ಪ್ರಗತಿ ಕೃಷ್ಣ ಉತ್ಸವ ಯಶಸ್ವಿ ಗ್ರಾಹಕರಿಗೆ ಸಾಲ ಸೌಲಭ್ಯ ಜೊತೆಗೆ ಉತ್ತಮ ಸೇವೆಗೆ ಶ್ರಮಿಸಬೇಕು : ನಾಯಕ್

ಕೊಪ್ಪಳ,ಡಿ.೩೦: ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅಗತ್ಯವಾಗಿದ್ದು ಬ್ಯಾಂಕಿಗೆ ತಮ್ಮ ಹಣಕಾಸಿನ ವ್ಯವಹಾರಕ್ಕೆ ಬರುವ ಗ್ರಾಹಕರಿಗೆ ಕೃಷಿಯೇತರ ಎಲ್ಲ ರೀತಿಯ ಸಾಲ ಸೌಲಭ್ಯ ಜೊತೆಗೆ ಉತ್ತಮ ಸೇವೆಗಾಗಿ ಬ್ಯಾಂಕಿನ ಅಧಿಕಾರಿಗಳು ಶ್ರಮಿಸಿಬೇಕೆಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಗೋಪಾಲ ನಾಯಕ್ ಅವರು ಹೇಳಿದರು.
ಅವರು ಮಂಗಳವಾರ ಕೊಪ್ಪಳದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕನಲ್ಲಿ ಪ್ರಗತಿ ಕೃಷ್ಣ ಉತ್ಸವದ ಅಂಗವಾಗಿ ಏರ್ಪಡಿಸಿದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯದ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು ೨೦೧೫ ರ ಮಾರ್ಚ ೩೧ ವರಗೆ ಬಡ್ಡಿ ದರದಲ್ಲಿ ಭಾರೀ ರಿಯಾಯತಿ ಬ್ಯಾಂಕಿನ ವತಿಯಿಂದ ವಿವಿಧ ರೀತಿ ಸಾಲ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಹಕರಿಗೆ ಕರೆ ನೀಡಿದರು. ಒಟ್ಟು ೬೨೦ ಶಾಖೆಯನ್ನು ರಾಜ್ಯದ ೧೧ ಜಿಲ್ಲೆಯಲ್ಲಿ ಹೊಂದಿರು ನಮ್ಮ ಬ್ಯಾಂಕ ೧೭೩೦೦ ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದೆ. ೧೭೨ ಎಟಿಎಂ ಹೊಂದಿದೆ ಆಧುನಿಕ ಸೌಲಭ್ಯ ಮೋಬೈಲ್ ಬ್ಯಾಂಕಿಂಗ್ ಡೆಬಿಟ್ ಕಾರ್ಡ ಇತ್ಯಾದಿ ಸೇರಿದಂತೆ ೫ ಲಕ್ಷಕ್ಕೂ ಅಧಿಕ ಗ್ರಾಹಕರು ಇದ್ದಾರೆ. ೯ ಸಾವಿರದಷ್ಟು ಠೇವಣಿ ಹಣ ಇದೆ.೮೫೦ ಕೋಟಿ ಮುಂಗಡ ಹಣ ಹೊಂದಿದೆ ಎಂದ ಅವರು ಒಟ್ಟಾರ ಬ್ಯಾಂಕಿನ ವತಿಯಿಂದ ಗ್ರಾಹಕರಿಗೆ ಎಲ್ಲ ತರಹದ ಸಾಲ ಸೌಲಭ್ಯ ಮತ್ತು ಉತ್ತಮ ಸೇವೆ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಜನರಲ್ ಮ್ಯಾನೇಜರ್ ಗೋಪಾಲ ನಾಯಕ್ ಅವರು ಹೇಳಿದರು.
ಬ್ಯಾಂಕಿನ ಪ್ರದೇಶಿಕ ವ್ಯವಸ್ಥಾಪಕ ಪ್ರಹ್ಲಾದ್ ದೇಸಾಯಿ ಮಾತನಾಡಿ ಜಿಲ್ಲೆಯಲ್ಲಿ ೫೧ ಶಾಖೆಗಳಿವೆ ೧೩೫೦ ಕೋಟಿ ವ್ಯವಹಾರ ನಡೆದಿದೆ. ನಮ್ಮ ಈ ಬ್ಯಾಂಕ ಈಗ ಗ್ರಾಹಕರ ಸೇವೆ ಮತ್ತು ವ್ಯವಹಾರದಲ್ಲಿ ಪ್ರಥಮ ಹೊಂದಿರುತ್ತದೆ. ಬ್ಯಾಂಕಿನ ಗ್ರಾಹಕರ ವಿಶ್ವಾಸವೇ ನಮಗೆ ಮುಖ್ಯವಾಗಿದೆ. ಅವರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯವಾಗಿದೆ ರಾಜ್ಯ ೧೧ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ ಕಾರ್ಯ ನಡೆಸುತ್ತಿದೆ. ಬ್ಯಾಂಕಿನ ವ್ಯವಹಾರದಲ್ಲಿ ರಾಷ್ಟ್ರದಲ್ಲಿ ೨ ನೇ ಸ್ಥಾನ ಪಡೆದಿದೆ. ಎಂದ ಅವರು ನಮ್ಮ ಬ್ಯಾಂಕಿನ ಪ್ರತಿಯೊಬ್ಬ ಗ್ರಾಹಕರು ೪ ಜನ ಗ್ರಾಹಕರನ್ನು ಬ್ಯಾಂಕಿಗೆ ಪರಿಚಯಿಸಿ ಅವರು ಖಾತೆ ತೆರೆಯುವಂತೆ ಮಾಡಬೇಕು ಇದೇ ಪ್ರಗತಿ ಕೃಷ್ಣ ಉತ್ಸವದ ಉದ್ದೇಶವಾಗಿದೆ. ಬ್ಯಾಂಕಿನ ಅಭಿವೃದ್ಧಿಗೆ ಗ್ರಾಹಕರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಪ್ರಹ್ಲಾದ ದೇಸಾಯಿ ಹೇಳಿದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಕೊಪ್ಪಳ ಶಾಖೆಯ ವ್ಯವಸ್ಥಾಪಕ ಕೆ.ವೀರಣ್ಣ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜು ಅಗಡಿ ಸೇರಿದಂತೆ ಅನೇಕರಿಗೆ ಮತ್ತು ಕೊಪ್ಪಳ ಯಲಬುರ್ಗಾ ಬೇವೂರ ಭಾಗ್ಯನಗರ ವಿವಿಧ ಬ್ಯಾಂಕಿನ ಗ್ರಾಹಕರಿಗೆ ಗ್ರಹ ಸಾಲ ಕಾರ್ ಲೋನ್ ವೈದ್ಯಕೀಯ ಸಾಲ ವ್ಯಾಪಾರ ಪ್ರಯಾಣಿಕರ ಇತ್ಯಾದಿ ಸಾಲದ ಮಂಜೂರಾತಿ ಪತ್ರವನ್ನು ಆಯಾ ಬ್ಯಾಂಕಿನ ವ್ಯವಸ್ಥಾಪಕರಿಂದ ಸಾಲದ ಪತ್ರವನ್ನು ವಿತರಿಸಲಾಯಿತು. ಗ್ರಾಹಕರು ಮತ್ತು ಮಹಿಳಾ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply