fbpx

ಪ್ರತಿ ವಿದ್ಯಾರ್ಥಿಯಲ್ಲಿ ಒಬ್ಬ ವಿಜ್ಞಾನಿ ಅಡಗಿದ್ದಾನೆ ಸಿ.ವ್ಹಿ.ಯಳಮಗ್ಗದ.

ಕೊಪ್ಪಳ -08-  ಇಂದು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ, ಕರ್ನಾಟಕ ಸರ್ಕಾರ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಪ್ಪಳ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿನ ಸುಮಾರು ೨೫೦  ವಿದ್ಯಾರ್ಥಿಗಳಿಗೆ ಏರ್ಪಡಿಸಿದ “ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಪ್ರತಿ ವಿದ್ಯಾರ್ಥಿಯಲ್ಲಿ ಸೂಕ್ತ ಪ್ರತಿಭೆ ಅಡಗಿರುತ್ತದೆ ಇಂಥಹ ನೇರ ಸಂವಾದ ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಯ ಜೀವನದಲ್ಲಿ ವಿಜ್ಞಾನಿಯಾಗಲು ಕನಸು ಕಾಣುವ ವಿದ್ಯಾರ್ಥಿಗೆ ಸೂಕ್ತ ವೇದಿಕೆ ಎಂದು ಸೆಂಟರ್‌ಫಾರ್ ನ್ಯಾನೋ ಮತ್ತು ಸಾಫ್ಟಮ್ಯಾಟರ್ ಸೈನ್ಸ್‌ನ ವಿಜ್ಞಾನಿ ಸಿ.ವ್ಹಿ.ಯಳಮಗ್ಗದ್ ಅಭಿಪ್ರಾಯಪಟ್ಟರು. 
ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರದಲ್ಲಾಗುತ್ತಿರುವ ಏರು-ಪೇರು, ಪರಿಸರ ಮಾಲಿನ್ಯ ಇತರೆ ವಿಷಯಗಳ ಕುರಿತು ಮಾಹಿತಿ ಪಡೆಯುವುದು ಅತ್ಯಂತ ಅವಶ್ಯಕತೆಯಾಗಿದೆ. ಅಲ್ಲದೇ, ನಮ್ಮ ಪರಿಸರ ಕಲುಷಿತಗೊಳ್ಳುತ್ತಿದೆ. ಅಲ್ಲದೇ ನೀರು, ಗಾಳಿ ಮತ್ತು ಆಹಾರ ಸೇರಿದಂತೆ ಎಲ್ಲವೂ ಕಲುಷಿತಗೊಳ್ಳುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ಇಂತಹ ನೇರ ಸಂವಾದ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಲಿವೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ವಿಚಾರಗಳನ್ನು ಹೊರ ಹಾಕಿದಾಗಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪ್ರಸ್
ಸಂವಾದ ೧ ರಲ್ಲಿ   ನಾಗಭೂಷಣ ವಿಜ್ಞಾನಿಗಳು ಬೆಂಗಳೂರು ಇವರು ಯ್ಯೂಟುಬ್ ಬೆಳೆದು ಬಂದ ಹಾದಿ ಹಾಗೂ ಅದರ ಬಳಕೆ ಬಗ್ಗೆ ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿದರು.
ಸಂವಾದ ೨ ರಲ್ಲಿ ಮಂಜುನಾಥ ಎಸ್. ಸಹಾಯಕ ಪ್ರಾಧ್ಯಾಪಕರು ಬಳ್ಳಾರಿ ರವರು ನ್ಯಾನೋ-ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಬಗ್ಗೆ ಮಾಹಿತಿ ನೀಡಿದರು.
            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ತಿಮ್ಮಾರೆಡ್ಡಿ ಮೇಟಿ, ಮುಖ್ಯ ಅತಿಥಿಗಳಾಗಿ ದೊಡ್ಡಬಸಪ್ಪ, ಗಿರೀಶ ಕಡ್ಲೆವಾಡ, ಉಮೇಶ ಪೂಜಾರ, ಕುಂಟೆಪ್ಪ ಗೌರಿಪುರ, ಬಸವರಾಜ ಬಿಲ್ಲಾರ, ಶರಣಪ್ಪ.ಕೆ, ಕೊಟ್ರಸ್ವಾಮಿ ಎಸ್. ಎಮ್. ರಾಜೇಶ ಅಂಗಡಿ, ದಾರುಕಾಸ್ವಾಮಿ, ಎಸ್.ಎಸ್.ಸುಂಕದ, ಮುಂತಾದವರು ಭಾಗವಹಿಸಿದ್ದರು
ಈ ಕಾರ್ಯಕ್ರಮವನ್ನು ಮರಿಶಾಂತವೀರ ಶೆಟ್ಟರ ನಿರೂಪಿಸಿದರು. ವೀರನಗೌಡ ಮರಿಗೌಡರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ ಅಂಗಡಿ ಸ್ವಾಗತ ಕೊರಿದರು. ವಂದನಾರ್ಪಣೆಯನ್ನು ಶರಣಪ್ಪ ಸುಂಕದ ನಿರ್ವಹಿಸಿದರು.

ತುತ ವಿದ್ಯಾರ್ಥಿಗಳಲ್ಲಿನ ಡಿ.ಎನ್.ಎ ಮತ್ತು ಆರ್.ಎನ್.ಎ  ಹಿಂದಿಗಿಂತಲೂ ಪ್ರೌಢಮೆಯನ್ನು ಹೊಂದಿದೆ ಎಂದು ಈಗಾಗಲೇ ಸಂಶೋಧನೆಯಿಂದ ದೃಢಪಟ್ಟಿದ್ದು, ಇದರಿಂದ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಚಿಂತನೆ ನಡೆಯುತ್ತದೆ ಎಂದು ಹೇಳಿದರು.

Please follow and like us:
error

Leave a Reply

error: Content is protected !!