ತಾಂತ್ರಿಕ ಸಮಸ್ಯೆ ಪಡಿತರ ಚೀಟಿ ವಿತರಣೆ ವಿಳಂಬ.

ಕೊಪ್ಪಳ ಜೂ. ೨೯- ಆಹಾರ ದತ್ತಾಂಶದ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆಯ ಕಾರಣದಿಂದ ಪಡಿತರ ಚೀಟಿ ಮುದ್ರಿಸಿ, ವಿತರಣೆ ಮಾಡುವುದು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಆಹಾರ ದತ್ತಾಂಶದ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಪಡಿತರ ಚೀಟಿ ಮುದ್ರಿಸಿ ವಿತರಣೆ ಮಾಡುವುದು ಸಾಧ್ಯವಾಗುತ್ತಿಲ್ಲ.  ಈ ತಾಂತ್ರಿಕ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರವನ್ನು (ಎನ್‌ಐಸಿ) ಕೋರಲಾಗಿದೆ.  ಸರ್ವರ್ ಸಮಸ್ಯೆ ನಿವಾರಣೆಯಾದ ನಂತರ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರ ಲಾಗಿನ್‌ನಲ್ಲಿ ಅನುಮೋದನೆ ಮಾಡಿಸಿ, ವಿತರಿಸುವ ಕ್ರಮ ಕೈಗೊಳ್ಳಲಾಗುವುದು.  ಸಾರ್ವಜನಿಕರು ಸಹಕರಿಸವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Please follow and like us:
error