ಕವಿಸಮಯ ಕಾರ್ಯಕ್ರಮ

ಕೊಪ್ಪಳ : ಸಮಾನಮನಸ್ಕ ಕವಿಮಿತ್ರರ ಸಮೂಹ ಈಗ್ಗೆ ಎರಡು ವಾರಗಳಿಂದ ಕವಿ ಸಮಯ ಕಾರ್ಯಕ್ರಮ ಏರ್ಪಡಿಸಿತ್ತು. ಪ್ರತಿ ರವಿವಾರ ಸಂಜೆ ಜರುಗುವ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಸ್ವಂತ ಕವಿತೆ/ಚುಟುಕು/ಶಾಯಿರಿ/ಗಜಲ್ ಗಳನ್ನು ವಾಚಿಸುವುದು,ಓದಿದ ಕವಿತೆಯನ್ನು ಕುರಿತು ಉಪಸ್ಥಿತರಿರುವ ಹಿರಿಯ ಕವಿಗಳು ವಿಮರ್ಶಿಸುವರು. ನಗರದಲ್ಲಿ ರವಿವಾರ ನಡೆದ ಕವಿ ಸಮಯದಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ,ಶಿ.ಕಾ.ಬಡಿಗೇರ,ಸಿರಾಜ್ ಬಿಸರಳ್ಳಿ,ವೀರಣ್ಣ ಹುರಕಡ್ಲಿ, ವೀರಣ್ಣ ವಾಲಿ ಮುಂತಾದವರು ಭಾಗವಹಿಸಿ, ಕವಿತೆ ವಾಚಿಸಿದರು. ಬರುವ ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಕವಿ ಸಮಯ ಸಂಜೆ4.30 ಗಂಟೆಗೆ ಜರುಗಲಿದೆ. ಆಸಕ್ತ ಕವಿಗಳು ಭಾಗವಹಿಸಲು ಕವಿ ಮಿತ್ರರ ಸಮೂ ಹ ವಿನಂತಿಸಿದೆ.ವಿವರಗಳಿಗೆ ಸಿರಾಜ್ ಬಿಸರಳ್ಳಿ 9880257488, ಶಿ.ಕಾ.ಬಡಿಗೇರ್ 9036265037 ಸಂಪರ್ಕಿಸಿ

Please follow and like us:
error

Related posts

Leave a Comment