ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೧ ಲಕ್ಷ ರೂ ಚೆಕ್ಕ ವಿತರಣೆ

 ತಾಲುಕಿನ ಹಿರೇಸೋಳಿಕೇರಿ ಗ್ರಾಮದ ಸಂಜೀವಪ್ಪ ಮಡಿವಾಳ ಎಂಬಿವವರು ಇತ್ತಿಚೆಗೆ ಬೆಂಗಳೂರಿನ ಜಯನಗರ ೪ ನೇ ಬ್ಲಾಕ್, ಗೀತಾ ಕಾಲೋನಿ, ೨೯ ನೇ ’ಎ’ ಕ್ರಾಸ್ ನಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಟ್ಟಡದ ಏಲಿಂದ ಬಿದ್ದು ಮೃತಪಟ್ಟಿದ್ದರು. ಸದರಿಯವರ ಕುಟುಂಬದವರು ಕಡುಬಡವರಾಗಿದ್ದು ಜೀವನ ನಿರ್ವಹಣೆಗೆ ಮೃತ ವ್ಯಕ್ತಿಯನ್ನೇ ಅವಲಂಬಿಸಿದ್ದರು. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಪರಿಹಾರ ನೀಡಲು ಕೋರಲಾಗಿತ್ತು. ಸದರಿ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೃತರ ಕುಟುಂಬಕ್ಕೆ ತಮ್ಮ ಪರಿಹಾರ ನಿದಿಯಿಂದ ೧ ಲಕ್ಷ ರೂ ಚೆಕ್ಕ ನಿಡಿರುತ್ತಾರೆ. 
ಈ ಸಂದರ್ಭದಲ್ಲಿ ವಿದಾನಪರಿಷತ್ ಮಾಜಿ ಸದಸ್ಯರಾದ ಕರಿಯಣ್ಣ ಸಂ

ಗಟಿ, ಮೃತರ ಕುಟುಂಬದ ಈರವ್ವ, ಮಾಜಿ ತಾ. ಪಂ ಸದಸ್ಯ ಮರಿಯಪ್ಪ, ದ್ಯಾಮಪ್ಪ, ಕರಿಯಪ್ಪ ಕರೇಗೌಡ್ರ, ರಾಮನಗೌಡ್ರ, ಯಮನೂರಪ್ಪ ಪೂಜಾರಿ, ಮಲ್ಲಪ್ಪ ಮೇಟಿ, ಈಶಪ್ಪ ಗೌಡ್ರ, ಹನಮಪ್ಪ ಮಡಿವಾಳರ, ಯಲ್ಲಪ್ಪ ಮೆತಗಲ್, ಮುಂತಾದವರು ಉಪಸ್ಥಿತರಿದ್ದರು.

Related posts

Leave a Comment