ದಶಕ ಕಳೆದರೂ ಜಿಲ್ಲೆಯಲ್ಲಿ ಜಾರಿಯಾಗದ ಮಾಹಿತಿ ಹಕ್ಕು ಕಾಯ್ದೆ ನಿಯಮಗಳು

ಕೊಪ್ಪಳ : ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಸಾರ್ವಜನಿಕ ಪ್ರಾಧಿಕಾರ/ಇಲಾಖೆಗಳ ಕಾರ್ಯನಿರ್ವಹಣೆಯ ಹೊಣೆಗಾರಿಕೆಯನ್ನು ಹೆಚ್ಚಿಸಲು, ಮಾಹಿತಿ ಹಕ್ಕು ಅಧಿನಿಯಮ ೨೦೦೫, (೧೨ ನೇ ಅಕ್ಟೋಬರ್-೨೦೦೫ ರಂದು) ಜಾರಿಯಾಗಿರುತ್ತದೆ. ಇಂದಿಗೆ ಒಂದು ದಶಕ ಕಳೆದರೂ ಕೊಪ್ಪಳ ಜಿಲ್ಲೆಯಲ್ಲಿ ಅಧಿನಿಯಮದಂತೆ ಎಲ್ಲೂ ಅನುಷ್ಠಾನವಾಗದಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿ ಕೊಪ್ಪಳ  ಇದಕ್ಕೊಂದು ನಿರ್ದೇಶನ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ೫೩ ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು, ನಗರದ ಸರ್ಕಾರಿ ಮತ್ತು ಖಾಸಗಿ ಕಟ್ಟಡದಲ್ಲಿರುವ ೨೫ ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಇಲಾಖೆಗಳು ಹಾಗೂ ನಾಲ್ಕು ತಾಲೂಕಗಳ ಮಟ್ಟದಲ್ಲಿರುವ ಅರೆ ಸರ್ಕಾರಿ ಸಂಸ್ಥೆ-ನಿಗಮಗಳ ಕಛೆರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ, ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-೨೦೧೧, ಹಾಗೂ ಕರ್ನಾಟಕ ಲೋಕಾಯುಕ್ತ ಕಾಯ್ದೆಯನ್ವಯ ಸಾರ್ವಜನಿಕರಿಗಾಗಿ ದಕ್ಕುವ ಹಕ್ಕು ಮತ್ತು ಸೇವೆಗಳ ಬಗ್ಗೆ  ಸೂಚನಾ ಫಲಕಗಳು, ಅಂತರ್ಜಾಲ ಒಳಗೊಂಡಂತೆ ಬೇರಾವುದೇ ವಿಧಾನದಿಂದ ಪ್ರಕಟಿಸಬೇಕಾದ ಅಧಿನಿಯಮಗಳಡಿಯಲ್ಲಿನಂತೆ ಪ್ರಕಟಿಸದೇ ಇರುವುದು ಸ್ಪಸ್ಟವಾಗಿ ಕಂಡುಬರುತ್ತಿದೆ.
ಆಡಳಿತದಲ್ಲಿ ಪಾರದರ್ಶಕತೆ ಮುಕ್ತತೆ ಹಾಗೂ ಸಾರ್ವಜನಿಕ ನೌಕರರಲ್ಲಿ ಹೊಣೆಗಾರಿಕೆಯನ್ನು ಉಂಟುಮಾಡುವುದು ಈ ಕಾಯಿದೆಯ ಉದ್ದೇಶವಾಗಿದೆ. ಮಾಹಿತಿ ಹಕ್ಕು ಅಧಿನಿಯಮವನ್ನು ಮಾನವ ಹಕ್ಕುಗಳ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಈ ಕಾಯ್ದಿಯನ್ನು ಅನುಷ್ಠಾನಕ್ಕೆ ತರುವುದು ಎಲ್ಲಾ ಸಾರ್ವಜನಿಕ ಪ್ರಾಧಿಕಾರ / ಇಲಾಖೆಗಳ ಜವಾಬ್ದಾರಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಪಾಲಿಸಬೇಕಾದವರೇ ಕಾನೂನು ಪಾಲನೆ ಮಾಡದಿರುವುದು ಒಂದಡೆಯಾದರೆ ಮೊತ್ತೊಂದಡೆ ಸಂವಿಧಾನದತ್ತವಾಗಿ ದೊರಕಿರುವ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ದೊಡ್ಡ ಅಪರಾಧವಾಗಿದೆ. 
