
ನಗರದ ಬಸ್ಸ್ಟ್ಯಾಂಡ ಹತ್ತಿರದ ಕ್ರಾಂತಿ ಕೇಂದ್ರದಲ್ಲಿ ಸಭೆ ಸೇರಿದ ವಿವಿಧ ಸಂಘಟನೆಯ ಮುಖಂಡರುಗಳು ಸಭೆಯಲ್ಲಿ ಭಾರದ್ವಾಜ್ರವರ ದೇಹದಾನದ ಕುರಿತು ಮಾತನಾಡುತ್ತ, ದುಡಿಯುವ ವರ್ಗದವರ ಪರವಾಗಿ ಒಬ್ಬ ಚಳುವಳಿಗಾರನಾಗಿ ಹಾಗೂ ಮಾಧ್ಯಮದಲ್ಲಿ ಕೂಡ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅವರು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ತಮ್ಮ ದೇಹವನ್ನು ದಾನವಾಗಿ ನೀಡಿರುವ ಸಮಾಜಕ್ಕೆ ವಿಶಷ ಸಂದೇಶ ನೀಡಿದಂತಾಗಿದೆ ಎಂದು ಸಾಹಿತಿ ಅಲ್ಲಾಗಿರಿರಾಜ್ ಕನಕಗಿರಿ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಸಾಹಿತಿ ಪೀರ್ಬಾಷಾ, ಎಂ. ವಿರುಪಕ್ಷಪ್ಪ, ಬಸನಗೌಡ, ಟಿ. ರಾಘವೇಂದ್ರ, ಕೆ.ಬಿ. ಪಾಟೀಲ್, ತಿಪ್ಪೇಸ್ವಾಮಿ ನವಲಿ, ಮಾಬುಸಾಬ್, ಸೈಯ್ಯದ್ ಹಾಷುಮುದೀನ್, ಹಕೀಮ್ ಹುಸೇನ್, ಮಂಜುನಾಥ್, ಬಾಷು ಮತ್ತಿತರರು ಉಪಸ್ಥಿತರಿದ್ದರು.
Please follow and like us: