fbpx

ಜನತಾ ದರ್ಶನದಲ್ಲಿ ಕೊಪ್ಪಳ ಜಿಲ್ಲೆಯ ಕುಂದು ಕೊರತೆಗಳ ಬಗ್ಗೆ ಕರವೇ ಮನವಿ

 ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕೊಪ್ಪಳ ಜಿಲ್ಲಾ ಅದ್ಯಕ್ಷರು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ ಕೆ;ಲವೊಂದು ಸಂಬಂಧಪಟ್ಗಟ ಸರ್ಕಾರಿ ಅದಿಕಾರಿಗಳಿಗೆ ಹಲವಾರು ಮನವಿ ಪತ್ರವು ಸಲದಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತಮ್ಮ ಸರ್ಕಾರಸ ಜನತಾ ಸಂದರ್ಶನ ವೇಳೆಯಲ್ಲಿ ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕಗಳ ಕೆಲವೊಂದು ಮಹತ್ವವಾದ ಕುಂದು ಕೊರತೆಗಳನ್ನು ತರಲಿಕ್ಕೆ ಇಚ್ಚಿಸುತ್ತೆನೆ. 
ಈ ಕೆಳಕಂಡ ವಿಷಯಗಳನ್ನು;-
೧. ಕೊಪ್ಪಳ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-೬೩ರ ನವೀಕರಣದ ಕಾಮಗಾರಿಯು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.
೨. ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯದ ಶೇಖರಣೆಯ ಮಟ್ಟವನ್ನು ಎತ್ತರಪಡಿಸಬೇಕು. ಅದರ ನೀರನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಬೆಕು.
೩. ಕೊಪ್ಪಳ ಜಿಲ್ಲೆಯ ತಾಲೂಕಗಳಲಲಿ ಜಿಲ್ಲಾ ಆಸ್ಪತ್ರೆಗೆ ಮೂಲಬೂತ ಸೌಕರ್ಯಗಳನನು ಒದಗಿಸಬೇಕು. ಹಾಗೂ ವೈದ್ಯರು ನೇಮಕ ಮಾಡಬೇಕು.
೪. ರೇಲ್ವೆ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದ್ದು, ಅತೀ ಶೀಘ್ರದಲ್ಲೆ   ಪೋಣ್ಗೊಳಿಸಬೇಕು.
೫. ಕೊಪ್ಪಳ ಜಿಲ್ಲೆಯ ಭಾಗ್ಯನಗರಸ ಗ್ರಾಂದ ವಿಜಯನಗರ ಬಡಾವಣೆಯ ಸಿ.ಸಿ.ರೋಡ್ ಕಳಪೆಮಟ್ಟದ್ದಾಗಿದ್ದು, ಹಾಗು ಹಿಟ್ನಾಳ ಹೋಬಳಿಯ ಸಿ.ಸಿ. ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ತನಿಖೆ ಮಾಡಿಸಿ, ಸಂಬಂಧಪಟ್ಟ ಗುತ್ತಿಗೆದಾರರೇ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.
೬. ಕೊಪ್ಪಳ ತಾಲೂಕಿನ ಇರಕಲ್‌ಗಡಾ ಹೋಬಳಿಯ ಸುಲ್ತಾನಪುರ ಗ್ರಾಮದ ಸರ್ವೇ ನಂ.೧೪/೨ ರಲ್ಲಿನ ೭ಎಕರೆ ೩೯ ಗುಂಟೆಯ ಭೂಮಿಯನ್ನು ಖುಷ್ಕಿ ಜಮೀನು ಎಂದು ಸುಳ್ಳು ಮಾಹಿತಿ ನೀಡಿ ನೋಂದಾವಣಿ ಮಾಡಿ ವಾಸ್ತವ ಸತ್ಯವನ್ನು ಮರೆಮಾಚಿ ಸರಕಾರಕ್ಕೆ ಸೇರಬೇಕಾದ ನೋಂದಾವಣೆಯ ಶುಲ್ಕ ವಂಚಿಸಿರುವುದು ದೃಢಪಟ್ಟಿದ್ದು, ಈ ಆಸ್ತಿಯನ್ನು ಸರಕಾರ ಮುಟ್ಟುಗೊಲು ಹಾಕಿಕೊಳ್ಳಬೇಕು.
