ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

koppal: : ಕೊಪ್ಪಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ೨೫ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಕೊಪ್ಪಳ ತಾಲೂಕಿನಲ್ಲಿ ಖಾಲಿ ಇರುವ ೨೫ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಖಾಲಿ ಇರುವ ಗ್ರಾಮಗಳ ವಿವರ ಇಂತಿದೆ.  ಲಿಂಗದಳ್ಳಿ, ವನಬಳ್ಳಾರಿ, ದನಕನದೊಡ್ಡಿ, ಹಾಲವರ್ತಿ, ಭೈರಾಪುರ, ಅಳವಂಡಿ, ಕಂಪ್ಲಿ, ಕೊಡದಾಳ, ಅರಸನಕೇರಿ ತಾಂಡ, ಚಾಮಲಾಪುರ, ಬಸಾಪುರ, ಹೊಸಳ್ಳಿ, ಟಣಕನಕಲ್, ಹಿರೇಕಾಸನಕಂಡಿ, ಮುನಿರಾಬಾದ್ ಡ್ಯಾಂ, ಮುರ್‍ಲಾಪುರ, ಜಬ್ಬಲಗುಡ್ಡ, ಚಿಲವಾಡಗಿ, ಗುಡ್ಲಾನೂರ, ಹನಕುಂಟಿ ಗ್ರಾಮಗಳಲ್ಲಿ ತಲಾ ಒಂದು ಹುದ್ದೆಗಳು ಭಾಗ್ಯನಗರ-೨, ಹಾಗೂ ಕೊಪ್ಪಳ ನಗರದಲ್ಲಿ ೩ ಹುದ್ದೆಗಳಿವೆ.  ಅರ್ಜಿ ಸಲ್ಲಿಸಲು ದಿ: ೯-೧೨-೨೦೧೧ಕ್ಕೆ ೧೮ ರಿಂದ ೪೪ ವರ್ಷ ವಯೋಮಿತಿಯೊಳಗಿರಬೇಕು, ಅಭ್ಯರ್ಥಿಯು ಸ್ಥಳೀಯ ಮಹಿಳೆಯಾಗಿರಬೇಕು, ಅಂದರೆ ಅಂಗನವಾಡಿ ಕೇಂದ್ರ ಸ್ಥಾಪಿಸಿರುವ ವಾರ್ಡ್/ಮೊಹಲ್ಲಾದ ಪ್ರದೇಶದಲ್ಲಿ ವಾಸಿಸುತ್ತಿರಬೇಕು, ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರಿರಬೇಕು, ಒಂದು ವೇಳೆ ಬಿ.ಪಿ.ಎಲ್. ಅಭ್ಯರ್ಥಿಗಳಿಂದ ಅರ್ಜಿ ಬಾರದೇ ಇದ್ದ ಪಕ್ಷದಲ್ಲಿ ಎ.ಪಿ.ಎಲ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.  ಶಾಶ್ವತ ಬಿ.ಪಿ.ಎಲ್ ಅಥವಾ ಎ.ಪಿ.ಎಲ್. ಕಾರ್ಡನ್ನು ಲಗತ್ತಿಸಬೇಕು. ಕನಿಷ್ಟ ೪ ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು, ಸಹಾಯಕಿಯರು ಗೌರವ ಸೇವೆಗೆ ಸೇರಿದ್ದು, ಮೀಸಲಾತಿ ತತ್ವಗಳು ಅನ್ವಯಿಸುವುದಿಲ್ಲ,  ಅಭ್ಯರ್ಥಿಗಳು ಜಾತಿ, ವಾಸಸ್ಥಳ ಪ್ರಮಾಣ ಪತ್ರವನ್ನು ಆಯಾ ತಹಸಿಲ್ದಾರರಿಂದ ಪಡೆದು ಸಲ್ಲಿಸಬೇಕು.  ಪ.ಜಾತಿ/ಪ.ಪಂಗಡ/ದೇವದಾಸಿ/ವಿಧವೆ/ಪರಿತಕ್ತೆಯರು/ ಬಡತನ ರೇಖೆ ಕುಟುಂಬ/ ನಿರಾಶ್ರಿತ ಮಹಿಳೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ನಿವಾಸಿಗಳು ಸಂಬಂಧಿಸಿದ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.  ವಿಧವೆಯರಿಗೆ ನೇರ ಆದ್ಯತೆ ನೀಡಲಾಗುವುದು.  ಇದಕ್ಕಾಗಿ ಗಂಡನ ಮರಣ ಪ್ರಮಾಣ ಪತ್ರ ಲಗತ್ತಿಸಬೇಕು.  ಅಭ್ಯರ್ಥಿಗಳು ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.  ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೂಚನಾ ಫಲಕದಲ್ಲಿ ನೀಡಲಾಗಿದ್ದು, ಅರ್ಜಿಯನ್ನು ಬೆರಳಚ್ಚು ಮಾಡಿ ಅಥವಾ ಕೈ ಬರಹದಲ್ಲಿ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಹಸಿಲ್ದಾರರ ಕಚೇರಿ ಆವರಣ, ಕೊಪ್ಪಳ ಇವರಿಗೆ ಡಿಸೆಂಬರ್ ೯ ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು  ತಿಳಿಸಿದ್ದಾರೆ.

Related posts

Leave a Comment