ಆ.೧೭ ರಂದು ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ

 ಕೊಪ್ಪಳ ಜಿಲ್ಲಾ ಹಾಗೂ ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜ, ತಾಲೂಕ ವಿಶ್ವಕರ್ಮ ನೌಕರರ ಸಂಘ ಹಾಗೂ ವಿಶ್ವಕರ್ಮ ವಿದ್ಯಾರ್ಥಿ ನಿಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಾವಂತ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಮೌನೇಶ್ವರ ಬೆಳ್ಳಿ ಮೂರ್ತಿಯ ದಾನಿಗಳ ಸನ್ಮಾನ ಸಮಾರಂಭವನ್ನು ಆ.೧೭ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಸಿರಸಪ್ಪಯ್ಯ ಸ್ವಾಮಿ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು ಕೊಪ್ಪಳದ ಶ್ರೀ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು, ಗಿಣಿಗೇರಿಯ ದೇವೀಂದ್ರ ಮಹಾಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಮಹಾಸ್ವಾಮಿಗಳು, ಕೊಪ್ಪಳ ಶಾಖಾ ಮಠದ ಲೆಕ್ಕಿಹಾಳದ ಸಿರಸಪ್ಪಯ್ಯ ಮಹಾಸ್ವಾಮಿಗಳು, ಲೇಬಗೇರಿಯ ಬ್ರಹ್ಮೇಂದ್ರ ಸ್ವಾಮಿಗಳು, ಶಾಡ್ಲಗೇರಿಯ ವಿರುಪಾಕ್ಷಯ್ಯ ಸ್ವಾಮಿಗಳು, ಲೇಬಗೇರಿಯ ನಾಗಮೂರ್ತಿ ಸ್ವಾಮಿ, ಹಿರೇಹಾಳಮಠದ ಶಿವಶಂಕರ ಸ್ವಾಮಿ, ಗಿಣಗೇರಿಯ ನರಸಿಂಹ ಸ್ವಾಮಿ ದಿವಾಕರ ಸ್ವಾಮಿ, ಕಾತರಕಿ-ಗುಡ್ಲಾನೂರಿನ ವಿರುಪಾಕ್ಷಯ್ಯ ಸ್ವಾಮಿ, ಹರ್ಲಾಪುರದ ಶ್ರೀ ಗುರು ಮೌನ ಚಿದಾನಂದಜ್ಜನವರ ಮಠದ ಮುತ್ತಪ್ಪಜ್ಜನವರು, ಗಿಣಿಗೇರಿಯ ಸುಬ್ಬಣ್ಣಾಚಾರ್ಯ ವಿದ್ಯಾನಗರ  ಅವರು ಸಾನಿಧ್ಯ ವಹಿಸುವರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು ಅವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ನೆರವೇರಿಸಲಿದ್ದಾರೆ. ವಿಶೇಷ ಉಪನ್ಯಾಸಕರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|| ಕಲವೀರ ಮನ್ವಾಚಾರ್ಯ ಅವರು ಆಗಮಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಪ್ರಾಚಾರ್ಯ ಮಂಟೆಲಿಂಗಾಚಾರ,   ನ್ಯಾಯವಾದಿಗಳಾದ ಐ.ವ್ಹಿ.ಪತ್ತಾರ, ಕಾಳೇಶ ಎಸ್.ಬಡಿಗೇರ, ಬಾಗಲಕೋಟೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಗುಂಡಪ್ಪ ಕೆ.ಎಂ., ವರವಿಯ ಶ್ರೀ ಮೌನೇಶ್ವರ ಟ್ರಸ್ಟ್‌ನ ಅಧ್ಯಕ್ಷ ಚಂದ್ರಕಾಂತ ಸೋನಾರ, ಉತ್ತರ ಕರ್ನಾಟಕ ವಿಶ್ವಕರ್ಮ ಸಮಾಜದ ರಾಯಚೂರು ಅಧ್ಯಕ್ಷ ಬಿ.ಚಂದ್ರಪ್ಪ, ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅಶೋಕ ವೇದಪಾಠಕ, ಕೆಪಿಟಿಸಿಎಲ್‌ನ ಇ.ಇ. ಎಂ.ಎಸ್.ಪತ್ತಾರ, ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಶ್ರೀ ವಿಶ್ವಕರ್ಮ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ  ವೀರಭದ್ರಪ್ಪ ಸೋಮಣ್ಣ ಜಂತಕಲ್, ಶ್ರೀ ವಿಶ್ವಕರ್ಮ ನಗರ ಘಟಕದ ಅಧ್ಯಕ್ಷರಾದ ಮಂಜುನಾಥ ವಾಸಪ್ಪ ಬನ್ನಿಕೊಪ್ಪ, ನಗರಸಭೆ ಮಾಜಿ ಸದಸ್ಯ ಸುರೇಶ ಘಟ್ಟೆಪ್ಪ ಸೇರಿದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಸಮಾಜದ ಅಧ್ಯಕ್ಷರು, ನೌಕರರು, ಸರ್ವ ಸದಸ್ಯರು, ಸಮಾಜ ಬಾಂಧವರು ಆಗಮಿಸಲಿದ್ದಾರೆ ಎಂದು ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷರಾದ ರುದ್ರಪ್ಪ ಬಡಿಗೇರ, ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶೇಖರಪ್ಪ ಕಾಳಪ್ಪ ಬಡಿಗೇರ ಹಾಗೂ ವಿಶ್ವಕರ್ಮ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎ.ಪ್ರಕಾಶ   ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು  ತಿಳಿಸಿದ್ದಾರೆ. 
Please follow and like us:
error