೭. ಗಂಗಾವತಿ ತಾಲೂಕಿನ ಬಾಲಾಜಿ ಗ್ಯಾಸ್ ಕಂಪನಿಯು ಸಾರ್ವಜನಿಕರಿಗೆ ಸರ್ಕಾರ ನಿಗದಿಪಡಿಸಿದ ದರಕಿಂತ ಹೆಚ್ಚಿನ ದರಗಳಲಲಿ ಗ್ಯಾಸನ್ನು ಮಾರಾಟ ಮಾಡಿ ಹಾಗು ಗ್ಯಾಸ ಒಲೆಯನ್ನು ಕಡ್ಡಾಯವಾಗಿ ತೆಗೆದುಕೊ:ಳ್ಳಬೇಕೆಂದು ಗ್ರಾಹಕರ ಮೇಲೆ ಒತ್ತಡಹಾಕಿ ಒಬ್ಬ ಗ್ರಾಹಕರಿಗೆ ರೂ.೧೪೦೦/ವರೆಗೂ ವಂಚಿಸುತ್ತಿದ್ದಾರೆ. ಗ್ಯಾಸ ಸಂಗ್ರಹಣೆ ಮಾಡುವ ಸ್ಥಳ ಸುವ್ಯವಸ್ಥಿತವಾಗಿಲ್ಲ. ಅದನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು, ಕಂಪನಿ ಹೊರಗೆ ಮತ್ತು ಒಳಗಡೆ ಕನ್ನಡದ ನಾಮಪಲಕವನ್ನು ಹಾಕದೆ ಇರುವುದು ಖಂಡನೀಯ ಕನ್ನಡಿಗರಿಗೂ ಸಹ ಉದ್ಯೋಗವಿಲ್ಲ.
೮. ಗಂಗಾವತಿ ನಗರದ ವಿಜಯನಗರದ ಸಾಮ್ರಾಜ್ಯದ ಶ್ರೀ ಪ್ರಸನ್ನ ಪಂಪವಿರುಪಾಕ್ಷ ಭೂಮಿ ಮತ್ತು ಜಮೀನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡಿರುತ್ತಾರೆ ಇದನ್ನ  ತನಿಖೆ ಮಾಡಿ ಸರಕಾರ ಸ್ವಾದೀನ ಪಡಿಸಿಕೊಳ್ಳಬೇಕು.
೯. ಕೊಪ್ಪಳ ಜಿಲ್ಲೆಯ ಒಳಪಟ್ಟಿರುವ ಕೆಲವೊಂದು ಸ್ಮಾರಕಗಳನ್ನು ಉದಾ:- ಗಂಡುಗಲಿ ಕುಮಾರರಾಮ (ಜಬ್ಬಲಗುಡ್ಡ), ಆನೆಗೊಂದಿ ಸುತ್ತಮುತ್ತ ತಾವರಗೇರಾ, ಕೊಪ್ಪಳ ನಗರದ ಶ್ರೀ ಮಳೆಮಲ್ಲೇಶ್ವರ ದೇವಾಸ್ಥಾನ, ಕನಕಗಿರಿ ಭಾಗದ ವೆಂಕಟಾಚಲಪತಿ ದೇವಸ್ತಾನ ಸುತ್ತಮುತ್ತ ಸ್ಮಾರಕಗಳನ್ನು ಸರಕಾರವು ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಹಾಗೂ ಸ್ಮಾರಕಗಳನ್ನು ಕಲ್ಲು ಗಣಿಗಾರಿಕೆಯ ಕಳ್ಳರಿಂದ ರಕ್ಷಣೆ ಮಾಡಬೇಕು.
೧೦. ಕೊಪ್ಪಳ ಜಿಲ್ಲೆಯ ಎಲ್ಲ ಕಾರ್ಖಾನೆಗಳಲ್ಲಿ ಡಾ.ಸರೋಜಿನಿ ಮಹಿಶಿ ವರದಿಯನ್ನು ಜಾರಿಗೊಳಿಸಿ ಕನ್ನಡಿಗರಿಗೂ ಮತ್ತು ಸ್ಥಳೀಯರಿಗೂ ಉದ್ಯೋಗವಕಾಶ ಕಲ್ಪಸಿಕೊಡಬೆಕು. 
 ಈ ಎಲ್ಲಾ ಬೇಡಿಕೆಗಳಿಗೆ ನಮ್ಮ ವೇದಿಕೆ ಮೂಲಕ ಸಾಕಷ್ಟು ಬಾರಿ  ಪ್ರತಿಭಟಿಸಿದರೂ ಯಾವುದೆ ಅಧಿಕಾರಿ ಹಾಗೂ ಜನಪ್ರತಿನಿಧಿ ಸ್ಪಂದಿಸದೇ ಇರುವುದು ಖೇದಕರ, ಈ ಕೂಡಲೇ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಬೇಕು ಇಲ್ಲದಿದ್ದರರೆ ಮುಂದಿನ ದಿನಗಳಲ್ಲಿ ನಮ್ಮ ವೇದಿಕೆ ಮೂಖಾಂತರ ಜಿಲ್ಲೆದ್ಯಾಂತ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೆವೆ.
ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ 
ವೇದಿಕೆಯ ಅಧ್ಯಕ್ಷರು ಪಂಪಣ್ಣನಾಯಕ, ಶಿವುನಗೌಡ ಪಾಟೀಲ ಹಲಗೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿರವರು, ಆರ್.ವಿಜಯಕುಮಾರ,  ಬಿ.ಗಿರಿಶಾನಂದ ಜ್ಞಾನಸುಂದರ, ಮಾರುತಿ ಹಡಪದ, ಹನುಮೇಶ ಬೂದಗುಂಪಿ ಉಪಸ್ಥತರಿದ್ದರು.
Please follow and like us:
error

Leave a Reply

error: Content is protected !!