ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ಹಂಚಿಕೆ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-೦೨, ಕ್ಷೇತ್ರದ ಬಂಡಿಹರ್ಲಾಪುರ, ಹಿಟ್ನಾಳ ಜಿಲ್ಲಾ ಪಂಚಾಯತ, ಹಾಗೂ ತಾಲೂಕು ಪಂಚಾಯತಗಳ ಚುನಾವಣೆ ನೀಮಿತ್ತ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಗಳಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಪರಿಗಣಿಸಿ ಎಲ್ಲಾ ವರ್ಗದ ಜನರಿಗೆ ಆದ್ಯತೆಸಿಗುವಂತೆ ಪಕ್ಷದ ವರಿಷ್ಟರಿಗೆ ಮನ ಒಲಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುವುದು. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ನನವರು ರಾಜ್ಯದ ಜನತೆಗೆ ನೀಡಿರುವ ಅನುಪಮ ಯೋಜನೆಗಳನ್ನು ಜನರ ಬಳಿವೈದು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಕೊಪ್ಪಳ ಜಿಲ್ಲಾ ಪಂಚಾಯತ ಕಾಂಗ್ರೆಸ್ ತೆಕ್ಕೆಗೆ ಬರುವಂತೆ ಜಿಲ್ಲೆಯ ಎಲ್ಲಾ ನಾಯಕರು ಪ್ರಾಮಾಣಿಕ ಪ್ರಯತ್ನಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಟಿ.ಜನಾರ್ಧನ ಹುಲಗಿ, ಕೆ.ರಮೇಶ ಹಿಟ್ನಾಳ, ಸುರೇಶ ಬುಮರೆಡ್ಡಿ, ಕೆ.ಎಮ್.ಸಯ್ಯದ್, ವಿಶ್ವನಾಥ ರಾಜೂರು, ಬಾಷುಸಾಬ್ ಕತೀಬ್, ಭರಮಪ್ಪ ಬೇಲ್ಲದ್, ಬಾಲಚಂದ್ರ, ಕಾಟನ್‌ಪಾಷಾ, ಜಾಕೀರ್ ಕಿಲ್ಲೇದಾರ, ದೇವಣ್ಣ ಮೇಕಾಳಿ, ಲಿಂಗರಾಜ ಅಗಳಕೇರಾ, ವೀರಭದ್ರಸ್ವಾಮಿ, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರೆಂದು ವಕ್ತಾರ ಅಕ್ಬರಪಾಷಾ ಪಲ್ಟನ ತಿಳಿಸಿರುತ್ತಾರೆ.

Leave a Reply