You are here
Home > Koppal News > ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ನೂತನ ಗೋಪುರ ಕಳಸಾರೋಹಣ.

ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ನೂತನ ಗೋಪುರ ಕಳಸಾರೋಹಣ.

ಕೊಪ್ಪಳ: ಭಾಗ್ಯನಗರ ಗ್ರಾಮದಲ್ಲಿ ದಿನಾಂಕ ೦೧-೦೫-೨೦೧೫ ರಂದು ಶುಕ್ರವಾರ ಬೆಳಗ್ಗೆ ೭:೩೦ಕ್ಕೆ ವೇ.ಮೂ.ಶ್ರೀ ರುದ್ರಮುನಿ ಸ್ವಾಮಿಗಳು ನೇತೃತ್ವದಲ್ಲಿ ಹೋಮ, ನಂತರ ಬೆಳಗ್ಗೆ ೧೦:೦೦ ರಿಂದ ೧೧:೦೦ ಗಂಟೆಯವರಗೆ ನೂತನ ಗೋಪುರ ಕಳಸಾರೋಹಣ ನೆರವೇರುವುದು. ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀಮ.ನಿ.ಪ್ರ.ಸ್ವ.ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ, ಶ್ರೀ ಪರಮಹಂಸ ಶಿವಪ್ರಕಾಶಾನಂದ ಸ್ವಾಮಿಗಳು ಶ್ರೀ ಜಗದ್ಗುರು ಶಂಕರಾಚಾರ್ಯ ಮಠ ಭಾಗ್ಯನಗರ, ಶ್ರೀ ಮುರಸಂಗಯ್ಯ ದೇವಾಂಗಮಠ ಸಾ|| ಕಂಪ್ಲಿ ವಹಿಸುವರು, ಈ ಕಾರ್ಯಕ್ರಮಕ್ಕೆ ಕೆ.ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ, ಸಂಗಣ್ಣ ಕರಡಿ ಸಂಸದರು ಕೊಪ್ಪಳ, ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳ, ಶ್ರೀನಿವಾಸ ಗುಪ್ತಾ ಅಧ್ಯಕ್ಷರು ಶ್ರೀ.ಗು.ಕ.ದೇ.ಸೇ.ಸಂ(ರಿ)ಭಾಗ್ಯನಗರ, ಅಮರೇಶ ಕುಳಗಿ ಅಧ್ಯಕ್ಷರು ಜಿ.ಪಂ ಕೊಪ್ಪಳ, ರಾಘವೇಂದ್ರ ಪಾನಘಂಟಿ ಅಧ್ಯಕ್ಷರು ಜಿ.ನ್ಯಾ.ಸಂ ಕೊಪ್ಪಳ ಇನ್ನೂ ಮುಂತಾದವರು ಭಾಗವಹಿಸಲ್ಲಿದ್ದ ಹಾಗೂ ಸಂಗೀತ ಕಾರ್ಯಕ್ರಮ ಸಾಯಂಕಾಲ ೬:೦೦ ಘಂಟೆಗೆ ಗಂಧರ್ವ ಸಂಗೀತ ವಿದ್ಯಾಲಯ ಸಾ|| ಇಳಕಲ್ ಇವರಿಂದ ಡಾ|| ಶಂಭು ಬಳಿಗಾರ ಮತ್ತು ಡಾ|| ನಾರಾಯಣ ವನಕಿ ಹಾಗೂ ಡಾ|| ಸುಭಾಸ ಕಾಕಂಡಕಿ, ಶ್ರೀ ಶಿವಾನಂದ ಓದಾ, ಶ್ರೀ ಪ್ರಭು ಬನ್ನಗೊಳ, ಹಾರ್ಮೋನಿಯಂ: ಶ್ರೀ ವಹಿಪತಿ ಕುಲಕರ್ಣಿ, ತಬಲಾ: ಶ್ರೀ ವೀರಭದ್ರಯ್ಯ ಗುಡ್ಡದಕಲ್ಮಠ ಇವರಿಂಅ ಭಕ್ತಿ ಸಂಗೀತ ಮತ್ತು ಜಾನಪದ ಸಂಗೀತ ಕಾರ್ಯಕ್ರಮ ಜರುಗುವುದು ಕಾರಣ ಭಾಗ್ಯನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು ಹಾಗೂ ಸಕಲ ಭಕ್ತರು ಆಗಮಿಸಿ ಈ ಕಾಯಖ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರಿಬಸವೇಶ್ವರ ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Top