರಾಜ್ಯದಲ್ಲಿ ಆಫರೇಷನ್ ಕಮಲಕ್ಕೆ ತಿಲಾಂಜಲಿ ಹಾಡಲಿದ್ದಾರೆ. ಕೊಪ್ಪಳ ಕ್ಷೇತ್ರವನ್ನು ಕರ್ನಾಟಕದಲ್ಲಿ ನಿಷ್ಠಾವಂತರ ಕ್ಷೇತ್ರವೆಂದು ಹೊಸ ಇತಿಹಾಸವನ್ನು ರಚಿಸಲಿದ್ದರೆ. ಈಗಾಗಲೆ ಮಾಜಿ ಮುಖ್ಯಮಂತ್ರಿ ಉಪಚುನಾವಣೆಯಿಂದ ಹಿಂದೆ ಸರಿದಿದ್ದು ಯಾವುದೇ ಸಂದರ್ಭದಲ್ಲಿ ಬಂದನಕ್ಕೆ ಒಳಗಾಗಲಿದ್ದರೆ. ಇವರನ್ನು ನಂಬಿದ ಕರಡಿ ಶಿಘವೇ  ಗುಡ್ಡಸೇರಲಿದ್ದಾರೆ ಎಂದು  ಮಾಜಿ ಶಾಸಕ ಸಂಗಣ್ಣ ವಿರುದ್ದ ಕಿಡಿಕಾರಿದರು. ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಮದನಲಿ ಅಡ್ಡೆವಾಲಿ, ಗವಿಶಿದ್ದಪ್ಪ ಮುದಗಲ, ಅಮ್ಜದ್ ಪಟೇಲ್, ಜಾಕೀರ ಹುಸೇನ ಕಿಲ್ಲೆದಾರ, ಕೃಷ್ಣ ಇಟ್ಟಂಗಿ, ವೀರುಪಾಕ್ಷಪ್ಪ ಕಟ್ಟಿಮನಿ ವಕೀಲರು, ಶಿದ್ದು ಮ್ಯಾಗೇರಿ, ಮಾಜೀದ್ ಖಾನ್ , ಅಲಿ ಕನಕಗಿರಿ, ದ್ಯಾಮಣ್ಣ ಚಿಲವಾಡಗಿ ಇನ್ನು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:
error