ತವರು ಸನ್ಮಾನ ಸಂತಸ ತಂದಿದೆ ಶೇಖರಗೌಡ ಮಾಲಿಪಾಟೀಲ್.

ಕೊಪ್ಪಳ,ಅ,೦೫ ಕೊಪ್ಪಳ ನಗರದ ಶಿವಶೆರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ಧ ಬ್ಯಾಂಕಿನ ಸನ್ಮಾನವನ್ನು ಸ್ವೀಕರಿಸಿದ ರಾಜ್ಯ ಸಹಕಾರಿ ಮಹಾ ಮಂಡಳದ ರಾಜ್ಯಾಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ ರವರು ಮಾತನಾಡಿ ನಾನು ರೈತ ಕುಟುಂಬದಿಂದ ಬಂದವನು, ಯುವಕ ಮಹಾಮಂಡಳದಿಂದ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಈಗ ರಾಜ್ಯ ಅಧ್ಯಕ್ಷ ಸ್ಥಾನ ದೊರಕಿರುವುದು ನನ್ನ ತಂದೆ,ತಾಯಿಗಳ, ಸಮಾಜದ ಸ್ನೇಹಿತರ ಆಶೀರ್ವಾದವೇ ಮುಖ್ಯಕಾರಣವೆಂದು ನಾನು ಸಹಕಾರಿ ಮಂಡಳದ ಅಧ್ಯಕ್ಷನಾಗಿ ರಾಜ್ಯಾಧ್ಯಂತ ಸಹಕಾರಿ ಮತ್ತು ಸೌಹಾರ್ಧಗಳ ಪುನಶ್ಚೇತನಕ್ಕಾಗಿ ಹಗಲಿರು

ಳು ಶ್ರಮಿಸುತ್ತೇನೆಂದು ಮಾತನಾಡಿದರು. ಅಲ್ಲದೆ ಕೊಪ್ಪಳ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ಧ ಬ್ಯಾಂಕಿನ ಈ ಸನ್ಮಾನವೂ ನನಗೆ ಅತ್ಯಂತ ಸಂತೋಷ ಹೆಮ್ಮೆ ಹಾಗೂ ಮಲ್ಲಮ್ಮಳ ಆಶೀರ್ವಾದವೆಂದೆ ಸನ್ಮಾನವನ್ನು ಸ್ವೀಕರಿಸಿದ್ದೇನೆ.

     ಉತ್ತರ ಕರ್ನಾಟಕಕ್ಕೆ ಸಹಕಾರಿ ಮಹಾಮಂಡಳ ಅಧ್ಯಕ್ಷಸ್ಥಾನ ಸಿಕ್ಕಿರುವುದು ಇದೇ ಮೊದಲು ಈ ಸದಾವಕಾಶದಲ್ಲಿ  ನನ್ನ ವ್ಯಾಪ್ತಿಯಲ್ಲಿ ಬರುವ ಸಹಕಾರಿ ರಂಗವನ್ನು  ಬಲಪಡಿಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಮಾತನಾಡಿದರು. ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾಜಿ ಅಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿ ಶೇಖರಗೌಡ ಮಾಲಿಪಾಟೀಲ ರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು  ಉತ್ತರ ಕರ್ನಾಟಕ ಭಾಗದ ಎಲ್ಲಾ ಸಹಕಾರಿಗಳಿಗೆ ಹೆಮ್ಮೆಯ ವಿಷಯವಾಗಿದ್ದು ಶೇಖರಗೌಡರು ನಮ್ಮ ಭಾಗದ ಎಲ್ಲಾ ಸಹಕಾರಿ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಇನ್ನು ಹೆಮ್ಮರವಾಗಿ ಬೆಳೆಯಲೆಂದು ಆಶಿಸುತ್ತೇನೆ.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಎಸ್.ಡಿ.ಡಂಬಳರವರು ಮಾತನಾಡಿ ಶೇಖರಗೌಡರು ಅದೃಷ್ಟಶಾಲಿಗಳು ಅವರಿಗೆ ಎಲ್ಲಾ ರಂಗದಲ್ಲೂ ಗೆಲುವಿನ ಹಾದಿ ಸುಗಮವಾಗಿದೆ ಇದು ನಮ್ಮ ಸಮಾಜಕ್ಕೆನೆ ಬಹುದೊಡ್ಡ ಕೊಡುಗೆಯಾಗಿದೆ ಇವರು ಉತ್ತರ ಕರ್ನಾಟಕದ ಸಹಕಾರಿಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಕಾರ್ಯಾಗಾರ, ಸಿಬ್ಬಂದಿಗಳಿಗೆ ತರಬೇತಿ ಸಹಕಾರಿಗಳಿಗೆ ಕಾನೂನುನಿನ ಅರಿವು ತಿಳುವಳಿಕೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ನಮ್ಮ ಭಾಗಕ್ಕೆ, ಕೊಪ್ಪಳ ಜಿಲ್ಲೆಗೆ ಸದಾವಕಾಶಗಳನ್ನು ಒದಗಿಸಿಕೊಡಲೆಂದು ಮನವಿಮಾಡಿಕೊಂಡರು.
   ಈ ಸನ್ಮಾನ ಸಮಾರಂಭದಲ್ಲಿ ಉಪಾಧ್ಯಕ್ಷರಾದ ವಿ.ಮೇಟಿ, ನಿರ್ದೇಶಕರಾದ ಬಿ.ಶರಣಪ್ಪ, ದೇವಪ್ಪ ಅರಕೇರಿ, ವಿ.ಜಿ.ಯತ್ನಳ್ಳಿ, ವಿಜಯಲಕ್ಷ್ಮಿ ಪಾಟೀಲ್ ಮತ್ತು ಸಿಬ್ಬಂದಿಗಳು ಇತರ ಗಣ್ಯರು ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ್ ರಾಮದುರ್ಗ ಸ್ವಾಗತವನ್ನು ಕೋರಿ ಕಾರ್ಯಕ್ರವನ್ನು ನಿರೂಪಿಸಿದರು.
Please follow and like us:
error