ಸರ್ಕಾರ ಹಾಗೂ ಅದರ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಬದಲಾವಣೆ ತರಲು ಮಾಹಿತಿ ಹಕ್ಕು ಅಧಿನಿಯಮ ಒಂದು ಪ್ರಬಲ ಸಾಧನವಾಗಿದೆ. ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ದೃಷ್ಠಿಯಿಂದ ಸರ್ಕಾರಿ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಹಿತಿಯನ್ನು ಪಡೆಯಲು ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕಿನ ಕಾರ್ಯರೂಪದ ವ್ಯವಸ್ಥೆಯನ್ನು ಈ ಕಾಯ್ದೆಯು ಅವಕಾಶ ಮಾಡಿಕೊಟ್ಟಿದೆ. ಆದರೆ ಜಿಲ್ಲೆಯಲ್ಲಿ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯು ಇದೆ. 
ಮಾಹಿತಿ ಹಕ್ಕು ಕಾಯ್ದೆ, ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-೨೦೧೧, ಹಾಗೂ ಕರ್ನಾಟಕ ಲೋಕಾಯುಕ್ತ ಕಾಯ್ದೆಯನ್ವಯ ಸಾರ್ವಜನಿಕರಿಗಾಗಿ ಪ್ರಕಟಿಸಬೇಕಾದ ಮಾಹಿತಿ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಅದೇಶವಿದ್ದರೂ ಸಹ ಜಿಲ್ಲಾ ಕೇಂದ್ರದಲ್ಲಿರುವ ಸುಮಾರು ೭೮ ಕ್ಕೂ ಹೆಚ್ಚು ಇಲಾಖೆಗಳ ಪೈಕಿ ಕೇವಲ ೫ ಇಲಾಖೆಗಳಲ್ಲಿ ಮಾತ್ರ ಈ ಕಾಯ್ದೆ ನಿಯಮಗಳಡಿ ಸಾರ್ವಜನಿಕರಿಗಾಗಿ ಸೂಚನಾ ಫಲಕದಲ್ಲಿ ಅಪೂರ್ಣವಾಗಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದು ಬಿಟ್ಟರೇ ಬೇರೆ ಯಾವ ಇಲಾಖೆಗಳಲ್ಲಿ-ಅರೆಸರ್ಕಾರಿ ಸಂಸ್ಥೆ ನಿಗಮಗಳ ಕಛೆರಿಗಳಲ್ಲಿ ಪ್ರಕಟಿಸಿರುವದಿಲ್ಲ.
೧. ಮಾಹಿತಿ ಹಕ್ಕು ಅಧಿನಿಯಮ ೨೦೦೫, ಇದರ ೪ ನೇ ಕಲಂ ಅಡಿಯಲ್ಲಿ (ಸೆಂಟ್ರಲ್ ಆಕ್ಟ್ಯ ೨೨ ಸೆಕ್ಷನ್ ಆಫ್ ೨೦೦೫ ಪ್ರಕಾರ) ಸಾರ್ವಜನಿಕ ತಿಳುವಳಿಕೆಗಾಗಿ ಸೆಕ್ಷನ್ ೪ (೧) ಬಿ ಸೆಕ್ಷನ್ (೧೬) ಪ್ರಕಾರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ / ಸರ್ವಜನಿಕ ಮಾಹಿತಿ ಅಧಿಕಾರಿ / ಮೇಲ್ಮನವಿ ಅಧಿಕಾರಿಯ ಹೆಸರು ಪದನಾಮ ವಿಳಾಸ ದೂರವಾಣಿ ಸಂಖ್ಯೆ ವಿವರಗಳನ್ನು  ಕಡ್ಡಾಯವಾಗಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಕಛೇರಿಯ ಪ್ರವೇಶದ್ವಾರದಲ್ಲಿ ಪ್ರಕಟಿಸಬೇಕೆಂದು ಇದೆ. 
