ಸಚಿನ್ ಗೆ ಮತ್ತೆ ನಿರಾಸೆ

 : 100ರ ಶತಕದ ಹೊಸ್ತಿಲಲ್ಲಿ ಎಡವಿದ ಮಾಸ್ಟರ್

ಅಂತೂ ದೀರ್ಘ ಕಾಲದ ಕಾಯುವಿಕೆಗೆ ಇನ್ನೂ ಕೊನೆ ಬಂದಿಲ್ಲ. ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಶತಕಗಳ ಶತಕದ ಹೊಸ್ತಿಲಲ್ಲಿದ್ದ ಸಚಿನ್ ತೆಂಡೂಲ್ಕರ್ ಮತ್ತೆ ಎಡವಿದ್ದಾರೆ. ಆ ಮೂಲಕ ಮತ್ತೊಮ್ಮೆ ನರ್ವಸ್ ನೈಂಟೀಸ್‌ಗೆ ಬಲಿಯಾಗಿದ್ದಾರೆ. 
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ 99 ಶತಕಗಳ ಸಾಧನೆ ಮಾಡಿದ್ದ ಸಚಿನ್ ಮತ್ತೆ ಶತಕದ ಹೊಸ್ತಿಲಲ್ಲಿ ಎಡವುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. 153 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 94 ರನ್ ಗಳಿಸಿದ್ದ ಸಚಿನ್, ವಿಂಡೀಸ್ ವೇಗಿ ರವಿ ರಾಂಪಾಲ್‌ಗೆ ವಿಕೆಟ್ ಒಪ್ಪಿಸುವ ಮೂಲಕ ವೈಫಲ್ಯ ಅನುಭವಿಸಿದರು.

Leave a Reply