ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಗೆ ಹೆಚ್.ಜಿ ರಾಮುಲು ಚಾಲನೆಗೆ ಹರ್ಷ

ಕೊಪ್ಪಳ :-  ೦೭ ರಿಂದ ೧೪ ರವೆಗೆ ನಡೆಯುವ ಪಾದಯಾತ್ರೆ ಸೊಮವಾರದಂದು ಹೊಸಪೇಟೆಯಲ್ಲಿ ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಾಜಿ ಸಂಸದ   ಹೆಚ್.ಜಿ ರಾಮುಲು ಚಾಲನೆ ನೀಡಲಿದ್ದಾರೆ. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ ಸಮಿತಿಯ ರಾಜ್ಯಧ್ಯಕ್ಷರಾದ ಜಿ.ಪರಮೇಶ್ವರ, ವಿರೋಧ ಪಕ್ಷದ ನಾಯಕ   ಸಿದ್ದರಾಮಯ್ಯ, ವಿಧಾನ ಪರಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ, ಮಲ್ಲಿಕಾರ್ಜುನ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್. ಬೋಸ್‌ರಾಜು  ಹಾಗೂ ಬಸವರಾಜ ರಾಯರಡ್ಡಿ ಮಾಜಿ ಶಾಸಕರು ಯಲಬುರ್ಗಾ, ಹಾಗೂ ಇತರೆ ಹಿಂದುಳಿದ ವರ್ಗಗಳ ರಾಜ್ಯಧ್ಯಕ್ಷರಾದ  ಎಂ.ಜಿ. ವೇಣುಗೋಪಾಲ ಜೊತೆಗೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. 
ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ ಜೊತೆಗೆ ಸಮಕಾಲಿನ ರಾಜಕಾರಣಿಯಾದ ಮಾಜಿ ಸಂಸದ ಹಿರಿಯ ನಾಯಕರಾದ   ಹೆಚ್.ಜಿ ರಾಮುಲು ಧಣಿಯವರು ಈ ಐತಿಹಾಸಿಕ ಅಮೋಘ ಪಾದಯಾತ್ರೆಗೆ ಚಾಲನೆ ನೀಡುತ್ತಿರುವುದು ಹಾಗೂ ಅವರು ಸಕ್ರೀಯ ರಾಜಕಾರಣಕ್ಕೆ ಮರಳುತ್ತಿರುವ ಬಗ್ಗೆ ಹರ್ಷವಾಗುತ್ತಿದೆ ಎಂದು ಮಾಜಿ ವಿಧಾನ ಪರಷತ್ತ ಸದಸ್ಯ ಕರಿಯಣ್ಣ ಸಂಗಟಿ, ವೈಜನಾಥ  ದಿವಟರ್, ಅರ್ಜುನಸಾ ಕಾಟವಾ, ಜಾಕೀರಹುಸೇನ್ ಕಿಲ್ಲೆದಾರ, ನಾಗರಾಜ ಬಳ್ಳಾರಿ, ಅನಸಮ್ಮ ವಾಲ್ಮೀಕಿ ಸರೋಜ ಬಾಕಳೆ, ಪ್ರಶಾಂತ ರಾಯಕರ್, ಚಾಂದಪಾಷಾ ಕಿಲ್ಲೆದಾರ, ಎಮ್.ಡಿ. ಆಸೀಫ್, ಇಬ್ರಾಹಿಂ ದಿಡ್ಡಿಕೇರಿ, ಕರಿಮುದ್ದಿನ್ ಕಿಲ್ಲೇದಾರ, ನವಾಜ್ ಹುಸೇನ್, ಅರ್ಜುನಸಾ ಕಾಟವಾ  ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿ ಸದಸ್ಯರು  ಹರ್ಷ ವ್ಯಕ್ತಪಡೆಸಿದ್ದಾರೆ. 
Please follow and like us:
error