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮೇಲ್ಮನವಿ ಪ್ರಾಧಿಕಾರ ಅಧಿಕಾರಿಯ ಹೆಸರು
೨. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-೨೦೧೧ ಮಾದರಿ ಸೂಚನಾ ಫಲಕದಲ್ಲಿ ಸಾರ್ವಜನಿಕ ಪ್ರಾಧಿಕಾರದ ಪ್ರತಿಯೊಬ್ಬ ಹೆಸರಿಸಲಾದ ಅಧಿಕಾರಿಯು ಮತ್ತು ಆತನ ಅಧೀನ ಸಾರ್ವಜನಿಕ ನೌಕರನು, ಗೊತ್ತುಮಾಡಿದ ಕಾಲದೊಳಗೆ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ನಾಗರಿಕ ಸಂಬಂಧಿ ಸೇವೆಗಳನ್ನು ಪಡೆಯಲು ಅರ್ಹರಾದ ವ್ಯೆಕತಿಗಳಿಗೆ ಒದಗಿಸತಕ್ಕದ್ದು ಮತ್ತು ಅದನ್ನು ತಮ್ಮ ಕಛೇರಿಗಳ ಸೂಚನಾ ಫಲಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸತಕ್ಕದ್ದು ಎಂದು ಅಧಿನಿಯದಲ್ಲಿ ಹೇಳಲಾಗಿದೆ.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-೨೦೧೧
ಕಛೇರಿ :
ಗ್ರಾಮ/ತಾಲೂಕು/ಜಿಲ್ಲೆಯ ಹೆಸರು :
ಅನುಸೂಚಿತ ಸೇವೆಗಳು :
ಕ್ರ.ಸಂ ಸೇವೆಗಳ ಪಟ್ಟಿ ನಿಗದಿ ಶುಲ್ಕ ಲಗತ್ತಿಸಬೇಕಾದ ದಾಖಲೆಗಳ ಪಟ್ಟಿ ಹೆಸರಿಸಲಾದ ಅಧಿಕಾರಿಯ ಪದನಾಮ ಹೆಸರಿಸಲಾದ ಅಧಿಕಾರಿಗಳಿಗೆ ಗೊತ್ತು ಮಾಡಿದ ಕಾಲಮಿತಿ ಸಕ್ಷಮ ಅಧೊಕಾರಿ ಸಕ್ಷಮ ಅಧಿಕಾರಿಗೆ ಗೊತ್ತು ಮಾಡಿದ ಕಾಲಮಿತಿ ಮೇಲ್ಮನವಿ ಪ್ರಾಧಿಕಾರ ಮೇಲ್ಮನವಿ ಪ್ರಾಧಿಕಾರಕ್ಕೆ ಗೊತ್ತುಮಾಡಿದ ಕಾಲಮಿತಿ
೩. ಕರ್ನಾಟಕ ಲೋಕಾಯುಕ್ತ ಕಾಯ್ದೆಯನ್ವಯ ಸಾರ್ವಜನಿಕರಿಗಾಗಿ ಪ್ರಕಟಿಸಬೇಕಾದ ಮಾಹಿತಿ ಸರ್ಕಾರಿ ಕಛೆರಿಗಳಲ್ಲಿ ನೌಕರರು ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದಲ್ಲಿ ಅಥವಾ ನಿರ್ಲಕ್ಷತೆ ತೋರಿದಲ್ಲಿ ಕೂಡಲೇ ವಿವರಗಳೊಂದಿಗೆ ನಿಬಂಧಕರು ಕರ್ನಾಟಕ ಲೋಕಾಯುಕ್ತ ಬಹುಮಹಡಿಗಳ ಕಟ್ಟಡ ಬೆಂಗಳೂರು ಇವರ ಗಮನಕ್ಕೆ ತರುವುದು ಎಂದು. ಈ ರೀತಿಯಾಗಿ ಕಛೇರಿ ಪ್ರವೇಶದ್ವಾರದಲ್ಲಿ ಫಲಕವನ್ನು ಹಾಕುವುದು ಕಡ್ಡಾಯವಾಗಿರುತ್ತದೆ. 
