“ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ” ಕುರಿತು ವಿಚಾರ ಸಂಕಿರಣ

 ನಾಗರಿಕ ಹಕ್ಕುಗಳಿಗಾಗಿನ ಜನರ ಸಂಘಟನೆ (ಪಿಯುಸಿಎಲ್) ಹಾಗು ಕೊಪ್ಪಳದ ಪ್ರಗತಿಪರ ಸಂಘಟನೆಗಳಿಂದ ಮೇ ೧೮ ಭಾನುವಾರದಂದು ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ,೩೭೧ನೇ ಕಲಂ ಜಾರಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದೇವದಾಸಿ ಸಮಸ್ಯೆ ,ಹೊಸ್ಕೇರಾ ಕ್ಯಾಂಪ್ ಹಾಗೂ ಭಾಗ್ಯನಗರ ಕಂದಾಯ ಗ್ರಾಮ ಘೋಷಣೆ ಸಮಸ್ಯೆ ಕುರಿತು ಅವತ್ತು ಉಪನ್ಯಾಸಗಳು ನಡೆಯಲಿವೆ. ಕಾರ‍್ಯಕ್ರಮದ ರೂಪುರೇಷೆಗಳ ಕುರಿತು ಪೂರ್ವ ಸಿದ್ದತಾ ಸಭೆಯನ್ನು ಭಾಗ್ಯನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. 
ವಿಚಾರ ಸಂಕಿರಣದ ಕಾರ‍್ಯಕ್ರಮಗಳ ಹಾಗೂ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬೆಂಗಳೂರಿನ ವಾಯ್.ಜೆ.ರಾಜೇಂದ್ರ, ಕೊಪ್ಪಳ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಜೆ.ಭಾರದ್ವಾಜ, ಡಿ.ಎಚ್.ಪೂಜಾರ್, ಸಹ ಕಾರ‍್ಯದರ್ಶಿ ಸಿರಾಜ್ ಬಿಸರಳ್ಳಿ, ರಾಜಾಹುಸೇನ ಮಂಗಳಾಪೂರ, ರಘು ಕಾಸನಕಂಡಿ, ಶ್ರೀಮತಿ ಮಂಜುಳಾ, ಯಮನೂರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಅಲ್ಲಾಗಿರಿರಾಜ್ ಹಾಗೂ ವಂದನಾರ್ಪಣೆಯನ್ನು ರಾಜಾಬಕ್ಷಿ ಎಚ್.ವಿ. ಮಾಡಿದರು. 
Please follow and like us:
error