ಸಂಡಿಕೇಟ್ ಬ್ಯಾಂಕಿನ ಸಂಸ್ಥಾಪಕ ದಿನಾಚರಣೆ.

ಕೊಪ್ಪಳ-20- ತಾಲೂಕಿನ ಮುನಿರಬಾದ್ ಆರ್.ಎಸ್. ಸಿಂಡಿಕೇಟ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯ ಕಾರ್ಯಕ್ರಮವನ್ನು ಬ್ಯಾಂಕಿನ ವ್ಯವಸ್ಥಾಪಕರಾದ ಕೆ.ವಿ.ರಾಮಚಂದ್ರ ಮಾತನಾಡುತ್ತಾ ೧೯೨೫ ರಲ್ಲಿ ಪ್ರಾರಂಭವಾದ ಬ್ಯಾಂಕ  ಉಪೇಂದ್ರ ಆನಂತ ಪೈ,  ವಾಮನ ಕುದ್ವಾ, ಡಾ|| ಟಿ.ಎಂ.ಎ ಪೈ ರವರಿಂದ ಕೆವಲ ೮೦೦೦ ರೂಪಾಯಿ ಬಂಡವಾಳ ಹೂಡಿ ಉಡುಪಿಯಲ್ಲಿ ಸ್ಥಾಪನೆ ಮಾಡಿದ ಈ ಸಿಂಡಿಕೇಟ್ ಬ್ಯಾಂಕ ಭಾರತ ದೇಶಾದ್

ಯಂತ ಸುಮಾರು ೩೩೦೦ ಕ್ಕಿಂತ ಹೆಚ್ಚು ಶಾಖೆಗಳನ್ನು ವಿಸ್ತಾರ ಮಾಡಿ ಇಡೀ ದೇಶದಲ್ಲಿ ೨ನೇ ಅತ್ಯತ್ತಮ ಬ್ಯಾಂಕ ಆಗಿ ಹೊರಹೊಮ್ಮಿರುತ್ತದೆ ಈ ಸಂಸ್ಥಾಪಕರ ದಿನಾಚರಣೆ ಪ್ರತಿ ವರ್ಷ ಅಕ್ಟೋಬರ ೨೦ನೇ ತಾರಿಖಿಗೆ ಆಚರಿಸುತ್ತಿದ್ದು ಸುಮಾರು ೪ ಕೋಟಿ ೭೦ ಲಕ್ಷ ಭೌಗೋಳಿಕ ವಹಿವಾಟು ಹೊಂದಿರುತ್ತದೆ ಈ ಸಂಸ್ಥಾಪಕರ ದಿನಾಚರಣೆ ಸಿಂಡಿಕೇಟ ಬ್ಯಾಂಕ ಮುನಿರಬಾದ ಶಾಖೆಯಲ್ಲಿ ಅತ್ಯತ್ತಮ ಗ್ರಾಹಕರಾದ ಉಸ್ಮಾನ ಸಾಬ್ ಹಾಗೂ ಮಾಲಂಭಿಯವರನ್ನು ಶಾಖೆಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಹೆಚ್.ಎಸ್.ಹೊನ್ನೂಂಚಿ ವಿಕೇಂದ್ರಿಕೃತ ತರಬೇತಿ ಸಂಯೋಜಕರು ಎಸ್.ಐ.ಆರ್.ಡಿ ಮೈಸೂರ ರವರು ಮಾತನಾಡುತ್ತಾ ಸಂಜಿವಿನಿ ರಾಜೀವಗಾಂಧಿ ಚೈತನ್ಯ ಯೋಜನೆ ಸ್ವಸಹಾಯ ಸಂಘಗಳ ಉಳುತಾಯ ಹಾಗೂ ಸಾಲ ಮರು ಪಾವತಿ ಬಗ್ಗೆ ತಿಳಿಸುತ್ತಾ ಬ್ಯಾಂಕ ಸಾರ್ವಜನಿಕರಿಗೆ ಉತ್ತಮ ಸೇವೆ, ಸರ್ಕಾರದ ಸವಲತ್ತುಗಳು ಮತ್ತು ರೈತರಿಗೆ ಕೃಷಿ ಸಾಲ ಸ್ವಸಹಾಯ ಸಂಘದವರಿಗೆ ಸಾಲ ನೀಡಿ ಬಡವರ ಜೀವನೋಪಾಯ ಆರ್ಥಿಕ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಮರುಪಾವತಿ ಮರು ಸಾಲದ ಕೀಲಿ ಕೈ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿಯಾದ ವಸಂತ, ಶಂಕ್ರಪ್ಪ, ಮಂಜುಳಾ, ಅನ್ನಪೂರ್ಣ, ರವಿಕುಮಾರ, ಬ್ಯಾಂಕಿನ  ಗ್ರಾಹಕರಾದ ರಮೇಶ ರಾಯಬಾಗಿ ಜನರಲ್ ಸ್ಟೋರ್ ಹುಲಿಗಿ ಹಾಜರಿದ್ದರು ಹಾಗೂ ಸ್ವಸಹಾಯ ಸಂಘದವರು ಸಾರ್ವಜನಿಕರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Please follow and like us:
error