fbpx

ನಿಮ್ಮ ಮಕ್ಕಳಿಗೆ ಇಂದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.

ಜನವರಿ
17 ಅಂದರೆ ಇಂದು ಮೊದಲನೇ ಸುತ್ತು & ಫೆ.21ಕ್ಕೆ ಎರಡನೇ ಸುತ್ತು ಪಲ್ಸ್​​ಪೊಲೀಯೋ
ಲಸಿಕಾ ಕಾರ್ಯಕ್ರಮ ನಡೆಯಲಿದೆ. 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಕಡ್ಡಾಯವಾಗಿದ್ದು,
ಸುಮಾರು 74.25 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗ್ತಿದೆ. ಇದಕ್ಕಾಗಿ, 32617 ಬೂತ್​ಗಳ
ಸ್ಥಾಪಿಸಲಾಗಿದ್ದು, 6, 522 ಮೇಲ್ವಿಚಾರಕರು ಹಾಗೂ 1,03,464 ಲಸಿಕಾ ಕಾರ್ಯಕರ್ತರು
ಸಾಥ್​​ ನೀಡ್ತಿದ್ದಾರೆ. ಅಷ್ಟೇ ಅಲ್ಲ, 51, 732 ತಂಡ ರಚಿಸಲಾಗಿದ್ದು, 1205 ಸಂಚಾರಿ
ತಂಡ ಹಾಗೂ 1,736 ಟ್ರಾನ್ಸಿಟ್ ತಂಡ ಕಾರ್ಯಾಚರಣೆ ನಡೆಸಲಿವೆ. ಕಾರ್ಯಕರ್ತರು ವಿವಿಧ
ತಂಡಗಳಾಗಿ ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳ, ಮಾರುಕಟ್ಟೆ ಪ್ರದೇಶ, ವಿಮಾನ ನಿಲ್ದಾಣ
ಸೇರಿದಂತೆ ಹಲವೆಡೆಗೆ ತೆರಳಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಭಾರತವನ್ನು
ವಿಶ್ವಸಂಸ್ಥೆ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ದಕ್ಷಿಣ ರಾಜ್ಯಗಳ
ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಸಾಧನೆಯ ಪ್ರಶಂಸನಾ ಪತ್ರ ಕೂಡಾ ಪಡೆದಕೊಂಡಿದೆ. ಆದರೆ
ನೆರೆಯ ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣ ಕಂಡುಬರುವುದರಿಂದ ಮುಂಜಾಗ್ರತಾ ಕ್ರಮವಾಗಿ
ಲಸಿಕೆ ನೀಡಲಾಗುತ್ತಿದೆ.
Please follow and like us:
error

Leave a Reply

error: Content is protected !!