ನರೇಂದ್ರ ಮೋದಿ ಪ್ರಧಾನಿ ಖಚಿತ – ರೀನಾ ಪ್ರಕಾಶ

ಕೊಪ್ಪಳ : ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರದ ಭ್ರ್ರಷ್ಟಾಚಾರದಿಂದ ಇಡೀ ದೇಶವನ್ನು ಕೊಳ್ಳೆ ಹೊಡದಿದ್ದು ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಬಂದಾಗಿನಿಂದಲು ನೆಹರೂ ಕಾಲದಿಂದ ಮನಮೋಹನಸಿಂಗ ರವರಗಿನ ಪ್ರಧಾನಿಗಳ ದುರಾಡಳಿತದ ದೇಶವನ್ನು ಮಾರುವ ಹಂತಕ್ಕೆ ತಂದಿದ್ದಾರೆ. ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ ಕಾಮನವೇಲ್ತನ ಹಗರಣ, ಟು.ಜಿ.ಸ್ಪೇಕ್ಟ್ರಂ, ಕಲ್ಲಿದಲು ಸೇರಿದಂತೆ ಲೆಕ್ಕವಿಲ್ಲದಷ್ಟು ದೋಚಿದ್ದಾರೆ ಮತ್ತು ದೇಶದಲ್ಲಿ ಗಡಿ ಭದ್ರತೆಯಿಲ್ಲಂತರಿಕವಾಗಿ ಮದ್ಯಮ ವರ್ಗದವರ ಸ್ಥಿತಿ ಹಿನಾಯವಾಗಿದೆ ಎಂದು ಮಾತನಾಡಿದರು. ಅವರು ದಿ

೦೬ ರಂದು ಪ್ರಮೋದ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಕಾರಣಿಯಲ್ಲಿ ಮಾತನಾಡಿದರು. ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ದಿಯ ಕಾರ್ಯಗಳಿಂದ ಇಡೀ ವಿಶ್ವದ ಗಮನವನ್ನು ಸೆಳದಿದ್ದು ಮೋದಿಯವರ ಬಗ್ಗೆ ಅಖಂಡ ದೇಶದ ಯುವಕರು ಮಹಿಳೆಯರು, ಪ್ರಜ್ಞಾವಂತರು, ರೈತರು ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಬರುಯವ ಲೋಕಸಭೆಯಲ್ಲಿ ಬಿ.ಜೆ.ಪಿ ಬಹುಮತ ಪಡೇದು ಮೋದಿ ಪ್ರಧಾನಿಯಾಗುವುದು ಸತ ಸಿದ್ದ ಎಂದು ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಕಾರ್ಯಕಾರಣಿ ಉಸ್ತುವಾರಿಗಳಾದ ರೀನಾ ಪ್ರಕಾಶ  ಹೇಳಿದರು.  