ಮಾಹಿತಿ ಹಕ್ಕು ಅಧಿನಿಯಮ ಜಾರಿಯಾದ ೧೨೦ ದಿನಗಳಲ್ಲಿ ಕಾಯ್ದೆಯ ಎಲ್ಲ ನಿಯಮಗಳನ್ನು ಜಾರಿಗೆ ತರುವುಂತೆ ಕಾಯ್ದೆ ನಿಯಮ ಹೇಳಿದೆ. ಆದರೆ ೧೦ ವರ್ಷಗಳೂ ಗತಿಸಿದರೂ ಸಹ ನಮ್ಮ ಜಿಲ್ಲೆಯಲ್ಲಿ ಇದು ಯಾವುದು ಅನುಷ್ಠಾನವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಾನೂನು ಪರಿಪಾಲಕರೇ ಕಾನೂನು ಉಲ್ಲಂಘಿಸಿ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಗೆ ಇದು ಸಮವಾದುದ್ದು.  
ಅಶ್ಚರ್ಯವೆಂದರೆ ಜಿಲ್ಲಾಧಿಕಾರಿಗಳ ಕಛೇರಿ ನಾಮಫಲಕದಲ್ಲಿ ಇನ್ನೂ ಹಳೇಯ ೨೦೦೨ ರ ಕಾಯ್ದೆ ನಿಯಮದ ವಿವರಗಳು ಇವೆ. ಅಧಿನಿಯಮ ೨೦೦೫ ರಂತೆ ಪ್ರಕಟಿಸದೇ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ಒದಗಿಸಿದ್ದಾರೆ. 
ಜಿಲ್ಲಾಡಳಿತ ಭವನದಲ್ಲಿ ಕೇವಲ ೮ ಇಲಾಖೆಗಳಲ್ಲಿ ಮಾತ್ರ ಮಾಹಿತಿ ಹಕ್ಕುಅಧಿನಿಯಮದ ಬಗ್ಗೆ ಅಪೂರ್ಣವಾದ ಮಾಹಿತಿ ಪ್ರಕಟಿಸಿದ್ದರೆ ಇನ್ನೂಳಿದ ೭೫ ಇಲಾಖೆಗಳಲ್ಲಿ ಈ ಮೂರು ಕಾಯ್ದೆಗಳ ಬಗ್ಗೆ ಪ್ರಕಟಿಸಬೇಕಾದ ಸಾರ್ವಜನಿಕ ಮಾಹಿತಿಗಳು ಇರುವದಿಲ್ಲ.  
