fbpx

ಇರಕಲ್‌ಗಡಾ ಕ್ಲಷ್ಟರ ಮಟ್ಟದ ಕ್ರೀಡಾಕೂಟ.

ಕೊಪ್ಪಳ – ದಿನಾಂಕ ೦೫-೦೮-೨೦೧೫ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರಕಲಗಡಾದಲ್ಲಿ
ಕ್ಲಷ್ಟರ ಮಟ್ಟದ ಪ್ರಾಥಮಿಕಶಾಲೆಗಳ ಕ್ರೀಡಾಕೂಟಗಳು ಜರುಗಿದವು.  ಈ ಸಂದರ್ಭದಲ್ಲಿ
ಕ್ರೀಡಾ ದ್ವಜಾರೋಣವನ್ನು ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಕಸ್ತೂರೆಮ್ಮ ಬಿ. ಪಾಟೀಲ
ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ ಅಧ್ಯಕ್ಷೆ ಶ್ರೀಮತಿ
ದ್ಯಾಮವ್ವ ವಂಕಲಕುಂಟಿ ವಹಿಸಿಕೊಂಡಿದ್ದರು. ಕಾರ್ಯಕ್ರಮ ಕುರಿತು. ಪ್ರಾಸ್ತಾವಿಕ
ನುಡಿಗಳನ್ನು ಸಮೂಹ ಸಂಪನ್ಮೂಲ ವ್ಯಕ್ತಗಳಾದ ದ್ಯಾಮಣ್ಣ ಮುರಡಿ ಮಾತನಾಡುತ್ತಾ, ಪಾಠಗಳು
ಮತ್ತು ಕ್ರೀಡೇಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪಾಟಗಳ ಜೊತೆಗೆ ಕ್ರೀಡೆಗಳು
ಮಗುವಿನ ದೈಹಿಕ, ಮಾನಸಿಕ, ಬೆಳವಣಿಗೆಗೆ ಸಹಕಾರಿಯಾಗಿವೆ. ಎಲ್ಲರೂ ಮ್ಕಕಳ:
ಕ್ರೀಡಾಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಲು ಕರೆ ನೀಡಿದರು.  ಇನ್ನೂರ್ವ ಅತಿಥಿಗಳಾದ
ಶಿಕ್ಷಣ ಸಂಯೋಜಕರಾದ ಶ್ರೀನಿವಾಸ ಮಾತನಾಡಿ, ಕ್ರೀಡೆಗಳು ಊಟದಲ್ಲಿ ಉಪ್ಪಿನಕಾಯಿ
ಇದ್ದಂತೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ ಎಂದರು.  ಈ ಸಂದರ್ಭದಲ್ಲಿ
ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಗಾ. ಪಂ. ಸರ್ವಸದಸ್ಯರು ಹಾಗೂ ನೌಕರ
ಸಂಘದ ಪದಾದಿಕಾರಿಗಳು, ಶಿಕ್ಷಕರ ಸಂಘದ ಪದಾದಿಕಾರಿಗಳು, ಪತ್ತಿನ ಸಂಘದ ಪದಾಧಿಕಾರಿಗಳು
ಭಾಗವಹಿಸಿದ್ದರು.  ಕು. ಪವಿತ್ರಾ ನಿರೂಪಿಸಿದರು. ಸುದೇಂದ್ರ ದೇಸಾಯಿ ಸ್ವಾಗತಿಸಿದರು.
ದ್ಯಾಮಣ್ಣ ಮುರಡಿ ಸಿ.ಆರ್.ಪಿ ವಂದಿಸಿದರು.
Please follow and like us:
error

Leave a Reply

error: Content is protected !!