You are here
Home > Koppal News > ನಾರಿಶಕ್ತಿ ಪುರಸ್ಕಾರ ಅರ್ಜಿ ಆಹ್ವಾನ.

ನಾರಿಶಕ್ತಿ ಪುರಸ್ಕಾರ ಅರ್ಜಿ ಆಹ್ವಾನ.

ಕೊಪ್ಪಳ, ಸೆ.೦೧ (ಕ ವಾ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ, ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರದಾನ ಮಾಡುವ ನಾರಿಶಕ್ತಿ ಪುರಸ್ಕಾರ ಪ್ರಶಸ್ತಿಗಳಿಗಾಗಿ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆಗೈದಿರುವ ವ್ಯಕ್ತಿಗಳಿಂದ ಹಾಗೂ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಮಾ.೦೮ ರಂದು ನಡೆಯಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ರಾಣಿ ರುದ್ರಮ್ಮದೇವಿ, ಮಾತಾ ಜೀಜಾಬಾಯಿ, ಕನ್ನಗಿದೇವಿ, ದೇವಿಅಹಲ್ಯಾಬಾಯಿ ಹಾಗೂ ರಾಣಿ ಲಕ್ಷ್ಮಿಬಾಯಿ ಹೋಳ್ಕರ್ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಣಿ ರುದ್ರಮ್ಮ ದೇವಿ ಪ್ರಶಸ್ತಿ: ಸಮುದಾಯದಲ್ಲಿ ಮಹಿಳೆಯರಿಗಾಗಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಉತ್ತಮ ಗ್ರಾಮ ಪಂಚಾಯಿತಿಗೆ ಈ ಪ್ರಶಸ್ತಿ ನೀಡಲಾಗುವುದು. ಗ್ರಾಮ ಪಂಚಾಯಿತಿಯನ್ನು ಜಿಲ್ಲಾ ಪಂಚಾಯತ್ ಮುಖಾಂತರ ಆಯ್ಕೆ ಮಾಡಲಾಗುವುದು.
ಮಾತಾ ಜೀಜಾಬಾಯಿ ಪ್ರಶಸ್ತಿ: ಮಹಿಳೆಯರಿಗಾಗಿ ಉತ್ತಮ ಸೇವೆ ಹಾಗೂ ವಿಶೇಷ ಕಾಳಜಿವಹಿಸಿ ಕಾರ್ಯನಿರ್ವಹಿಸುತ್ತಿರುವ ನಗರಸಭೆ ಅಥವಾ ಪುರಸಭೆಗೆ ಈ ಪ್ರಶಸ್ತಿ ನೀಡಲಾಗುವುದು. ನಗರಸಭೆ ಅಥವಾ ಪುರಸಭೆಯನ್ನು ನಗರ ಅಥವಾ ಪುರಸಭೆ ಪ್ರಾಧಿಕಾರದ ಮೂಲಕ ಆಯ್ಕೆ ಮಾಡಲಾಗುವುದು.
ಕನ್ನಗಿ ದೇವಿ ಹಾಗೂ ದೇವಿ ಅಹಲ್ಯ ಹೋಳ್ಕರ್ ಪ್ರಶಸ್ತಿ: ಮಹಿಳೆಯರಿಗಾಗಿ ಉದ್ಯೋಗ ಅವಕಾಶ ನೀಡಿ, ಅವರನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿರುವ ಉತ್ತಮ ಖಾಸಗಿ ಸಂಸ್ಥೆ ಅಥವಾ ಕಂಪನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ರಾಣಿ ಲಕ್ಷ್ಮಿಬಾಯಿ ಪ್ರಶಸ್ತಿ: ಸಂಶೋಧನಾ ಮತ್ತು ಅಭಿವೃದ್ಧಿ ಕುರಿತು ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಮಹಿಳೆಯರಿಗೆ ನೀಡುವ ವೈಯಕ್ತಿಕ ಪ್ರಶಸ್ತಿಗೆ ಪ್ರಸ್ತಾವನೆ: ಮಹಿಳೆಯರ ಸಾಮಾಜಿಕ ಆರ್ಥಿಕ ವೃತ್ತಿಪರ ಹಾಗೂ ಮಹಿಳಾ ಕಾನೂನುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿರುವಂತಹ ಮಹಿಳೆಯರು ಹಾಗೂ ಕಲೆ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ಸಾಂಸ್ಕೃತಿಕ ಕ್ರೀಡಾ ಕ್ಷೇತ್ರಗಳಲ್ಲಿ ಶ್ರಮಿಸಿರುವಂತಹ ಮಹಿಳೆಯರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
     ಪ್ರಸ್ತಾವನೆಗಳನ್ನು ಸಲ್ಲಿಸಲು ಸೆ.೧೦ ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೨೨೭೦೩ ಇವರನ್ನು ಸಂಪರ್ಕಿಸಬಹುದಾಗಿದೆ.   

Leave a Reply

Top