ಬೋರ್‌ವೇಲ್ ಹಾಗೂ ಪೈಪ್ ಲೈನ್ ಕಾಮಗಾರಿಗೆ ಪಟೇಲ್‌ರಿಂದ ವೀಕ್ಷಣೆ

  ನಗರದ ೩ನೇ ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ನಿರ್ಮಿತಿ ಕೇಂದ್ರದ ಹತ್ತಿರ ವಿರುವ ಬಂಡಿ ಹಮಾಲರ ಕಾಲೋನಿಯಲ್ಲಿ ನಗರಸಭೆಯ ವಿಶೇಷ ನಿಧಿ ಯೋಜನೆಯಡಿಯ ೩ ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಬೋರ್‌ವೇಲ್ ತೊಡಿಸಿ ಹಾಗೂ ಪೈಪ್ ಲೈನ್ ಅಳವಡಿಸಿಕೊಳ್ಳುವ ಕುಡಿಯುವ ನೀರಿನ ಕಾಮಗಾರಿಯನ್ನು ಗುರುವಾರ ಮಧ್ಯಾಹ್ನ ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್ ವೀಕ್ಷಣೆ ಮಾಡಿದರು.
ಬೇಸಿಗೆ ಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ನಿವಾರಣೆಗಾಗಿ ಜನರ ಅನಕೂಲಕ್ಕಾಗಿ ನಗರಸಭೆ ವತಿಯಿಂದ ಬಂಡಿಹಮಾಲರ ಕಾಲೋನಿಯ ಜನರಿಗಾಗಿ ಈ ಕುಡಿಯುವ ನೀರಿನ ಬೋರ್‌ವೇಲ್ ತೊಡಿಸಿ ಮತ್ತು ಪೈಪ್ ಲೈನ್ ಅಳವಡಿಸುವ ಕಾಮಗಾರಿ ತ್ವರೀತಗತಿಯಲ್ಲಿ ಪೂರ್ಣಗೊಳಿಸಬೇಕು ಮತ್ತು ಗುಣಮಟ್ಟದ ಸಾಮಗ್ರಿಗಳ ಬಳಕೆ ಮಾಡಬೇಕು, ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದ ಅವರು, ಕಾಮಗಾರಿಯ ಉಸ್ತುವಾರಿ ಮತ್ತು ವೀಕ್ಷಣೆ ಮಾಡುವ ಜವಾಬ್ದಾರಿ ನಗರಸಭೆ ಅಧಿಕಾರಿಗಳು ಮತ್ತು ಅಭಿಯಂತರ ಮೇಲಿದೆ ಅವರು ಸಹ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಬಾಯಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಂಡಿ ಹಮಾಲರ ಕಾಲೋನಿಯ ಹಿರಿಯರಾದ ಖಾದರಸಾಬ್ ಪೈಮಾಶಿ, ಮೌಲಾಸಾಬ ಅಳವಂಡಿ, ಜಿಲ್ಲಾ ಯುವ ಕಾಂಗೈ ನಾಯಕ ಎಂ.ಡಿ.ಜಹೀರ್ ಅಲಿ, ಗುತ್ತಿಗೆದಾರ ಅಮೀರ್ ಅಲಿ ಸೇರಿದಂತೆ ಕಾರ್ಯಕರ್ತರು, ವಾರ್ಡ್‌ನ ಸಾರ್ವಜನಿಕರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Please follow and like us:
error