ಈ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಗುರುತರವಾದ ಹೊಣೆಯು ಅಧಿಕಾರಿಗಳ ಮೇಲೆ ಇರುತ್ತದೆ. ಇಲಾಖೆಗಳು ಸಾರ್ವಜನಿಕರಿಗೆ ಸೇವೆ ನೀಡುವ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಈ ಕುರಿತು ತಕ್ಷಣ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಈ ಮೂರು ಕಾಯ್ದೆಗಳ ಬಗ್ಗೆ ಪ್ರಕಟಿಸಬೇಕಾದ ಸಾರ್ವಜನಿಕ ಮಾಹಿತಿ ಪ್ರಕಟಣೆಯನ್ನು ಪ್ರದರ್ಶಿಸಬೇಕು ಹಾಗೂ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಕಾನೂನನ್ನು ಜಾರಿಯಾಗದಂತೆ ಮಾಡಿರುವ ಹಾಗೂ ಸಾರ್ವಜನಿಕರ ಹಕ್ಕುನ್ನು ಕಸಿದುಕೊಂಡಿರುವ ಅಧಿಕಾರಿಗಳ ವಿರುದ್ಧ ನಿಯಮಗಳಡಿಯಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸುತ್ತೇನೆ ಹಾಗೂ ಈ ಬಗ್ಗೆ ಜಿಲ್ಲೆಯಲ್ಲಿರುವ ಪ್ರಗತಿಪರರು, ಸಾಮಾಜಿಕ ಕಾರ್ಯಕರ್ತರು ದನಿ ಎತ್ತಲಿ ಸಂವಿಧಾನದತ್ತವಾಗಿ ನಮಗೆ ಸಿಕ್ಕಿರುವ ಹಕ್ಕನ್ನು ನಾವು ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ. 
ಕೇವಲ ಮಾಹಿತಿ ಹಕ್ಕು ಅಧಿನಿಯಮ (ಅಪೂರ್ಣ ಸೇರಿದಂತೆ) ಪ್ರಕಟಿಸಿರುವ ಇಲಾಖೆಗಳು 
೧. ಜಿಲ್ಲಾಧಿಕಾರಿಗಳ ಕಛೇರಿ, ೨. ಜಿಲ್ಲಾ ಖಜಾನೆ ಇಲಾಖೆ, ೩. ಆಹಾರ ಮತ್ತು ನಾಗರಿಕ ಸರಬುರಾಜು ಇಲಾಖೆ,
೪. ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ, ೫. ಸಾರ್ವಜನಿಕ ಶಿಕ್ಷಣ ಇಲಾಖೆ
೬. ಹಿಂದುಳಿದ ವರ್ಗಗಳ & ಅಲ್ಪಸಂಖ್ಯಾತರ ಇಲಾಖೆ ೭. ಸಮಾಜ ಕಲ್ಯಾಣ ಇಲಾಖೆ. 
೮. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ,
ಈ ಮೂರು ಕಾಯ್ದೆಗಳ ಬಗ್ಗೆ ಪ್ರಕಟಿಸಬೇಕಾದ ಸಾರ್ವಜನಿಕ ಮಾಹಿತಿಗಳನ್ನು ಪ್ರಕಟಿಸದೇ ಇರುವ ಇಲಾಖೆಗಳು.
೧. ಗಣಿ ಮತ್ತು ಭೂ ವಿಜ್ಞಾನ ಇಲಾಖೆ 
೨. ಜಿಲ್ಲಾ ಪಂಚಾಯತ ಕಾರ್ಯಾಲಯ
೩. ಜಿಲ್ಲಾ ಕಾರ್ಮಿಕ ಇಲಾಖೆ
೪. ಸಣ್ಣ ಉಳಿತಾಯ ಇಲಾಖೆ
೫. ವಿಮಾ ಇಲಾಖೆ-ಕೆಜಿಐಡಿ    
೬. ರೇಷ್ಮೇ ಇಲಾಖೆ
