ಶ್ರೀ ಹೆಚ್.ಆರ್. ಗವಿಯಪ್ಪ ಪ.ಪೂ. ವಿದ್ಯಾರ್ಥಿಗಳ ಉತ್ತಮ ಸಾಧನೆ

ಗಂಗಾವತಿ, ಆ.೧೭: ನಗರದ ಜೆಎಸ್‌ಎಸ್ ವಿಜ್ಞಾನ ಪ.ಪೂ. ಕಾಲೇಜುನವರು ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶ್ರೀ ಹೆಚ್.ಆರ್. ಗವಿಯಪ್ಪ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
೧೦೦ ಮೀ. ಓಟದ ಸ್ಪರ್ಧೆ, ಗುಂಡು ಎಸೆತ ಹಾಗೂ ಚಕ್ರ ಎಸತೆದಲ್ಲಿ ಜೆ. ನಾರಾಯಣ ಎಂಬ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದುಕೊಂಡು ಚಾಂಪಿಯನ್ ಶೀಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ.
೫ ಸಾವಿರ ಮೀ. ನಡುಗೆ ಸ್ಪರ್ಧೆಯಲ್ಲಿ ಲಿಂಗರಾಜ ಪ್ರಥಮ ಸ್ಥಾನ ಗಳಿಸಿದರೆ, ಚದುರಂಗದಲ್ಲಿ ವಿಕ್ರಮ ಗೌಡ ಅಗ್ರಸ್ಥಾನ ಪಡೆದುಕೊಂಡಿದ್ದಾನೆ. ಅದೇ ರೀತಿಯಾಗಿ ರೇವಣಸಿದ್ದ ೧೦೦ ಹಾಗೂ ೨೦೦ ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾನೆ. ೫೦೦೦ ಮೀ. ಓಟದ ಸ್ಪಧೆಯಲ್ಲಿ ವಿರೇಶ ಕಾಮದೊಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಗಂಗಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಕಾಲೇಜಿನ ಪ್ರಾಚಾರ್ಯ ಪ್ರೊ: ಎಫ್.ಹೆಚ್. ಚಿತ್ರಗಾರ ಹಾಗೂ ಉಪನ್ಯಾಸಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply