You are here
Home > Koppal News > ಕಾನೂನು ದಿನಾಚರಣೆಯನ್ನು ಆಚರಿಸುವದು ಅತ್ಯ ಅವಶ್ಯ : ಬಿ.ದಶರಥ

ಕಾನೂನು ದಿನಾಚರಣೆಯನ್ನು ಆಚರಿಸುವದು ಅತ್ಯ ಅವಶ್ಯ : ಬಿ.ದಶರಥ

ಕೊಪ್ಪಳ : ಇಂದಿನ ದಿನಮಾನಗಳಲ್ಲಿ  ಅಪರಾಧ ಕೃತ್ತಗಳು ಹೆಚ್ಚು ನೆಡೆಯುತ್ತಿರುವದು ವಿಷಾದನೀಯ ಸಂಗತಿ ಆದ್ದರಿಂದ ಕಾನೂನು ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವದು ಅತ್ಯ ಅವಶ್ಯ ಇದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಬಿ.ದಶರಥ ಹೇಳಿದರು.
ಅವರು  ದಕ್ಷಿಣ ಭಾರತ ಕಾನೂನು ಮಾಹಾವಿದ್ಯಾಲಯದಲ್ಲಿ ಕಾನೂನು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಕಡಿಮೆ ತಿಳುವಳಿಕೆ ಇರುವದರಿಂದ ಅವರು ತಪ್ಪು ಮಾಡುತ್ತಾರೆ ಆದ್ದರಿಂದ ಅವರಿಗೆ ಕಾನೂನಿ ಬಗ್ಗೆ ತಿಳಿವಳಿಕೆ ನಿಡಬೇಕು ಮತ್ತು ಎಲ್ಲ ಗ್ರಾಮೀಣ ಪ್ರದೇಶದಲ್ಲಿಯು ಕೂಡ ಕಾನೂನು ದಿನಾಚರಣೆ ಆಚರಿಸುವ ಮೂಲಕ ಗ್ರಾಮೀಣ ಜನರಿಗೆ ಕಾನೂನಿನ ಅರಿವನ್ನು ಮೂಡಿಸಬೇಕು ಎಂದರು.
ನಂತರ   ಲಾ ಅಕಾಡಮಿ ಅಧ್ಯಕ್ಷರು ಹಾಗೂ ರಾಜ್ಯ ವಕೀಲಪರಿಷತ್ ಸದಸ್ಯರು ಬೆಂಗಳೂರು  ಸಂಧ್ಯಾ ಮಾದಿಗನೂರ  ಮಾತನಾಡಿ ಇಂದಿನ ಕಾನೂನು ವಿದ್ಯಾರ್ಥಿಗಳು ಕೂಡ ಉತ್ತಮ ರೀತಿ ಅಭ್ಯಾಸ ಮಾಡಬೇಕು ಅಂದಾಗ ಅಂದಾಗ ಸಮಾಜದಲ್ಲಿ ಮುಂದೆ ಉತ್ತಮ ಹೆಸರು ಮಾಡಲು ಸಾಧ್ಯ ಎಂದರು.
 ನಂತರ ಅಧ್ಯಕ್ಷರು, ಜಿಲ್ಲಾ ವಕೀಲರು ಸಂಘ, ಕೊಪ್ಪಳ  ಎ.ವಿ.ಕಣವಿ ಮಾತನಾಡಿ ಭಾರತ ಸಂವಿಧಾನ ಜಗತ್ತಿನಲ್ಲಿಯೆ ಅತ್ಯಂತ ಬಲಿಷ್ಠವಾಗಿದ್ದು ಸಾಮನ್ಯ ಪ್ರಜೆಯು ಕೂಡ ಅಧಿಕಾರವನ್ನು ಹೊಂದುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದರು.,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರರು ಆದ ಡಾ.ಬಿ.ಎಸ್.ಹನಸಿ ವಹಿಸಿದ್ದರು.ಕಾರ್ಯಕ್ರಮವನ್ನು ಉಪನ್ಯಾಸಕರು ಎಸ್,ಎಂ,ಪಾಟೀಲ ಸ್ವಾಗತಿಸಿದರು,ಕಾರ್ಯಕ್ರಮದಲ್ಲಿ   ಕೆ.ನಾಗಬಸಯ್ಯ ಉಪನ್ಯಾಸಕರು ದ.ಭಾ.ಹಿಂ .ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರು ಭಾರತ ಸಂವಿಧಾನದ ಹುಟ್ಟು ಮತ್ತು ಬೆಳವಣಿಗೆ ಮತ್ತು ವಿದ್ಯಾರ್ಥಿ ಕಳಕಪ್ಪ ಬೆಟಗೇರಿ ಜನನ ಮತ್ತು ಮರನ ನೊಂದಣಿ ಕುರಿತು ಉಪನ್ಯಾಸ ನೀಡಿದರು. ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ   ಬಸವರಾಜ್ ಎಸ್,ಎಂ.ಉಪನ್ಯಾಸಕಿ ಉಷಾದೇವಿ ಹಿರೇಮಠ. ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಅಶ್ವೀನಿ ಪ್ರಾರ್ಥಿಸಿದರು  ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ರಮೇಶರಾವ್ ಗಾಯಕವಾಡ ಮಾಡಿದರು ಕಾಲೇಜಿನ ವಿದ್ಯಾರ್ಥಿ ಜಂಟಿ ಕಾರ್ಯದರ್ಶಿ ಸಂತೋಷ ಕವಲೂರ ವಂದಿಸಿದರ.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿರಿದ್ದರು.                                                

Leave a Reply

Top