೭. ಜಿಲ್ಲಾ ಔಷಧಿ ನಿಯಂತ್ರಕರು
೮. ಜಿಲ್ಲಾ ನೋಂದಾಣಿಧಿಕಾರಿಗಳು
೯. ವಾರ್ತಾ ಮತ್ತು ಪ್ರಚಾರ ಇಲಾಖೆ
೧೦. ಯುನಿಸೇಫ್
೧೧. ಉಪ ವಿಭಾಗಧಿಕಾರಿಗಳು
೧೨. ಜಂಟಿ ಕೃಷಿ ನಿರ್ದೇಶಕರ ಇಲಾಖೆ
೧೩. ಜಿಲ್ಲಾ ಆಯುಷ ಇಲಾಖೆ
೧೪. ಪಶುಪಾಲನ & ಪಶುವ್ಯಧ್ಯಕೀಯ ಇಲಾಖೆ
೧೫. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ
೧೬. ಜಲ್ಲಾ ಜಲಾನಯನ ಇಲಾಖೆ
೧೭. ಜಿಲ್ಲಾ ಅಬಕಾರಿ ಉಪಾಯುಕ್ತರ ಇಲಾಖೆ
೧೮. ಎನ್. ಐ. ಸಿ. ರಾಷ್ಟ್ರೀಯ ಸೂಚ್ಯಂಕ
೧೯. ಕನ್ನಡ & ಸಂಸ್ಕೃತಿ ಇಲಾಖೆ                                                            
೨೦. ಜಿಲ್ಲಾ ವಕ್ಫ್ ಮಂಡಳಿ
೨೧. ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ   
೨೨. ಜಿಲ್ಲಾ ಮಲೇರಿಯಾ ಅಧಿಕಾರಿಗಳ ಕಛೇರಿ                                         
೨೩. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ
೨೪. ನಗರ & ಗ್ರಾಮಾಂತರ ಯೋಜನಾ ಇಲಾಖೆ                                            
೨೫. ಸಹಾಯಕ ನಿರ್ದೇಶಕರು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ
೨೬. ಸಹಾಯಕ ನಿಬಂಧಕರು ಸಹಕಾರ ಸಂಘಗಳು
೨೭. ನಗರಾಭಿವೃದ್ಧಿ ಪ್ರಾಧಿಕಾರ
೨೮. ಜಿಲ್ಲಾ ಏಡ್ಸ್ ನಿಯಾಂತ್ರಣಾಧಿಕಾರಿಗಳು
೨೯. ಉಪ ನಿರ್ದೇಶಕರು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆ
೩೦. ಜಿಲ್ಲಾ ಕುಷ್ಟರೋಗ ನಿಯಂತ್ರಣ ಇಲಾಖೆ
೩೧. ಉಪ ನಿಂಬಂಧಕರು ಸಹಕಾರ ಸಂಘಗಳು
೩೨. ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ
೩೩. ದೇವರಾಜ ಅರಸ್ ಅಭಿವೃದ್ಧಿ ನಿಗಮ
೩೪. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
೩೫. ಪದವಿ ಪೂರ್ವ ಶಿಕ್ಷಣ ಇಲಾಖೆ
೩೬. ಮೀನುಗಾರಿಕೆ ಇಲಾಖೆ
೩೭. ಈಲ್ಲಾ ಯೋಜನಾ ನಿರ್ವಾಹಕರು ಕೆಹೆಚ್‌ಎಸ್‌ಡಿಆರ್‌ಪಿ
೩೮. ಆರ್.ಸಿ.ಹೆಚ್. ಆರೋಗ್ಯ ಇಲಾಖೆ