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಣಿ ಸಮಿತಿಯಿಂದ ಕೊಪ್ಪಳ ಭಾಗಕ್ಕೆ ಪ್ರಪ್ರಥಮ ಬಾರಿಗೆ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷರಾಗಿ   ಹಾಲಪ್ಪ ಆಚಾರ ರವರನ್ನು ಆಯ್ಕೇಯಾಗಿದ್ದಕ್ಕೆ ಜಿಲ್ಲೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ರಾಜ್ಯ ಮುಖಂಡರಿಗೆ ಅಭಿನಂದಿಸಲಾಯಿತು. 
ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ  ಮಾತನಾಡಿ  ಹಿಂದಿನ ಬಿ.ಜೆ.ಪಿ ಸರಕಾರದ ಆಡಳಿತದ ಅವಧಿಯಲ್ಲಿ ಕೊಪ್ಪಳ ಜಿಲ್ಲೆಗೆ ಕೋಟ್ಯಾಂತರ ಅನುಧಾನವನ್ನು ನೀಡಿದ್ದು ಬಿ.ಜೆ.ಪಿ ಕಾರ್ಯಕರ್ತರು ಆ ಅನುಧಾನವನ್ನು ಸಮರ್ಪಕವಾಗಿ ಅನುಷ್ಠಾನ ವಾಗುತ್ತಿದೆಯೋ ಇಲ್ಲವೋ ಅವಲೋಕನ ಮಾಡಬೇಕು. ಗಂಗಾವತಿಯಲ್ಲಿ ಕೃಷಿ ಕಾಲೇಜು, ಇಂಜನಿಯರಿಂಗ್ ಕಾಲೇಜು ಸ್ಥಾಪನೆಯಾಗಿಲ್ಲ ಕೊಪ್ಪಳದ ಇಂಜನಿಯರಿಂಗ್ ಕಾಲೇಜು ನೆನೆಗುದಿಗೆ ಬಿದ್ದಿದೆ ನಮ್ಮ ಸರಕಾರದ ಸನುದಾನಗಳನ್ನು ಉಸ್ತುವಾರಿ ಮಂತ್ರಿ ಶಿವರಾಜ ತಂಗಡಗಿ ತಮ್ಮದೆಂದು ಹೇಳಿಕೊಳ್ಳುತ್ತಾರೆ. ಇದುವರೆಗೂ ಒಂದು ರೂಪಾಯಿ ಅನುಧಾನ ಜಿಲ್ಲೆಗೆ ಬಂದಿಲ್ಲ ಅನುಧಾನ ಬಿಡುಗಡೆಯಾಗಿರುವುದನ್ನು ದಾಖಲೆ ಸಮಿತಿ ತೋರಿಸಲಿ ತಂಗಡಿ ಕನಕಗಿರಿಗೆ ಮಾತ್ರ ಮಂತ್ರಿಯಾಗಿದ್ದರೆ. ರಾಜ್ಯಕ್ಕಲ್ಲ ಕೊಪ್ಪಳಕ್ಕೆ ಅಂತೂ ಅಲ್ಲವೇ ಅಲ್ಲ ಎಂದು ಮಾತನಾಡಿದರು. ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪ ಆಚಾರ ಮಾತನಾಡಿ ಈ ದೇಶದಲ್ಲಿ ಮೋದಿ ಅಲೆ ಪ್ರಾರಂಭವಾಗಿದೆ ಕಾರ್ಯಕರ್ತರು ಹಿಂದಿನ ಅಭಿವೃದ್ದಿ ಕಾರ್ಯಗಳನ್ನು ಹಿಡಿದು ಸಂಘಟನೆಯಲ್ಲಿ ತೋಡಬೇಕೆಂದು ಹೇಳಿದರು. ಸಂಸದರಾದ ಶಿವರಾಮಗೌಡ ಮಾತನಾಡಿ ಹಿಂದಿನ ಕೇಂದ್ರ ಹಾಗೂ ರಾಜ್ಯ ಸರಕಾರ ಜನಪರವಾದ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಯು.ಪಿ.ಎ ಸರಕಾರದ ಮುಂದೆ ನೆಲಕಚ್ಚುವುದು ಖಚಿತ ಎಂದು ಹೇಳಿದರು. 
ಶಾಸಕರಾದ ದೊಡ್ಡನಗೌಡ ಪಾಟೀಲ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಕೊಪ್ಪಳ ಲೋಕಸಭ ಪ್ರಭಾರಿ ಗಿರಿಗೌಡ್ರ, ರಾಯಚೂರು ಲೋಕಸಬಾ ಪ್ರಭಾರಿ ಅಶೋಕ ಘಸ್ತಿ, ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಂಡೇಶ ವಲಕದಿನ್ನಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು  ನರಂಸಿಹರಾವ ಕುಲಕರ್ಣಿ ನಿರೂಪಿಸದರು. ಜಿಲ್ಲಾ ಕಾರ್ಯದರ್ಶಿ ಸದಾಶಿವಯ್ಯ ವಂಧಿಸಿದರು ಮತ್ತು ಜಿಲ್ಲಾ ಎಲ್ಲಾ ಮೋರ್ಚಾದ ಅಧ್ಯಕ್ಷರು/ಪದಾಧಿಕಾರಿಗಳು ಹಾಗೂ  ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಉಪಸ್ಥಿತರಿದ್ದರು. 
Please follow and like us:
error