You are here
Home > Koppal News > ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ೨ ದಿನದ ಶಿಬಿರವಾಸ.

ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ೨ ದಿನದ ಶಿಬಿರವಾಸ.

ಕೊಪ್ಪಳ-06- ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ೨ ದಿನದ ಶಿಬಿರ ವಾಸ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್‍ಯಕ್ರಮವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಹಕಾರ್‍ಯದರ್ಶಿ ಜಯರಾಜ ಬೂಸದ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ

ಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್. ಅತ್ತನೂರ ಶಿಬಿರ ವಾಸದ ಮಹತ್ವದ ಕುರಿತು ಮತ್ತು ಶಿಬಿರ ವಾಸದ ಅನುಭವಗಳ ಬಗ್ಗೆ ವಿವರಿಸಿದರು. ಸಾಂಘಿಕ ಜೀವನ ಮತ್ತು ಈ ರೀತಿಯ ಸಾಹಸಮಯ ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳ ಬೌದ್ದಿಕ ವಿಕಸನವಾಗುತ್ತೆ. ಅದು ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಹೀಗಾಗಿ ಹೆಚ್ಚುಹೆಚ್ಚು ವಿದ್ಯಾರ್ಥಿಗಳು  ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಕಲಾವಿದ ಶಿಕ್ಷಕ ವೈಶಂಪಾಯನ, ಯಮನೂರಪ್ಪ ಭಜಂತ್ರಿ, ಶಾಲೆಯ ಮುಖ್ಯೋಪಾಧ್ಯಾಯನಿ ರೇಣುಕಾ ಅತ್ತನೂರ, ಸ್ಕೌಟ್ಸ್ ನ ಎಸ್ ಓಸಿ ಶಿವಕುಮಾರ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಸಿಮಲಿ ಅತ್ತನೂರ ಸೇರಿದಂತೆ ಇತರರು ವೇದಿಕೆಯ ಮೇಲಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪೈರ್ ಕ್ಯಾಂಪ್, ಟೆಂಟ್ ವಾಸ, ಹಾಸ್ಯ ಮತ್ತು ಸಂಗೀತ ಕಾರ್ಯಕ್ರಮ ಸೇರಿದಂತೆ ಇತರೆ ಚಟುವಟಿಕೆಗಳು ನಡೆದವು. ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್‍ಯಕ್ರಮದ ಸ್ವಾಗತವನ್ನು ಶಿಕ್ಷಕ ಎ.ಜಿ.ಗೌಡರ, ನಿರೂಪಣೆಯನ್ನು ಆಶಾ ದೊಡ್ಡಮನಿ ಹಾಗೂ ವಂದನಾರ್ಪಣೆ ರವಿಕುಮಾರ ಮಾಡಿದರು. 

Leave a Reply

Top