೩೯. ಜಿಲ್ಲಾ ನಗರಾಭಿವೃದ್ಧಿ ಕೋಶ ಡಿಯುಡಿಸಿ
೪೦. ಡಿ.ಡಿ.ಎಲ್.ಆರ್. ಭೂಮಾನ ಇಲಾಖೆ
೪೧. ಪ್ರವಾಸೋದ್ಯಮ ಇಲಾಖೆ
೪೨. ಮಕ್ಕಳ ಹಕ್ಕುಗಳ ಸಂರಕ್ಷಣೆ
೪೩. ಜಿಲ್ಲಾ ಅಕ್ಷರದಾಸೋಹ
೪೪. ಕರ್ನಾಟಕ ಹೌಸಿಂಗ್ ಬೋರ್ಡ
೪೫. ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ
೪೬. ವಾಣಿಜ್ಯ & ಆದಾಯ ತೆರಿಗೆ ಇಲಾಖೆ
೪೭. ಲೋಕೋಪಯೋಗಿ ಇಲಾಖೆ ( ಪ್ರಕಟಿಸಿದೆ)
೪೮. ಪಂಚಾಯತ ರಾಜ್ ಇಂಜನಿಯರಿಂಗ್ ವಿಭಾಗ
೪೯. ಜಲ ನಿರ್ಮಲ 
೫೦. ಕರ್ನಾಟಕ ನಗರ ನೀರು ರಸಬರಾಜು & ಒಳಚರಂಡಿ ಮಂಡಳಿ
೫೧. ಪಿ.ಎಂ.ಜಿ.ಎಸ್.ವೈ. ಯೋಜನಾ ವಿಭಾಗ
೫೨. ಸಣ್ಣ ನೀರಾವರಿ ಇಲಾಖೆ
೫೩. ಮಹಿಳಾ ಅಭಿವೃದ್ಧಿ ಹಾಗೂ ದೇವದಾಸಿ ಪುನರ್ ವಸತಿ ನಿಗಮ
೫೪. ಪ್ರಾದೇಶಿಕ ಸಾರಿಗೆ ಇಲಾಖೆ
೫೫. ಕೈಗಾರಿಕೆ & ವಾಣಿಜ್ಯ ಇಲಾಖೆ
೫೬. ಜಿಲ್ಲಾ ಖಾದಿ & ಗ್ರಾಮೋದ್ಯಗ ಮಂಡಳಿ
೫೭. ಕೈಮಗ್ಗ & ಜವಳಿ ಇಲಾಖೆ
೫೮. ಉಪನಿರ್ದೇಶಕರು ಖಾದಿ ಗ್ರಾಮೋದ್ಯಗ ಜಿ.ಪಂ
೫೯. ತೋಟಗಾರಿಕೆ ಇಲಾಖೆ
೬೦. ಪರಿಸರ ಮಾಲಿನ್ಯ ನಿಯಂತ್ರಾಣಧಿಕಾರಿಗಳ ಕಛೇರಿ
೬೧. ಕೃಷಿ ಮಾರುಕಟ್ಟೆ ಇಲಾಖೆ
೬೨. ವಿಭಾಗೀಯ ನಿಯಾಂತ್ರಣಾಧಿಕಾರಿಗಳು ಈಕಸಾಸಂಸ್ಥೆ
೬೩. ಜೇಸ್ಕಾಂ ವಿಭಾಗ
೬೪. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಮಾಜಿಕ ಅರಣ್ಯ ವಿಭಾಗ
೬೫. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ಅರಣ್ಯ ವಿಭಾಗ                                   
೬೬. ಜಿಲ್ಲಾ ನಿರ್ಮಿತಿ ಕೇಂದ್ರ ೬೭.  ಜಿಲ್ಲಾ ಮುಖ್ಯಗ್ರಂಥಾಧಿಕಾರಿಗಳ ಇಲಾಖೆ
೬೮. ಹಿರೇಹಳ್ಳ ಯೋಜನೆ ೬೯.  ಕೆ.ಆರ್.ಡಿ.ಎಲ್. (ಕರ್ನಾಟಕ ಭೂ ಸೇನಾ ನಿಗಮ)
    ೭೦. ರಾಷ್ಟ್ರೀಯ ಹೆದ್ದಾರಿ  ವಿಭಾಗ ೭೧. ಜಿಲ್ಲಾ ಆಡಳಿತ ತರಬೇತಿ ಸಂಸ್ಥೆ
    ೭೨. ರಾಜ್ಯ ಉಗ್ರಾಹಣ ನಿಗಮ ೭೩. ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾಆಸ್ಪತ್ರೆ
    ೭೪. ಯುವಸಬಲೀಕರಣ & ಕ್ರೀಡಾ ಇಲಾಖೆ ೭೫. 

Leave a Reply