ಶಿವಪುರ : ಫೆ.೨೮ ರಂದು ಮಾರ್ಕಂಡೇಶ್ವರ ಸ್ವಾಮಿಯ ರಥೋತ್ಸವ

 ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿರುವ ತಾಲೂಕಿನ ಶಿವಪುರ ಗ್ರಾಮದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ಸಮಿತಿಯಿಂದ ಫೆ.೨೭ ರಂದು ಮಾರ್ಕಂಡೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾಶಿವರಾತ್ರಿ ಜಾಗರಣೆ ಹಾಗೂ ಫೆ.೨೮ ರಂದು ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಬೆದವಟ್ಟಿಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು, ನಗರಗಡ್ಡಿ ಮಠದ ಶ್ರೀ ಶಾಂತಲಿಂಗೇಶ್ವರ ಸ್ವಾಮಿಗಳು, ಅಂಕಲಿಮಠದ ಬ್ರಹ್ಮಶ್ರೀ ವೀರಭದ್ರ ಸ್ವಾಮಿಗಳು ಈ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಶಿವರಾಮಗೌಡ, ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ, ಮಾಜಿ ಶಾಸಕ ಸಂಗಣ್ಣ ಕರಡಿ, ತಾ.ಪಂ. ಸದಸ್ಯ ದೇವಣ್ಣ ಮೇಕಾಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಚನ್ನಪ್ಪಗೌಡ್ರು, ಶಿವಪುರ ಗ್ರಾ.ಪಂ. ಅಧ್ಯಕ್ಷ ಎನ್.ಮಂಜುನಾಥ ಅವರು ಪಾಲ್ಗೊಳ್ಳುವರು. ಈ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.೨೮ ರಂದು ರಾತ್ರಿ ೮.೩೦ ಕ್ಕೆ ಮದ್ದು ಸುಡುವ ಕಾರ್ಯಕ್ರಮ ಅಲ್ಲದೇ ಅಂದು ರಾತ್ರಿ ೧೦.೩೦ ಕ್ಕೆ ಗೌರಿ ಗೆದ್ದಳು ನಾಟಕ ಪ್ರದರ್ಶನ ಜರುಗಲಿದೆ ಎಂದು ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್  ತಿಳಿಸಿದ್ದಾರೆ.
Please follow and like us:

Leave a Reply