ಸುವರ್ಣಗ್ರಾಮೋದಯ ಯೋಜನೆಗೆ ಹೆಚ್ಚುವರಿ ೧೨ ಗ್ರಾಮಗಳ ಸೇರ್ಪಡೆ: ಸಂಗಣ್ಣ ಕರಡಿ


ಕೊಪ್ಪಳ ಆ. : ಸುವರ್ಣ ಗ್ರಾಮೋದಯ ಯೋಜನೆಯ ೪ ನೇ ಹಂತದಡಿ ಕೊಪ್ಪಳ ತಾಲೂಕಿಗೆ ಆಯ್ಕೆಯಾದ ಗ್ರಾಮಗಳ ಜೊತೆಗೆ ಹೆಚ್ಚುವರಿಯಾಗಿ ೧೨ ಗ್ರಾಮಗಳನ್ನು ೫. ೮೯ ಕೋಟಿ ರೂ.ಗಳ ಅನುದಾನದೊಂದಿಗೆ ಸರ್ಕಾರ ಸೇರ್ಪಡೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.

ಸುವರ್ಣ ಗ್ರಾಮೋದಯ ಯೋಜನೆಯ ೪ ನೇ ಹಂತದಲ್ಲಿ ಈ ಹಿಂದೆ ಆಯ್ಕೆಯಾಗಿದ್ದ ಗ್ರಾಮಗಳ ಜೊತೆಗೆ ಸದ್ಯ ಹೆಚ್ಚುವರಿಯಾಗಿ ೧೨ ಗ್ರಾಮಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಜು. ೩೦ ರಂದು ಆದೇಶ ಹೊರಡಿಸಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ೫. ೮೯ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿ ಹೆಚ್ಚುವರಿಯಾಗಿ ಆಯ್ಕೆಯಾಗಿರುವ ಕೊಪ್ಪಳ ತಾಲೂಕಿನ ಗ್ರಾಮಗಳ ವಿವರ ಹಾಗೂ ಅನುದಾನದ ವಿವರ ಇಂತಿದೆ. ಹಲಗೇರಿ- ರೂ. ೮೫. ೦೬ ಲಕ್ಷ, ಕುಣಿಕೇರಿ- ೭೭. ೨೩ ಲಕ್ಷ, ಹಾಲವರ್ತಿ- ೫೧. ೧೪ ಲಕ್ಷ, ಹಟ್ಟಿ- ೪೮. ೩೧ ಲಕ್ಷ, ಒದಗನಾಳ- ೪೭. ೮೫ ಲಕ್ಷ, ಕರ್ಕಿಹಳ್ಳಿ- ೪೭. ೦೨ ಲಕ್ಷ, ಮೈನಳ್ಳಿ- ೪೫. ೯೫ ಲಕ್ಷ, ಹಂದ್ರಾಳ- ೪೦. ೧೬ ಲಕ್ಷ, ಗಿಣಿಗೇರಾ-ಬಸಾಪುರ- ೩೮. ೬೭ ಲಕ್ಷ, ಮೋರನಾಳ- ೪೭. ೯೦ ಲಕ್ಷ, ಕಾಸನಕಂಡಿ- ೩೧. ೭೭ ಲಕ್ಷ ಹಾಗೂ ಯತ್ನಟ್ಟಿ ಗ್ರಾಮಕ್ಕೆ ೨೭. ೯೪ ಲಕ್ಷ ರೂ.ಗಳ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒದಗಿಸಿದೆ. ಕೊಪ್ಪಳ ತಾಲೂಕಿನ ೧೨ ಗ್ರಾಮಗಳ ಅಭಿವೃದ್ಧಿಗಾಗಿ ಸುವರ್ಣ ಗ್ರಾಮೋದಯ ಯೋಜನೆಯಡಿ ಸೇರ್ಪಡೆಗೊಳಿಸಿದ್ದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply